

ಪ್ರಮುಖ ಮುಖ್ಯಾಂಶಗಳು
ದಾವಣಗೆರೆ: ಸಮಾಜದ ಹೊಸ ದೃಷ್ಟಿಕೋನಕ್ಕಾಗಿ ಪತ್ರಕರ್ತರು ಒಳ್ಳೆಯ ಸುದ್ದಿಗಳಿಗೆ ಮಹತ್ವ ನೀಡಬೇಕು. ಓದುಗರ ಅಭಿರುಚಿ ಕೆಟ್ಟಿದ್ದರೂ ಅದನ್ನು ಸರಿಮಾಡುವತ್ತ ಪತ್ರಕರ್ತರು ಒಮ್ಮತದ ಸಂಕಲ್ಪ ಮಾಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮನಸ್ಸಿನ ನೆಮ್ಮದಿಗೆ ಪತ್ರಿಕೆ ಓದಿ
ಪತ್ರಕರ್ತರಿಗೆ ಬೇಕಿದೆ ಸರ್ಕಾರದ ಬೆಂಬಲ
ಇಂದು ದೃಶ್ಯ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್, ಫಾಸ್ಟ್ ನ್ಯೂಸ್‌ಗಳು ಎಷ್ಟೇ ವೇಗವಾಗಿ ಹರಿದಾಡಿದರೂ ಬೆಳಗ್ಗೆ ಪತ್ರಿಕೆ ಓದಿದಾಗಲೆ ಸುದ್ದಿಯ ಬಗ್ಗೆ ಖಾತರಿ ಸಿಗಲಿದೆ. ಊಟದ ಬಳಿಕ ಮೊಸರನ್ನ ಸವಿದಂತೆ ಪತ್ರಿಕೆಗಳು ಬೇಕು. ಒಂದು ದಿನ ಮನೆಗೆ ಅವು ಬರದೇಹೋದರೂ ಆ ದಿನ ಅಪೂರ್ಣ ಎನಿಸುತ್ತದೆ ಎಂದರು.
ಇಂದು ಅನೇಕ ಪತ್ರಕರ್ತರ ಆರೋಗ್ಯ ಸ್ಥಿತಿ ಉತ್ತಮವಾಗಿಲ್ಲ. ಅವರಿಗೆ ಸಮಾಜ, ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಮಾಧ್ಯಮ ಕ್ಷೇತ್ರಕ್ಕೆ ಹೊಸ ಪೀಳಿಗೆ ಬರುತ್ತಿಲ್ಲ. ಇಂದಿನ ಪತ್ರಿಕೋದ್ಯಮ ಕವಲು ಹಾದಿಯಲ್ಲಿದೆ. ರೋಚಕ ಸುದ್ದಿಗಳನ್ನು ನೀಡುವ ಧಾವಂತದಲ್ಲಿ ಅಭಿವೃದ್ಧಿ, ಪರಿಸರ ಹಾಗೂ ಕೃಷಿ ಪತ್ರಿಕೋದ್ಯಮ ಮಾಯವಾಗಿದೆ. ಕ್ರೀಡಾ ವಿಭಾಗದಲ್ಲೂ ಕ್ರಿಕೆಟ್ ಹೊರತಾಗಿ ಇತರೆ ಆಟಗಳಿಗೆ ಮಾನ್ಯತೆ ಸಿಗುತ್ತಿಲ್ಲ ಎಂದು ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ವಿಷಾದ ವ್ಯಕ್ತಪಡಿಸಿದರು.