ನೆಮ್ಮದಿಯ ಬದುಕಿಗೆ ವ್ಯಾಯಾಮ ರೂಢಿಸಿಕೊಳ್ಳಿ Camp

ಕೆ. ಗಾಣದಕಟ್ಟೆ ಗ್ರಾಮದಲ್ಲಿ ಶನಿವಾರ ಉಚಿತ ರಕ್ತ, ಮಧುಮೇಹ ಶಿಬಿರವನ್ನು ಕಚೇರಿ ಅಧೀಕ್ಷಕ ನಾಗರಾಜ್ ಉದ್ಘಾಟಿಸಿದರು. ಅನ್ನಪೂರ್ಣ, ರವಿ ಪುಂಜಾ, ಸವಿತಾ ಇತರರಿದ್ದರು. Camp
ಕೆ. ಗಾಣದಕಟ್ಟೆ ಗ್ರಾಮದಲ್ಲಿ ಶನಿವಾರ ಉಚಿತ ರಕ್ತ, ಮಧುಮೇಹ ಶಿಬಿರವನ್ನು ಕಚೇರಿ ಅಧೀಕ್ಷಕ ನಾಗರಾಜ್ ಉದ್ಘಾಟಿಸಿದರು. ಅನ್ನಪೂರ್ಣ, ರವಿ ಪುಂಜಾ, ಸವಿತಾ ಇತರರಿದ್ದರು. Camp
Published on

ಪ್ರಮುಖ ಮುಖ್ಯಾಂಶಗಳು

  • ಯೋಜನಾಧಿಕಾರಿ ಅನ್ನಪೂರ್ಣ ಮಾಹಿತಿ
  • ಮಧುಮೇಹ, ರಕ್ತದೊತ್ತಡ ಪರೀಕ್ಷೆ
ಚನ್ನಗಿರಿ: ಪ್ರತಿಯೊಬ್ಬರ ಜೀವನದಲ್ಲಿ ಉತ್ತಮ ಆರೋಗ್ಯ ಬಹು ಮುಖ್ಯವಾಗಿದೆ. ಆರೋಗ್ಯದಲ್ಲಿ ವ್ಯತ್ಯಾಸವಾದರೆ ಆಸ್ಪತ್ರೆಗೆ ಅಲೆಯ ಬೇಕಾಗುತ್ತದೆ ಎಂದು ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಅನ್ನಪೂರ್ಣ ತಿಳಿಸಿದರು. Camp
ತಾಲೂಕಿನ ಕೆ. ಗಾಣದಕಟ್ಟೆ ಗ್ರಾಮದಲ್ಲಿ ಶನಿವಾರ ಎಸ್‌ಕೆಡಿಆರ್‌ಡಿಪಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಬಸವೇಶ್ವರ ಹೆಲ್ತ್ ಸೆಂಟರ್ ದಾವಣಗೆರೆ ಸಹಯೋಗದಲ್ಲಿ ಉಚಿತ ರಕ್ತ ಪರೀಕ್ಷೆ, ಮಧುಮೇಹ, ರಕ್ತದೊತ್ತಡ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹಣ, ಆಸ್ತಿಗಳಿಕೆ ಹಿನ್ನೆಲೆ ಒತ್ತಡದ ಬದುಕಿನಲ್ಲಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿ ದ್ದೇವೆ. ನೆಮ್ಮದಿಯ ಬದುಕಿಗಾಗಿ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ ಎಂದರು. ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿ ಬದಲಾಗಿದೆ. ಹೊರಗಿನ ಆಹಾರ ಪದಾರ್ಥಗಳು ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಶುದ್ಧ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳಬೇಕು. ಆಗ ಉತ್ತಮ ಆರೋಗ್ಯ ಹೊಂದಬಹುದು ಎಂದು ಹೇಳಿದರು. ಬಸವೇಶ್ವರ ಹೆಲ್ತ್ ಸೆಂಟರ್ ವೈದ್ಯ ಡಾ. ಕಿರಣ್ ಮಾತನಾಡಿ, ಉತ್ತಮ ಜೀವನ ಶೈಲಿಯಿಂದ ಆರೋಗ್ಯ ಕಾಪಾಡಿಕೊಳ್ಳ ಬಹುದು. ಆರೋಗ್ಯ ಸಮಸ್ಯೆಗಳು ಎದುರಾದಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ವೈದ್ಯರ ಸಲಹೆ ಪಡೆಯಿರಿ ಎಂದರು.
ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಇಸಿಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡ ಲಾಯಿತು. ಕಾರ್ಯಕ್ರಮವನ್ನು ಆಸ್ಪತ್ರೆ ಕಚೇರಿ ಅಧೀಕ್ಷಕ ನಾಗರಾಜ್ ಉದ್ಘಾಟಿಸಿದರು. ಧರ್ಮಸ್ಥಳ ಸಂಸ್ಥೆ ಮೇಲ್ವಿಚಾರಕ ರವಿ ಪುಂಜಾ, ಜ್ಞಾನವಿಕಾಸ ಸಮಾನ್ವಾಧಿಕಾರಿ ಸವಿತಾ, ಒಕ್ಕೂಟದ ಅಧ್ಯಕ್ಷೆ ರಾಧಾ, ರೇಷ್ಮಾ, ಪಲ್ಲವಿ, ಸೇವಾಪ್ರತಿನಿಧಿ ಸುಜಾತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net