ಬಿಎಲ್‌ಒಗಳಿಗೆ ಮಾಹಿತಿ ನೀಡಿದ ಅವರು, ಹಳೆಯ ಪಟ್ಟಿಯಲ್ಲಿರುವ ಕುಟುಂಬದ ಸದಸ್ಯರ ವಿವರಗಳನ್ನು 2022 ಹಾಗೂ ಮುಂಬರುವ 2025ರ ಮತದಾರರ ಪಟ್ಟಿಗೆ ಜೋಡಣೆ (ಮ್ಯಾಪಿಂಗ್) ಮಾಡಬೇಕು. ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗದಿದ್ದಲ್ಲಿ, ಅವರ ತಂದೆ, ತಾಯಿ, ಅಜ್ಜ ಅಥವಾ ಅಜ್ಜಿ ಮತದಾನ ಮಾಡುವ ಮತಗಟ್ಟೆ ಭಾಗದ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊಂದಿಗೆ ಜೋಡಣೆ ಮಾಡಬೇಕು ಎಂದು ಸೂಚಿಸಿದರು.