ಅಸುರಕ್ಷತೆಯಿದ್ದಲ್ಲಿ ನಮಗೆ ಮಾಹಿತಿ ನೀಡಿ

ದಾವಣಗೆರೆಯ ಜಿಮ್ ಒಂದಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿದ ಎಎಸ್ಪಿ ಪರಮೇಶ್ವರ ಹೆಗಡೆ ಅವರು ತರಬೇತಿ ಪಡೆಯುವವರ ಬಳಿ ಸಮಾಲೋಚನೆ ನಡೆಸಿದರು.
ದಾವಣಗೆರೆಯ ಜಿಮ್ ಒಂದಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿದ ಎಎಸ್ಪಿ ಪರಮೇಶ್ವರ ಹೆಗಡೆ ಅವರು ತರಬೇತಿ ಪಡೆಯುವವರ ಬಳಿ ಸಮಾಲೋಚನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಮ್‌ಗಳ ಮಹಿಳೆಯರಿಗೆ ಪೊಲೀಸರ ಮನವಿ
  • ಪೂರ್ವಾಪರ ತಿಳಿದು ಟ್ರೈನರ್ ನೇಮಿಸಲು ಸೂಚನೆ
  • ಶೀಘ್ರದಲ್ಲೇ ಜಿಮ್ ಮಾಲೀಕರ ಸಮಾಲೋಚನೆ
ದಾವಣಗೆರೆ: ನಗರದ ಜಿಮ್ ಒಂದರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚೆತ್ತಿದೆ. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವ ಭಾಗವಾಗಿ ಪೊಲೀಸರ ವಿವಿಧ ತಂಡಗಳು ನಗರದ ವಿವಿಧ ಜಿಮ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದವು.
ಎಸ್ಪಿ ಎಚ್.ಟಿ. ಶೇಖರ್ ಮಾರ್ಗದರ್ಶನದಲ್ಲಿ ಎಎಸ್ಪಿ ಪರಮೇಶ್ವರ ಹೆಗಡೆ ಉಸ್ತುವಾರಿಯಲ್ಲಿ ಡಿವೈಎಸ್ಪಿ ಹಾಗೂ ಪಿಐ ನೇತೃತ್ವದಲ್ಲಿ ರಚಿತ ಮಹಿಳಾ ಅಧಿಕಾರಿಗಳು, ಸಿಬ್ಬಂದಿ ಜಿಮ್/ ಫಿಟ್ನೆಸ್ ಸೆಂಟರ್‌ಗಳಿಗೆ ಭೇಟಿ ನೀಡಿ ಜಿಮ್ ಮಾಲೀಕರು, ತರಬೇತುದಾರರು ಹಾಗೂ ಮಹಿಳಾ ಟ್ರೈನರ್‌ಗಳ ಬಗ್ಗೆ ಮಾಹಿತಿ ಪಡೆದರು.
ಪೂರ್ವಾಪರ ಹಿನ್ನೆಲೆ ಪರಿಶೀಲನೆ ಬಳಿಕವೇ ಜಿಮ್, ಫಿಟ್ನೆಸ್ ಸೆಂಟರ್‌ಗಳಲ್ಲಿ ತರಬೇತುದಾರರು, ಸಿಬ್ಬಂದಿ ನೇಮಿಸುವಂತೆ ಸೂಚನೆ ನೀಡಲಾಯಿತು. ಜಿಮ್/ ಫಿಟ್ನೆಸ್ ಸೆಂಟರ್‌ಗಳಲ್ಲಿ ಕಹಿ ಅನುಭವ, ಅಸುರಕ್ಷತೆ ಭಾವ, ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆಯೂ ಮಹಿಳೆಯರಿಗೆ ತಿಳಿಸಲಾಯಿತು. ಮಾಹಿತಿದಾರರ ಹೆಸರು ಗೌಪ್ಯವಾಗಿಡುವ ಬಗ್ಗೆಯೂ ಖಾತ್ರಿ ಪಡಿಸಲಾಯಿತು.
ಶೀಘ್ರವೇ ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜಿಮ್ ಹಾಗೂ ಪಿಟ್ನೆಸ್ ಮಾಲೀಕರ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗುವುದು ಎಂದೂ ಅಧಿಕಾರಿಗಳು ಮನವರಿಕೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net