ಮಾಯಕೊಂಡ ಮುಖ್ಯ ರಸ್ತೆಯಿಂದ ಹೊರವಲಯದ ಮಂಡ್ಯ-ಹಡಗಲಿ ರಾಜ್ಯ ಹೆದ್ದಾರಿ ಸಂಪರ್ಕಿಸುವ ರಸ್ತೆಯನ್ನು ನೂತನವಾಗಿ ನಿರ್ಮಿಸುವಂತೆ ಆಗ್ರಹಿಸಿ ಸೋಮವಾರ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಎಂ.ಜಿ. ಗುರುನಾಥ್, ಜಿ.ಬಿ. ಮಲ್ಲೇಶ್, ಮಾಲತೇಶ್, ದ್ವಾರಕಾನಾಥ್, ಆಶಾ ಇತರರಿದ್ದರು.protest
ಮಾಯಕೊಂಡ: ಗ್ರಾಮದ ಮೂಲಕ ಹಾದುಹೋಗಿ ರುವ ಹೊಸದುರ್ಗ- ದಾವಣಗೆರೆ ಜಿಲ್ಲಾ ಮುಖ್ಯ ರಸ್ತೆಯಿಂದ, ಗ್ರಾಮದ ಹೊರವಲಯದ ಮಂಡ್ಯ-ಹಡಗಲಿ ರಾಜ್ಯ ಹೆದ್ದಾರಿ-47ನ್ನು ಸಂಪರ್ಕಿ ಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ನೂತನ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಮಾಯಕೊಂಡ ಗ್ರಾಮಸ್ಥರು ಸೋಮವಾರ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. protest
ಮಾಯಕೊಂಡ ಗ್ರಾಮದಿಂದ ಹೊರವಲಯದ ಮುಖ್ಯ ರಸ್ತೆಗೆ ಸುಮಾರು 1.5 ಕಿಮೀ. ದೂರವಿದ್ದು, ಈ ಇಡೀ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಸರ್ಕಾರ ಕೂಡಲೇ ರಸ್ತೆ ಮರು ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನೇತೃತ್ವ ವಹಿಸಿದ್ದ ಕನ್ನಡ ಯುವಶಕ್ತಿ ಕೇಂದ್ರದ ನಿಕಟಪೂರ್ವ ಅಧ್ಯಕ್ಷ ಎಂ.ಜಿ. ಗುರುನಾಥ್ ಮಾತನಾಡಿ, ಹೊಸದುರ್ಗ-ದಾವಣಗೆರೆ ಜಿಲ್ಲಾ ಮುಖ್ಯ ರಸ್ತೆಯಿಂದ ಮಂಡ್ಯ-ಹಡಗಲಿ ರಾಜ್ಯ ಹೆದ್ದಾರಿ ಸಂಪರ್ಕಿಸಿ ಮುಂದೆ ಅಣಬೇರು, ಬಾಡ ಮೂಲಕ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯನ್ನು ಈ ರಸ್ತೆ ಸಂಪರ್ಕಿಸುತ್ತದೆ. ಸುತ್ತಮುತ್ತಲಿನ ಹಲವು ಗ್ರಾಮಗಳ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನಿತ್ಯ ಇದೇ ರಸ್ತೆಯಲ್ಲೇ ಸಂಚರಿಸುತ್ತಾರೆ. ಹಲವು ವರ್ಷಗಳಿಂದ ರಸ್ತೆ ಹಾಳಾಗಿದ್ದರೂ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಮನ ಹರಿಸಿಲ್ಲ. ತಕ್ಷಣವೇ ನೂತನ ರಸ್ತೆ ನಿರ್ಮಾಣಕ್ಕೆ ಮುಂದಾಗದಿದ್ದರೆ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ದ್ವಾರಕಾನಾಥ್, ನಾಗರಾಜ್, ಜಿ.ಬಿ. ಮಲ್ಲೇಶ್, ಶಿವಮೂರ್ತಿ, ಹನಮಂತು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾಲತೇಶ್ ಇತರರಿದ್ದರು.