ಅಡ್ಡಪಲ್ಲಕ್ಕಿಯಲ್ಲಿ ಮಹೇಶ್ವರನ ಮೆರವಣಿಗೆ maheshwar fair

ಹರಿಹರ ನಗರದ ತುಂಗಭದ್ರಾ ನದಿಯ ತಟದಲ್ಲಿರುವ ಸಂಗಮೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಮಹೇಶ್ವರ ಜಾತ್ರಾ ಮಹೋತ್ಸವ ಆಚರಿಸಲಾಯಿತು. ಟಿ.ಜೆ. ಮುರುಗೇಶಪ್ಪ, ಕೆ.ಇ. ಜಗದೀಶ್, ಜಿ.ಕೆ. ವೀರಣ್ಣ, ಗುಂಡಾ ಭಕ್ತ ಈರಣ್ಣ, ಮಲ್ಲಿಕಾರ್ಜುನ ಇತರರಿದ್ದರು. maheshwar fair
ಹರಿಹರ ನಗರದ ತುಂಗಭದ್ರಾ ನದಿಯ ತಟದಲ್ಲಿರುವ ಸಂಗಮೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಮಹೇಶ್ವರ ಜಾತ್ರಾ ಮಹೋತ್ಸವ ಆಚರಿಸಲಾಯಿತು. ಟಿ.ಜೆ. ಮುರುಗೇಶಪ್ಪ, ಕೆ.ಇ. ಜಗದೀಶ್, ಜಿ.ಕೆ. ವೀರಣ್ಣ, ಗುಂಡಾ ಭಕ್ತ ಈರಣ್ಣ, ಮಲ್ಲಿಕಾರ್ಜುನ ಇತರರಿದ್ದರು. maheshwar fair
Published on
ಹರಿಹರ: ನಗರದ ತುಂಗಭದ್ರಾ ನದಿಯ ತಟದಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವನ್ನು ಅದ್ದೂರಿಯಾಗಿ ನಡೆಯಿತು.
ಸೋಮವಾರ ಮಹೇಶ್ವರ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವದ ಮೆರವಣಿಗೆಯು ನಗರದ ಹಳೇಪೇಟೆ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೈಲಾಸ ನಗರದ ಮೂಲಕ ಸಂಗಮೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು. ಮಂಗಳವಾರ ಬೆಳಗಿನ ಜಾವ 5 ಗಂಟೆಗೆ ಮಹೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ, ಅಲಂಕಾರ ಮಾಡಲಾಗಿತ್ತು.
ಸಂಗಮೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ಮಹೇಶ್ವರ ಸೇವಾ ಸಮಿತಿ ವತಿಯಿಂದ ಅನ್ನ, ಹಾಲು, ಬೆಲ್ಲ ಮತ್ತು ಬಾಳೆಹಣ್ಣಿನ ಸಿಹಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ಅಕ್ಕಿ ಹುಗ್ಗಿ ಹಾಗೂ ಅನ್ನ ಸಾಂಬಾರ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಸಮಿತಿಯ ಅಧ್ಯಕ್ಷ ಚೇತನ್ ಮೂರ್ಕಲ್ ತಿಳಿಸಿದರು. ಜಾತ್ರಾ ಮಹೋತ್ಸವಕ್ಕೆ ಕೇವಲ ಪುರುಷರು ಭಾಗವಹಿಸಿ ಪೂಜಾ ವಿಧಿವಿಧಾನಗಳನ್ನು ನೇರವೇರಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಅದರಂತೆ ಇಂದಿಗೂ ಕೂಡ ಮಹಿಳೆಯರು ಈ ಜಾತ್ರೆಯಲ್ಲಿ ಪಾಲ್ಗೊಳ್ಳದೆ ದೂರವಿರುತ್ತಾರೆ.
ತಾಲೂಕಿನ ಗಂಗನರಸಿ, ದಿಟೂರು, ಹನಗವಾಡಿ, ಕೆ. ಬೇವಿನಹಳ್ಳಿಯೂ ಸೇರಿ ವಿವಿಧ ಗ್ರಾಮಗಳಲ್ಲಿ ಜಾತ್ರಾ ಮಹೋತ್ಸವ ವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ತಾಪಂ ಮಾಜಿ ಸದಸ್ಯ ಟಿ.ಜೆ. ಮುರು ಗೇಶಪ್ಪ, ಕೆ.ಇ. ಜಗದೀಶ್, ಜಿ.ಕೆ. ವೀರಣ್ಣ, ಗುಂಡಾ ಭಕ್ತ ಈರಣ್ಣ, ಮಲ್ಲಿಕಾರ್ಜುನ, ರೇಣುಕಾ ಪ್ರಸಾದ್, ಎಚ್.ಕೆ. ಸಂತೋಷ್, ಸಿದ್ದೇಶ್, ಕಂಚಿಕೇರಿ ಶಿವಯೋಗಿ, ಕುಮಾರ ಸ್ವಾಮಿ, ಸಿದ್ದಯ್ಯ ಹಿರೇಮಠ, ಬಿ.ಬಿ. ನಾಗರಾಜ್, ಪ್ರಕಾಶ್, ಚಂದನ್ ಮೂರ್ಕಲ್, ಬೆಣ್ಣೆ ಸಿದ್ದಣ್ಣ, ಗಜೇಂದ್ರ, ವೀರೇಶ್ ಅಜ್ಜಣ್ಣನವರ್ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net