ಜಗಳೂರಿನ ಡಾ. ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಬೈಪಾಸ್‌ವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬ ವಿರೋಧಿಸಿ, ರಸ್ತೆ ಅಗಲೀಕರಣ ಹೋರಾಟ ಸಮಿತಿ ಪ್ರತಿಭಟಿಸಿ ದಾವಣಗೆರೆ ಉಪ ವಿಭಾಗಾಧಿಕಾರಿ ಸಂತೋಷ್ ಅವರಿಗೆ ಕುವಾರ್‌ಗೆ ಮನವಿ ಸಲ್ಲಿಸಿದರು. ತಹಸೀಲ್ದಾರ್ ಸೈಯದ್ ಕಲೀಂವುಲ್ಲಾ, ಆರ್. ಓಬಳೇಶ್, ಗೌರಿಪುರ ಸತ್ಯಮೂರ್ತಿ ಇತರರಿದ್ದರು. road expansion
ಜಗಳೂರು: ಜಗಳೂರಿನ ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಬೈಪಾಸ್‌ವರೆಗೆ 69 ಅಡಿ ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬ ವಿರೋಧಿಸಿ ರಸ್ತೆ ಅಗಲೀಕರಣ ಹೋರಾಟ ಸಮಿತಿ ಪದಾಧಿಕಾರಿಗಳು ಮಂಗಳವಾರ ಪ್ರತಿಭಟಿಸಿ ಉಪ ವಿಭಾಗಾಧಿಕಾರಿ ಸಂತೋಷ್‌ಕುವಾರ್ ಅವರಿಗೆ ಮನವಿ ಸಲ್ಲಿಸಿದರು.
ದಶಕಗಳ ನಂತರ ಮುಖ್ಯ ರಸ್ತೆ ವಿಸ್ತರಣೆಗೆ ಅಧಿಕಾರಿಗಳು ಮುಂದಾಗಿದ್ದು 69 ಅಡಿ ಬದಲಿಗೆ 35-40 ಅಡಿಗೆ ಸೀಮಿತಗೊಳಿಸಿರುವುದು ಖಂಡನೀಯ ಎಂದರು.
ರಸ್ತೆಯುದ್ದಕ್ಕೂ ಅಕ್ರಮ ಕಟ್ಟಡಗಳಿವೆ. ಶಾಸಕ ಬಿ. ದೇವೇಂದ್ರಪ್ಪ ರಸ್ತೆ ವಿಸ್ತರಿಸುವುದಾಗಿ ಹೇಳಿದ್ದರು. ಆದರೆ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಶಾಸಕರು ಹೋರಾಟಕ್ಕೆ ಸಹಕಾರ ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಹೋರಾಟ ಸಮಿತಿಯ ಆರ್. ಓಬಳೇಶ್ ವಾತನಾಡಿ, ವರ್ಷದ ಹಿಂದೆ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗಿತ್ತು. ಎರಡು ಭಾಗದಲ್ಲಿ ಸಿಸಿ ರಸ್ತೆ ನಿರ್ವಾಣ ವಿಳಂಬವಾಗುತ್ತಿರುವ ಕಾರಣ ಧೂಳು ಆವರಿಸಿ ವ್ಯಾಪಾರಿಗಳು, ಪ್ರಯಾಣಿಕರು, ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಸರ್ಕಾರಿ ಆಸ್ಪತ್ರೆ ಮುಂಭಾಗ, ಪ್ರವಾಸಿ ಮಂದಿರ ರಸ್ತೆ, ಮಹಾತ್ಮಗಾಂಧಿ ಹಳೇ ವೃತ್ತ, ಹೊಸ ಬಸ್ ನಿಲ್ದಾಣದವರೆಗೆ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಅಪಘಾತವಾದ ನಿದರ್ಶನಗಳಿಗೆ. ಸಂಬಂಧಪಟ್ಟ ಅಧಿಕಾರಿಗಳು ಜಾಣಮೌನಕ್ಕೆ ಶರಣಾಗಿದ್ದಾರೆ ಎಂದು ದೂರಿದರು.
ಈ ಹಿಂದೆ ಸತ್ಯಾಗ್ರಹದ ವೇಳೆ ಸ್ಥಳಕ್ಕೆ ಜಿಲ್ಲಾಧಿಕಾರಿ, ಶಾಸಕರು ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿ ರಸ್ತೆ ಮಧ್ಯಭಾಗದಿಂದ 69ಅಡಿ ವಿಸ್ತರಿಸುವ ಭರವಸೆ ನೀಡಿದ್ದರು. ಆದರೆ, 35 ಅಡಿಗೆ ಸೀಮಿತಗೊಳಿಸಿ ಚರಂಡಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.
ಹೋರಾಟ ಸಮಿತಿ ಕಾರ್ಯದರ್ಶಿ ಗೌರಿಪುರ ಸತ್ಯಮೂರ್ತಿ ವಾತನಾಡಿ, ರಸ್ತೆ ವಿಸ್ತರಣೆಗೆ ಆರಂಭದಲ್ಲಿದ್ದ ಉತ್ಸಾಹ ಈಗ ಕುಂದಿದೆ. ಕೂಡಲೇ ನಿರ್ಧಾರ ತೆಗೆದುಕೊಳ್ಳಬೇಕು. ನನೆಗುದಿಗೆ ಬಿದ್ದ ರಸ್ತೆ ಚರಂಡಿಗಳನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಮಲೆವಾಚಿಕೆರೆ ಸತೀಶ್ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಬಿಡುಗಡೆಯಾದ ಅನುದಾನ, ವರ್ತಕರಿಗೆ ನೀಡಿದ ನೋಟಿಸ್‌ಗಳು ಮತ್ತು ಕಟ್ಟಡ ನೆಲಸಮ ವಾಡಿದರೆ ನೀಡಲಾಗುವ ಪರಿಹಾರದ ಮೊತ್ತದ ಬಗ್ಗೆ ಅಧಿಕಾರಿಗಳು ವಾಹಿತಿ ನೀಡುತ್ತಿಲ್ಲ. ಗುತ್ತಿಗೆದಾರರು ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಾಮಗಾರಿಯ ವಿವರಣೆ, ಮೊತ್ತ ಮತ್ತು ಕಾಲಮಿತಿ ತಿಳಿಸುವ ವಾಹಿತಿ ಫಲಕ ಅಳವಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಶೀಘ್ರ ಸಭೆ ಕರೆಯಬೇಕು ಮತ್ತು 69 ಅಡಿ ರಸ್ತೆ ವಿಸ್ತರಣೆಗೊಳಿಸುವ ಮೂಲಕ ಜಗಳೂರಿನ ಅಭಿವೃದ್ಧಿಗೆ ಮುಂದಾಗಬೇಕು. ಬೇಡಿಕೆಗಳು ಈಡೇರದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಅಂಜಿನಪ್ಪ, ಧನ್ಯಕುವಾರ್ ಎಚ್ಚರಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಸಣ್ಣ ಓಬಯ್ಯ, ವಕೀಲ ಸಂದ ಅಧ್ಯಕ್ಷ ಟಿ. ಬಸವರಾಜ್, ವಕೀಲರಾದ ರುದ್ರೇಶ್, ಮಹಾಂತೇಶ್, ಪವನ್, ಕಿರಣ್ ಕುವಾರ್, ಪ್ರಧಾನ ಕಾರ್ಯದರ್ಶಿ, ಇಂದಿರಮ್ಮ, ಇತರರಿದ್ದರು.