ಬಾಲ್ಯದಲ್ಲೇ ರಸ್ತೆ ಸುರಕ್ಷತೆ ಶಿಕ್ಷಣ ಅಪೇಕ್ಷಣೀಯ Workshop

ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಮಕ್ಕಳ ಸಮಸ್ಯೆ ವರದಿಗಾರಿಕೆ ಕುರಿತ ಪತ್ರಕರ್ತರ ಪುನರ್ಮನನ ಕಾರ್ಯಾಗಾರದಲ್ಲಿ ಪ್ರೊಸುನ್ ಸೇನ್, ಪ್ರೊ.ಎಂ.ಎಸ್. ಸಪ್ನಾ, ಡಾ. ಶಿವಕುಮಾರ ಕಣಸೋಗಿ ಹಾಗೂ ಶಿಬಿರಾರ್ಥಿಗಳಿದ್ದರು.Workshop
ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಮಕ್ಕಳ ಸಮಸ್ಯೆ ವರದಿಗಾರಿಕೆ ಕುರಿತ ಪತ್ರಕರ್ತರ ಪುನರ್ಮನನ ಕಾರ್ಯಾಗಾರದಲ್ಲಿ ಪ್ರೊಸುನ್ ಸೇನ್, ಪ್ರೊ.ಎಂ.ಎಸ್. ಸಪ್ನಾ, ಡಾ. ಶಿವಕುಮಾರ ಕಣಸೋಗಿ ಹಾಗೂ ಶಿಬಿರಾರ್ಥಿಗಳಿದ್ದರು.Workshop
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಶ್ರೀಧರ ಮ್ಯಾವಂಕಿ ಪ್ರತಿಪಾದನೆ
  • ಪತ್ರಕರ್ತರ ಪುನರ್ಮನನ ಕಾರ್ಯಾಗಾರ
ದಾವಣಗೆರೆ: ರಸ್ತೆ ಸುರಕ್ಷತೆ ಕುರಿತು ಮಕ್ಕಳಿಗೆ ಬಾಲ್ಯದಲ್ಲಿಯೇ ಶಿಕ್ಷಣ ನೀಡುವುದು ಅಗತ್ಯ ಎಂದು ಯುನಿಸೆಫ್ ವೈದ್ಯಕೀಯ ಸಲಹೆಗಾರ ಡಾ. ಶ್ರೀಧರ ಮ್ಯಾವಂಕಿ ಪ್ರತಿಪಾದಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಗುರುವಾರ ಮೈಸೂರು ವಿಶ್ವವಿದ್ಯಾಲಯ, ಯುನಿಸೆಫ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಮಸ್ಯೆಗಳ ಕುರಿತು ಪತ್ರಕರ್ತರಿಗಾಗಿ ಆಯೋಜಿಸಿದ್ದ ಪುನರ್ಮನನ ಕಾರ್ಯಾಗಾರದಲ್ಲಿ ಮಾತನಾಡಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಹನ ಸಂಚಾರ ದಿನೇದಿನೆ ಹೆಚ್ಚುತ್ತಿದ್ದು, ಮಕ್ಕಳ ರಸ್ತೆ ಸುರಕ್ಷತೆ ಪ್ರಮುಖ ಚಿಂತನೆಯ ವಿಷಯವಾಗಿದೆ. ಪೊಲೀಸ್ ಮತ್ತು ಸಾರಿಗೆ ಇಲಾಖೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಮಕ್ಕಳ ಪ್ರಮಾಣ ಆತಂಕಕಾರಿ ಮಟ್ಟದಲ್ಲಿದೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಕೂರಿಸುವುದು, ಪಾದಚಾರಿ ಮಾರ್ಗವನ್ನು ಬಳಸದಿರುವುದು, ಶಾಲೆಗಳ ಮುಂದೆ ವೇಗ ನಿಯಂತ್ರಣದ ಕೊರತೆ ಇವು ಪ್ರಮುಖ ಸಮಸ್ಯೆಗಳಾಗಿವೆ ಎಂದು ಹೇಳಿದರು.
ಶಾಲಾ ಮಟ್ಟದಲ್ಲಿ ರಸ್ತೆ ನಿಯಮ, ಟ್ರಾಫಿಕ್ ಸಂಕೇತ, ಪಾದಚಾರಿ ನಿಯಮಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಬೇಕು. ಜತೆಗೆ ಪಾಲಕರು ಮಕ್ಕಳಿಗೆ ಮಾದರಿ ಯಾಗುವಂತೆ ನಿಯಮ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ರಸ್ತೆ ಸುರಕ್ಷತೆ ನಿಯಮ ಸಾಮಾಜಿಕ ಹೊಣೆಗಾರಿಕೆ ಯಾಗಿ ಪರಿಗಣಿಸಬೇಕಾ ಗಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಶಾಲೆಗಳ ಸಮೀಪ ಸ್ಪೀಡ್ ಬ್ರೇಕರ್, ಜೀಬ್ರಾ ಕ್ರಾಸಿಂಗ್, ಸೂಚನಾ ಫಲಕಗಳು ಮತ್ತು ಟ್ರಾಫಿಕ್ ವಾರ್ಡನ್‌ಗಳ ನಿಯೋಜನೆಗೆ ಆದ್ಯತೆ ನೀಡಬೇಕು. ಸಾರ್ವಜನಿಕರ ಸಹಕಾರದಿಂದ ಮಕ್ಕಳಿಗೆ ಸುರಕ್ಷಿತ ಪರಿಸರವನ್ನು ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು. ಯುನಿಸೆಫ್ ಅಧಿಕಾರಿ ಪ್ರೊಸುನ್ ಸೇನ್ ಶಿಬಿರಾರ್ಥಿ ಗಳು ಪ್ರಮಾಣ ಪತ್ರ ವಿತರಿಸಿದರು. ದಾವಣಗೆರೆ ವಿಶ್ವ ವಿದ್ಯಾನಿಲಯದ ಪ್ರಾಧ್ಯಾ ಪಕರಾದ ಡಾ. ಶಿವಕುಮಾರ ಕಣ ಸೋಗಿ, ಡಾ.ಎಂ. ವಿನಯ್, ಡಾ.ಜೆ.ಎಂ. ಚಂದ್ರಲೇಖ ಉಪಸ್ಥಿತರಿದ್ದರು.

ವರದಿಗಳಲ್ಲಿ ನಿಖರ ದತ್ತಾಂಶ ಮುಖ್ಯ

ಬಾಲಕಾರ್ಮಿಕತೆ, ಪೌಷ್ಟಿಕಾಂಶ ಕೊರತೆ, ಶಿಕ್ಷಣದಿಂದ ವಂಚನೆ, ಬಾಲ್ಯವಿವಾಹ ಮತ್ತು ಡಿಜಿಟಲ್ ದುರುಪ ಯೋಗದಂತಹ ವಿಷಯಗಳನ್ನು ವರದಿ ಮಾಡುವಾಗ ನಿಖರ ದತ್ತಾಂಶ ಮತ್ತು ಸತ್ಯಶೋಧನೆಗೆ ಒತ್ತು ನೀಡಬೇಕು ಎಂದು ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಪ್ರೊ.ಎಂ.ಎಸ್. ಸಪ್ನಾ ಹೇಳಿದರು.
ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ವರದಿಗಾರಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ವರದಿಗಾರಿಕೆ ವೇಳೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ, ಯುನಿಸೆಫ್, ಎನ್‌ಸಿಆರ್‌ಬಿ, ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳ ದತ್ತಾಂಶ ಮೂಲಗಳನ್ನು ಅವಲಂಬಿಸಬೇಕು. ಜತೆಗೆ ಸ್ಥಳೀಯ ಆಡಳಿತ, ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಎನ್‌ಜಿಒಗಳ ಮಾಹಿತಿಯೂ ಉಪಯುಕ್ತವಾಗುತ್ತದೆ ಎಂದು ವಿವರಿಸಿದರು. ನಿಖರತೆ, ಸಂವೇದನಾಶೀಲತೆ ಮತ್ತು ಹೊಣೆಗಾರಿಕೆಯೊಂದಿಗೆ ಮಾಡಿದ ವರದಿ ಮಕ್ಕಳ ಹಿತಾಸಕ್ತಿಗೆ ಹಾಗೂ ಸಮಾಜದ ಜಾಗೃತಿಗೆ ದಾರಿ ಮಾಡಿಕೊಡುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net