ಪ್ರೆಸ್ ಇಲೆವೆನ್ ತಂಡಕ್ಕೆ ರೋಚಕ ಗೆಲುವು

ದಾವಣಗೆರೆಯ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಸ್ನೇಹ ಸೌಹಾರ್ದಯುತ ಕ್ರಿಕೆಟ್ ಪಂದ್ಯದಲ್ಲಿ ಪೊಲೀಸ್ ತಂಡದ ವಿರುದ್ಧ ಗೆಲುವು ಸಾಧಿಸಿದ ಪ್ರೆಸ್ ಇಲೆವೆನ್ ತಂಡದ ಆಟಗಾರರು ಸಂಭ್ರಮಿಸುತ್ತಿರುವುದು. ಎಸ್‌ಪಿ ಉಮಾ ಪ್ರಶಾಂತ್, ಪತ್ರಕರ್ತರು ಇದ್ದಾರೆ.
ದಾವಣಗೆರೆಯ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಸ್ನೇಹ ಸೌಹಾರ್ದಯುತ ಕ್ರಿಕೆಟ್ ಪಂದ್ಯದಲ್ಲಿ ಪೊಲೀಸ್ ತಂಡದ ವಿರುದ್ಧ ಗೆಲುವು ಸಾಧಿಸಿದ ಪ್ರೆಸ್ ಇಲೆವೆನ್ ತಂಡದ ಆಟಗಾರರು ಸಂಭ್ರಮಿಸುತ್ತಿರುವುದು. ಎಸ್‌ಪಿ ಉಮಾ ಪ್ರಶಾಂತ್, ಪತ್ರಕರ್ತರು ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಅತ್ಯದ್ಬುತವಾದ ಆಲ್ರೌಂಡ್ ಪ್ರದರ್ಶನ
  • ದಾವಣಗೆರೆ ಪೊಲೀಸ್ ತಂಡದ ವಿರುದ್ಧ
  • ಪ್ರೆಸ್ ಇಲೆವೆನ್ ಗೆ 3 ವಿಕೆಟ್‌ಗಳ ಗೆಲುವು
ವಿಜಯವಾಣಿ ಸುದ್ದಿಜಾಲ ದಾವಣಗೆರೆ
ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅತ್ಯದ್ಬುತವಾದ ಪ್ರದರ್ಶನ ತೋರಿದ ಪ್ರೆಸ್ ಇಲೆವೆನ್ ತಂಡ, ದಾವಣಗೆರೆ ಪೊಲೀಸ್ ತಂಡದ ವಿರುದ್ಧ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಸ್ನೇಹ ಸೌಹಾರ್ದಯುತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಾವಣಗೆರೆ ಪೊಲೀಸ್ ತಂಡ ಸಂಜೀವ್ (35), ಕಿರಣ್ (16) ರನ್‌ಗಳ ಅಮೋಘ ಬ್ಯಾಟಿಂಗ್ ನೆರವಿನಿಂದ 8 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 77 ರನ್‌ಗಳಿಸಿತು. 
ಸವಾಲಿನ ಗುರಿ ಬೆನ್ನತ್ತಿದ ಪ್ರೆಸ್ ಇಲೆವೆನ್ ತಂಡ ಆರಂಭಿಕರಾದ ರಾಮ್ ಪ್ರಸಾದ್ (22) ಹಾಗೂ ಮಹದೇವ್ (16) ಅವರ ಬಿರುಸಿನ ಬ್ಯಾಟಿಂಗ್‌ನಿಂದ ಉತ್ತಮ ಆರಂಭ ಪಡೆಯಿತು. ಕೇವಲ 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 25ರನ್‌ಗಳಿಸಿ ಸುಸ್ಥಿತಿಯಲ್ಲಿತ್ತು. 
ನಂತರದ ಓವರ್‌ಗಳಲ್ಲಿ ಮಧ್ಯಮ ಕ್ರಮಾಂಕದ ವಿಕೆಟ್‌ಗಳನ್ನು ಬಹುಬೇಗನೆ ಕಳೆದುಕೊಂಡ ಪ್ರೆಸ್ ಇಲೆವೆನ್ ತಂಡಕ್ಕೆ ನಾಯಕ ಮಹೇಶ್, ಪ್ರವೀಣ್ ಬಾಡ ಆಸರೆಯಾದರು. 
ಕೊನೆಯ 6 ಎಸೆತಗಳಲ್ಲಿ 8 ರನ್‌ಗಳ ಅವಶ್ಯಕತೆಯಿದ್ದಾಗ ಮಹೇಶ್ ಭರ್ಜರಿ ಸಿಕ್ಸರ್ ಹೊಡೆಯುವ ಮೂಲಕ ಗೆಲುವನ್ನು ಖಚಿತಪಡಿಸಿದರು. ನಂತರ ಶಿವು ಇಳಿಗೇರ 5ನೇ ಎಸೆತದಲ್ಲಿ 1 ರನ್ ಗಳಿಸುವ ಮೂಲಕ ಪ್ರೆಸ್ ಇಲೆವೆನ್ ತಂಡ ಜಯಗಳಿಸಿತು.
ಸ್ಕೋರ್ ವಿವರ
ದಾವಣಗೆರೆ ಪೊಲೀಸ್ ತಂಡ 8 ಓವರ್‌ಗಳಲ್ಲಿ 77/3
(ಸಂಜೀವ್ ಅಜೇಯ 35, ಕಿರಣ್ 16)
ಪ್ರೆಸ್ ಇಲೆವೆನ್ ತಂಡ 7.5 ಓವರ್‌ಗಳಲ್ಲಿ 78/6
(ರಾಮ್‌ಪ್ರಸಾದ್ 22, ಮಹದೇವ್ 16)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net