ಮೀಸಲಾತಿ ಹೋರಾಟ ತಾತ್ಕಾಲಿಕ ಸ್ಥಗಿತ

ದಾವಣಗೆರೆ ಜಯದೇವ ವೃತ್ತದಲ್ಲಿ ಶುಕ್ರವಾರ, ಒಳಮೀಸಲಾತಿ ವಿಚಾರವಾಗಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು. ಆಲೂರು ನಿಂಗರಾಜ್, ಎಚ್. ಮಲ್ಲೇಶ್, ಬಸವರಾಜ್, ದುರ್ಗೇಶ್, ಗುಡ್ಡಪ್ಪ, ಹಾಲೇಶ್, ರಾಮಚಂದ್ರಪ್ಪ, ರಾಘವೇಂದ್ರ, ರವಿ, ಮಲ್ಲಿಕಾರ್ಜುನ, ಮೈಲಾರಪ್ಪ, ದಾಸಪ್ಪ, ಕುಬೇರಪ್ಪ, ಪ್ರಶಾಂತ್, ದುಗ್ಗಪ್ಪ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮುಖಂಡ ಆಲೂರು ನಿಂಗರಾಜ್ ಹೇಳಿಕೆ
  • ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ
ದಾವಣಗೆರೆ : ಒಳಮೀಸಲಾತಿ ಸಂಬಂಧ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನದಿಂದ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ, ಆದರೂ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಡುದಾಗಿ ಡಿಎಸ್‌ಎಸ್ ಹಾಗೂ ಬಿಜೆಪಿ ಮುಖಂಡ ಆಲೂರು ನಿಂಗರಾಜ್ ಹೇಳಿದ್ದಾರೆ.
ಪರಿಶಿಷ್ಟ ಜಾತಿಯ ಎಡಗೈ ಶೇ. 5.25, ಬಲಗೈ ಶೇ. 5.25 ಹಾಗೂ ಇತರೆ ಶೇ. 4.50 ಒಳಮೀಸಲಾತಿ ಜಾರಿಗೆ ತೀರ್ಮಾನಿಸಲಾಗಿದೆ. ಇದರಿಂದ ಎಡಗೈ ಮಾದಿಗ ಸಮುದಾಯಕ್ಕೆ ಶೇ. 1ರಷ್ಟು ಮೀಸಲಾತಿ ಅನ್ಯಾಯವಾಗಿದೆ, ಮೀಸಲಾತಿ ಪ್ರವರ್ಗ ‘ಎ’ನಲ್ಲಿ ನಮ್ಮ ಸಮುದಾಯ ಬರಬೇಕಾಗಿತ್ತು ಎಂದು ತಿಳಿಸಿದ್ದಾರೆ.
ಸರ್ಕಾರವು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯನ್ನು ರಚಿಸಿ, ಸಮೀಕ್ಷೆಯ ಆಧಾರದ ಮೇಲೆ ಮೀಸಲಾತಿ ಪ್ರಮಾಣವನ್ನು ಪರಿಷ್ಕರಿಸಲು ಮುಂದಾಗಿರುವುದು ಸಮಾಧಾನ ತಂದಿರುವುದಿಲ್ಲ. ಒಳಮೀಸಲಾತಿ ವರ್ಗೀಕರಣದಲ್ಲಿನ ಗೊಂದಲದಿಂದಾಗಿ ನೇಮಕಾತಿ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಿದೆ, ಇದು ಹೋರಾಟಗಾರರಲ್ಲಿ ಅಸಮಾಧಾನವನ್ನು ಹೆಚ್ಚಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net