ರೈಲ್ವೆ ಕೆಳ ಸೇತುವೆ ರಸ್ತೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ protest

ಹರಿಹರದ ಹರಪನಹಳ್ಳಿ ಹೆದ್ದಾರಿ ರೈಲ್ವೆ ಕೆಳ ಸೇತುವೆ ರಸ್ತೆ ದುರಸ್ತಿಗೆ ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜವಾದಿ ಪಾರ್ಟಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಡಿ. ಹನುಮಂತಪ್ಪ, ಐರಣಿ ಹನುಮಂತಪ್ಪ, ಆರ್. ಶ್ರೀನಿವಾಸ್ ಇದ್ದರು.protest
ಹರಿಹರದ ಹರಪನಹಳ್ಳಿ ಹೆದ್ದಾರಿ ರೈಲ್ವೆ ಕೆಳ ಸೇತುವೆ ರಸ್ತೆ ದುರಸ್ತಿಗೆ ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜವಾದಿ ಪಾರ್ಟಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಡಿ. ಹನುಮಂತಪ್ಪ, ಐರಣಿ ಹನುಮಂತಪ್ಪ, ಆರ್. ಶ್ರೀನಿವಾಸ್ ಇದ್ದರು.protest
Published on
ಹರಿಹರ: ನಗರದ ಹರಪನಹಳ್ಳಿ ಹೆದ್ದಾರಿ ರೈಲ್ವೆ ಕೆಳ ಸೇತುವೆ ರಸ್ತೆ ದುರಸ್ತಿಗೆ ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜವಾದಿ ಪಾರ್ಟಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಸೋಮವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. protest
ಸ್ಥಳಕ್ಕೆ ಆಗಮಿಸಿದ್ದ ನಗರಸಭೆ ಎಇಇ ವಿನಯ್‌ಕುಮಾರ್ ಮಾತನಾಡಿ, ಸೇತುವೆ ಮಧ್ಯಭಾಗದಲ್ಲಿರುವ ಚರಂಡಿಯು ಹಲವು ದಶಕಗಳ ಹಿಂದೆ ರಚಿಸಿದ್ದು, ಕಿರಿದಾಗಿದೆ. ಅಲ್ಲಿ ಹೊಸದಾಗಿ ದೊಡ್ಡ ಗಾತ್ರದ ಚರಂಡಿ ನಿರ್ಮಿಸಿದರೆ ಮಳೆ ನೀರು ಹಾಗೂ ಇತರ ತ್ಯಾಜ್ಯ ಸರಾಗವಾಗಿ ಸಾಗುತ್ತದೆ ಎಂದರು.
ಲೋಕೋಪಯೋಗಿ ಇಲಾಖೆ ಎಇಇ ಮರಿಸ್ವಾಮಿ ಮಾತನಾಡಿ, ನೆಲದಾಳದಲ್ಲಿ ಹೊಸ ಚರಂಡಿ ನಿರ್ಮಾಣಕ್ಕೆ 40 ರಿಂದ 50 ರೂ. ಲಕ್ಷದವರೆಗೆ ಅನುದಾನ ಬೇಕು, ಕಾಮಗಾರಿ ನಡೆಸಲು ತಿಂಗಳು ಕಾಲ ವಾಹನ ಸಂಚಾರ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಹೇಳಿದರು.
ಬಿಎಸ್‌ಪಿ ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ ಮಾತನಾಡಿ, ಬಹು ಹಿಂದೆಯೇ ಆಗಬೇಕಿದ್ದ ಕಾಮಗಾರಿ ಮಾಡದಿರುವುದರಿಂದ ನಗರದ ಜನತೆ ಪ್ರತಿ ಮಳೆಗಾಲದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. 10 ನಿಮಿಷ ಮಳೆ ಬಂದರೂ 2 ಗಂಟೆ ವಾಹನ ಸಂಚಾರ ನಿಲ್ಲುತ್ತದೆ. ರಾಜ್ಯ ಹೆದ್ದಾರಿಯಾಗಿರುವುದರಿಂದ ದಿನಕ್ಕೆ 20 ಸಾವಿರಕ್ಕೂ ಹೆಚ್ಚಿನ ವಾಹನ ಸಂಚಾರವಿದೆ ಎಂದರು.
ಸೇತುವೆ ಮಧ್ಯ ಭಾಗದ ರಸ್ತೆ ಗುಂಡಿ ಮಯವಾಗಿದ್ದು ಅಪಘಾತಗಳಲ್ಲಿ ಕೈ, ಕಾಲು ಮುರಿದುಕೊಳ್ಳುವುದು ಸಾಮಾನ್ಯವಾಗಿದೆ. ಈ ಸಮಸ್ಯೆ ನಿವಾರಣೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗದಿರುವುದು ಹರಿಹರ ಜನತೆಯ ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆಯವರು ಸೇರಿ ಮೇ 25ರೊಳಗೆ ಸಮಸ್ಯೆ ಪರಿಹರಿಸದಿದ್ದರೆ, ಮತ್ತೆ ರಸ್ತೆ ತಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಘೋಷಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳಾದ ಐರಣಿ ಹನುಮಂತಪ್ಪ, ಆರ್. ಶ್ರೀನಿವಾಸ್, ಜಬಿಉಲ್ಲಾ, ಎಂ.ಆರ್. ಆನಂದ್ ಕುಮಾರ್, ಅನಿಲ್, ರವಿ, ಸಂತೋಷ್, ಅವಿನಾಶ್, ಬೆನಕೇಶ, ಮಂಜುನಾಥ್ ನಡುವಲಕೇರಿ, ಸಂತೋಷ್ ನೋಟದವರ್, ಸೈಯದ್ ಸಲೀಂ ನಾಲಬಂದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net