ಪಂಚ ಗ್ಯಾರಂಟಿಗಳ ಸಮರ್ಪಕ ನಿರ್ವಹಣೆ

ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ಸೋಮವಾರ ವಿವಿಧ ಕಾಮಗಾರಿಗಳಿಗೆ ಶಾಸಕ ಬಸವರಾಜ್ ಶಿವಗಂಗಾ ಗುದ್ದಲಿಪೂಜೆ ನೆರವೇರಿಸಿದರು. ಎಂ. ಸಿದ್ದಪ್ಪ, ಮೂರ್ತಪ್ಪ, ರೇಣುಕಾ ಮೂರ್ತಪ್ಪ, ಮಿನಾಕ್ಷಮ್ಮ ಕರಿಯಪ್ಪ, ಸಂತೋಷ್ ಇದ್ದರು.
ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ಸೋಮವಾರ ವಿವಿಧ ಕಾಮಗಾರಿಗಳಿಗೆ ಶಾಸಕ ಬಸವರಾಜ್ ಶಿವಗಂಗಾ ಗುದ್ದಲಿಪೂಜೆ ನೆರವೇರಿಸಿದರು. ಎಂ. ಸಿದ್ದಪ್ಪ, ಮೂರ್ತಪ್ಪ, ರೇಣುಕಾ ಮೂರ್ತಪ್ಪ, ಮಿನಾಕ್ಷಮ್ಮ ಕರಿಯಪ್ಪ, ಸಂತೋಷ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆ
  • ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಭೂಮಿಪೂಜೆ
  • ಸಂತೇಬೆನ್ನೂರಿಂದ ಕೆಬಿ ಗ್ರಾಮದವರೆಗೆ ಚತುಷ್ಪಥ ರಸ್ತೆ
ಚನ್ನಗಿರಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎನ್ನುವ ಆರೋಪ ಸುಳ್ಳು ಮಾಡಿ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕೆಲಸ ನಡೆಯುವಂತೆ ನೋಡಿಕೊಂಡಿದ್ದೇನೆ ಎಂದು ಶಾಸಕ ಬಸವರಾಜ್ ಶಿವಗಂಗಾ ತಿಳಿಸಿದರು.
ತಾಲೂಕು ಸಂತೇಬೆನ್ನೂರಿನಲ್ಲಿ ಸೋಮವಾರ ಬೀರೂರು - ಸಮ್ಮಸಗಿ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ಒಂದು ಕೋಟಿ ರೂ. ವೆಚ್ಚದ ಸಿಸಿ ಚರಂಡಿ ಹಾಗೂ 9 ಕೋಟಿ ರೂ. ವೆಚ್ಚದ ಸಂತೇಬೆನ್ನೂರಿನಿಂದ ಕೆಬಿ ಗ್ರಾಮದವರೆಗಿನ 6 ಕಿಮೀ ಚತುಷ್ಪಥ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಜತೆಗೆ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಾ ಬಂದಿದೆ. ನಮ್ಮ ಪಕ್ಷದ ಮೇಲಿನ ಆರೋಪವನ್ನು ಸುಳ್ಳು ಮಾಡುವ ಸಲುವಾಗಿ ನಮ್ಮ ಸರ್ಕಾರದ ವಿವಿಧ ಇಲಾಖೆಗಳಿಂದ ಅನುದಾನ ಮಂಜೂರು ಮಾಡಿಸಿಕೊಂಡು ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಲಾಗಿದೆ ಎಂದರು.
ಸಂತೇಬೆನ್ನೂರು ಗ್ರಾಮದಿಂದ ಸಿದ್ದನಮಠ ಕ್ರಾಸ್‌ವರೆಗೆ 7 ಮೀ ಅಗಲ ರಸ್ತೆ ಹಾಗೂ 850 ಮೀ ಸಿಸಿ ಚರಂಡಿ ನಿರ್ಮಾಣ ಮಾಡಲಾಗುತ್ತದೆ. ಅಲ್ಲದೆ ಗ್ರಾಮದ ಬಾಡ ರಸ್ತೆಯ ಪದವಿ ಕಾಲೇಜಿನವರೆಗೆ ಎಡಬದಿಯಲ್ಲಿ 850 ಮೀ ಸಿಸಿ ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಸಿಡಿಸಿ ಉಪಾಧ್ಯಕ್ಷ ಎಂ. ಸಿದ್ದಪ್ಪ, ದಿಶಾ ಸಮಿತಿ ಸದಸ್ಯ ಮೂರ್ತಪ್ಪ, ಗ್ರಾಪಂ ಅಧ್ಯಕ್ಷೆ ರೇಣುಕಾ ಮೂರ್ತಪ್ಪ, ಉಪಾಧ್ಯಕ್ಷೆ ಮಿನಾಕ್ಷಮ್ಮ ಕರಿಯಪ್ಪ, ವಿಎಸ್‌ಎಸ್ ಅಧ್ಯಕ್ಷ ಸಂತೋಷ್, ಬಿ.ಎನ್. ರಾಜು, ಕೆ.ಪಿ. ಗಿರೀಶ್, ಬ್ಯಾಟಪ್ಪ, ಜಿ.ಎನ್. ಸುರೇಶ್, ಅಬ್ಬಿಗೆರೆ ಪರಮೇಶಪ್ಪ, ನಾಗರಾಜಪ್ಪ, ರಾಮತ್‌ವುಲ್ಲಾ, ಷಣ್ಮುಖಪ್ಪ, ರುದ್ರಪ್ಪ, ಕಾಕನೂರು ಮಹೇಶ್, ರವೀಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net