ವಿದ್ಯುತ್ ಖಾಸಗೀಕರಣ ವಿರುದ್ಧ ಆಕ್ರೋಶ

ದಾವಣಗೆರೆಯ ಬೆಸ್ಕಾಂ ಕಚೇರಿ ಬಳಿ ಸೋಮವಾರ, ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯಿತು. ಅರುಣ್ ಕುಮಾರ್ ಕುರುಡಿ, ಬುಳ್ಳಾಪುರದ ಹನುಮಂತಪ್ಪ, ಕರಿಲಕ್ಕೇನಹಳ್ಳಿ ರೇವಣಸಿದ್ದಪ್ಪ, ಪರಮೇಶಪ್ಪ, ಕಂಪಳೇಶ್, ಮುಖಂಡರಾದ ಮಂಡಲೂರು ವಿಶ್ವನಾಥ್, ಸಿದ್ದನೂರು ನಾಗರಾಜ, ರೇವಣಸಿದ್ದಪ್ಪ, ರಮೇಶ್, ಶಿವಕುಮಾರ್, ಅಗಸನಕಟ್ಟೆ ಶಿವಕುಮಾರ್, ನಾಗರಾಜ ಇದ್ದರು.
ದಾವಣಗೆರೆಯ ಬೆಸ್ಕಾಂ ಕಚೇರಿ ಬಳಿ ಸೋಮವಾರ, ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಯಿತು. ಅರುಣ್ ಕುಮಾರ್ ಕುರುಡಿ, ಬುಳ್ಳಾಪುರದ ಹನುಮಂತಪ್ಪ, ಕರಿಲಕ್ಕೇನಹಳ್ಳಿ ರೇವಣಸಿದ್ದಪ್ಪ, ಪರಮೇಶಪ್ಪ, ಕಂಪಳೇಶ್, ಮುಖಂಡರಾದ ಮಂಡಲೂರು ವಿಶ್ವನಾಥ್, ಸಿದ್ದನೂರು ನಾಗರಾಜ, ರೇವಣಸಿದ್ದಪ್ಪ, ರಮೇಶ್, ಶಿವಕುಮಾರ್, ಅಗಸನಕಟ್ಟೆ ಶಿವಕುಮಾರ್, ನಾಗರಾಜ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘದಿಂದ ಪ್ರತಿಭಟನೆ
  • ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
ದಾವಣಗೆರೆ : ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪುಟ್ಟಣ್ಣಯ್ಯ ಬಣ ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ಬಣದ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಜಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಬೆಸ್ಕಾಂ ಕಚೇರಿಗೆ ತೆರಳಿ, ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಕಾರ್ಯನಿರ್ವಾಹಕ ಇಂಜಿನಿಯರ್ ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸುವ ಮೂಲಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅರುಣ್ ಕುಮಾರ್ ಕುರುಡಿ ಮಾತನಾಡಿ, ಖಾಸಗೀಕರಣದ ಕ್ರಮವನ್ನು ಕೈಬಿಟ್ಟು ವಿದ್ಯುತ್ ಕಂಪನಿಗಳನ್ನು ಸುಧಾರಣೆ
ಾಡಬೇಕು ಎಂದು ಆಗ್ರಹಿಸಿದರು.
ಖಾಸಗೀಕರಣ ಮಾಡಲು ನಾವು ಬಿಡುವುದಿಲ್ಲ, ಹಳ್ಳಿ ಹಳ್ಳಿಗಳಲ್ಲಿ ರೈತರ ಸಂಘಟನೆ ಮಾಡಿ ಹೋರಾಟ ತೀವ್ರಗೊಳಿಸಲಾಗುವುದು. ಇದೇ ನಿಲುವು ಮುಂದುವರಿಸಿದರೆ ಈ ಸರ್ಕಾರ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಖಾಸಗೀಕರಣ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಲುವು ಒಂದೇ ಆಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಲೆ ದೊಡ್ಡ ಜವಾಬ್ದಾರಿ ಇದೆ. ರೈತರನ್ನು ಹೀಗೆ ಬೀದಿಯಲ್ಲಿ ಬಿಡುವುದು ಸರಿಯಲ್ಲ, ಖಾಸಗೀಕರಣ ಮಾಡಿದರೆ ಕೃಷಿ ವ್ಯವಸ್ಥೆ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯುತ್ ಕ್ಷೇತ್ರ ಸೇವಾ ವಲಯವಾಗಿದ್ದು, ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ವಿದ್ಯುತ್ ಕಂಪನಿಗಳು ಉತ್ತಮ ಸೇವೆ ನೀಡುತ್ತಿವೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಖಂಡಿಸಿದರು.
ಟಾಟಾ ಪವರ್ ಎಂಬ ಖಾಸಗಿ ಕಂಪನಿಗೆ ವಿದ್ಯುತ್ ವಿತರಣೆ ಜವಾಬ್ದಾರಿ ನೀಡಿದರೆ ಗ್ರಾಹಕರಿಗೆ ಮತ್ತು ರೈತರಿಗೆ ತೊಂದರೆಯಾಗುವ ಜತೆಗೆ ಕಂಪನಿಗಳ ನೌಕರರ ಸೇವಾ ಭದ್ರತೆಗೆ ಧಕ್ಕೆ ಉಂಟಾಗಲಿದೆ ಎಂದು ತಿಳಿಸಿದರು.
ವಿದ್ಯುತ್ ಖಾಸಗೀಕರಣದಿಂದಾಗಿ ಕೃಷಿ ಸೇರಿ ಹಲವು ಕ್ಷೇತ್ರಗಳಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿಯಾಗಿರುವ ಖಾಸಗೀಕರಣವನ್ನು ಕೈ ಬಿಡುವಂತೆ ಒತ್ತಾಯಿಸಿದರು.
ನಂತರ ಉಪ ವಿಭಾಗಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿ ನಂತರ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರಿಲಕ್ಕೇನಹಳ್ಳಿ ರೇವಣಸಿದ್ದಪ್ಪ, ಪರಮೇಶಪ್ಪ, ಕಂಪಳೇಶ್, ಉದಯಪ್ಪ, ಭೀಮಾನಾಯ್ಕ, ಹನುಮಂತ ನಾಯ್ಕ ಪಾಲ್ಗೊಂಡಿದ್ದರು. ಮುಖಂಡರಾದ ಮಂಡಲೂರು ವಿಶ್ವನಾಥ್, ಸಿದ್ದನೂರು ನಾಗರಾಜ, ರೇವಣಸಿದ್ದಪ್ಪ, ರಮೇಶ್, ಶಿವಕುಮಾರ್, ಅಗಸನಕಟ್ಟೆ ಶಿವಕುಮಾರ್, ನಾಗರಾಜ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net