ಎಂಬೆಲ್ಲ ಕೂಗುಗಳು ಗುರುವಾರ ಹರಿಹರ ರೈಲು ನಿಲ್ದಾಣದಲ್ಲಿ ಕೇಳಿಬಂದವು. ಬೆನ್ನಹಿಂದೆಯೇ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳ ವಾಹನದ ಸೈರನ್ ಆರ್ಭಟ, ಗಾಯಗೊಂಡವರ ನರಳಾಟ, ಅವರ ರಕ್ಷಣೆ ಕಾರ್ಯದಲ್ಲಿ ಭಾಗಿಯಾದ ಎ ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿಬ್ಬಂದಿ, ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಹೊತ್ತೊಯ್ಯುತ್ತಿದ್ದ ವಾಹನಗಳು, ಮೇಲಧಿಕಾರಿಗಳಿಂದ ಮೇಲಿಂದ ಮೇಲೆ ಬರುತ್ತಿದ್ದ ಸೂಚನೆಗಳು....