ಸತ್ಯ- ಸಂಸ್ಕೃತಿಯಿಂದ ಜೀವನದಲ್ಲಿ ಶಾಂತಿ culture

cultureಮಲೆಬೆನ್ನೂರು-ಕುಂಬಳೂರು ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.
cultureಮಲೆಬೆನ್ನೂರು-ಕುಂಬಳೂರು ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಹೇಳಿಕೆ
  • ಧರ್ಮ ಜಾಗೃತಿ ಸಮಾರಂಭ
  • ಮಲೆಬೆನ್ನೂರು- ಕುಂಬಳೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದ ವಾರ್ಷಿಕೋತ್ಸವ

ಹರಿಹರ: ಮಾನವ ಜೀವನ ಅಮೂಲ್ಯವಾದದ್ದು. ಇಲ್ಲಿ ಯೌವನ ಮತ್ತು ಸಂಪತ್ತು ಶಾಶ್ವತವಲ್ಲ. ಸತ್ಯ ಹಾಗೂ ಸಂಸ್ಕೃತಿಯನ್ನು ಗೌರವಿಸದಿದ್ದರೆ ಜೀವನದಲ್ಲಿ ಶಾಂತಿ, ನೆಮ್ಮದಿ ದೊರೆಯಲು ಸಾಧ್ಯವಿಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಜಗದ್ಗುರುಗಳು ಅಭಿಪ್ರಾಯಪಟ್ಟರು. culture

ತಾಲೂಕಿನ ಮಲೆಬೆನ್ನೂರು- ಕುಂಬಳೂರು ಗ್ರಾಮದ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದ 5ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಅಧ್ಯಾತ್ಮವೇ ಶಾಂತಿಯ ಮಾರ್ಗ

ಮನುಷ್ಯನ ಮನಸ್ಸು ಚಂಚಲವಾದದ್ದು. ಚಂಚಲ ಮನಸ್ಸನ್ನು ತಣ್ಣಗಿಟ್ಟು, ಪ್ರಶಾಂತಗೊಳಿಸುವ ಮಾರ್ಗವೇ ಅಧ್ಯಾತ್ಮ. ಜಗತ್ತಿನಲ್ಲಿ ಧರ್ಮಗಳು ಮತ್ತು ಆಚರಣೆಗಳು ಹಲವು ಇರಬಹುದು, ಆದರೆ ಎಲ್ಲ ಧರ್ಮಗಳ ಮೂಲ ಗುರಿ ಶಾಂತಿ ಮತ್ತು ಸಮೃದ್ಧ ಜೀವನವನ್ನು ನೀಡುವುದೇ ಆಗಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ದುಷ್ಟ ಶಕ್ತಿಗಳನ್ನು ನಾಶಗೊಳಿಸಿ ಸಾತ್ವಿಕ ಶಕ್ತಿಯನ್ನು ಬೆಳೆಸಲು ಶ್ರೀ ವೀರಭದ್ರಸ್ವಾಮಿಯ ಮರು ಅವತಾರದ ಅವಶ್ಯಕತೆಯಿದೆ. ನೊಂದು ಬೆಂದು ಬಸವಳಿದ ಜೀವಾತ್ಮರಿಗೆ ದೇವಸ್ಥಾನಗಳು ಪವಿತ್ರ ತಾಣಗಳಾಗಿವೆ ಎಂದರು.

ಸದ್ಗುಣವಂತರ ಮಾರ್ಗದರ್ಶನ ಅಗತ್ಯ

ಟ್ರಸ್ಟ್‌ನ ಉಪಾಧ್ಯಕ್ಷ ಬಿ. ಚಿದಾನಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಶ್ರಮ ಮತ್ತು ಸಾಧನೆ ಇಲ್ಲದೆ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯವಿಲ್ಲ. ಬಾಳಿನ ಭಾಗ್ಯೋದಯಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆ ಮತ್ತು ಸದ್ಗುಣವಂತರ ಮಾರ್ಗದರ್ಶನ ಅಗತ್ಯ. ಶ್ರೀ ವೀರಭದ್ರೇಶ್ವರ ಕ್ಷೇತ್ರದಿಂದ ಸದಾ ಜನಕಲ್ಯಾಣ ಕಾರ್ಯಗಳು ಜರುಗಬೇಕೆಂಬ ಮಹತ್ವಾಕಾಂಕ್ಷೆಯಿಂದ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿದರು. ಮಲೆಬೆನ್ನೂರು ಮತ್ತು ಕುಂಬಳೂರು ಭಾಗದ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ಜಗದ್ಗುರುಗಳ ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net