ನರೇಗಾ ಭ್ರಷ್ಟಾಚಾರಕ್ಕೆ ಬ್ರೇಕ್

ಮಾಯಕೊಂಡ ಬಿಜೆಪಿ ಘಟಕದಿಂದ ಹಮ್ಮಿಕೊಂಡಿರುವ ವಿಬಿ- ಜಿ ರಾಮ್- ಜಿ ಯೋಜನೆಯ ಕುರಿತ ಜನಜಾಗೃತಿ ಅಭಿಯಾನದ ಅಂಗವಾರ ಶುಕ್ರವಾರ ಮಾಯಕೊಂಡ ಹೋಬಳಿಯ ಹಿಂಡಿಸಕಟ್ಟೆ ಸಮೀಪ ಹಳ್ಳದ ಊಳೆತ್ತುವ ಕಾಮಗಾರಿ ಸ್ಥಳಕ್ಕೆ ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು. ಬಿ.ಜಿ. ಸಚಿನ್, ಅಣಬೇರು ಜೀವನ್ ಮೂರ್ತಿ ಇತರರಿದ್ದರು.NREGA
ಮಾಯಕೊಂಡ ಬಿಜೆಪಿ ಘಟಕದಿಂದ ಹಮ್ಮಿಕೊಂಡಿರುವ ವಿಬಿ- ಜಿ ರಾಮ್- ಜಿ ಯೋಜನೆಯ ಕುರಿತ ಜನಜಾಗೃತಿ ಅಭಿಯಾನದ ಅಂಗವಾರ ಶುಕ್ರವಾರ ಮಾಯಕೊಂಡ ಹೋಬಳಿಯ ಹಿಂಡಿಸಕಟ್ಟೆ ಸಮೀಪ ಹಳ್ಳದ ಊಳೆತ್ತುವ ಕಾಮಗಾರಿ ಸ್ಥಳಕ್ಕೆ ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು. ಬಿ.ಜಿ. ಸಚಿನ್, ಅಣಬೇರು ಜೀವನ್ ಮೂರ್ತಿ ಇತರರಿದ್ದರು.NREGA
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ ಹೇಳಿಕೆ
  • ವಿಬಿ- ಜಿ ರಾಮ್-ಜಿ ಕಾಯ್ದೆ ಕುರಿತು ಜನಜಾಗೃತಿ ಅಭಿಯಾನ
ಮಾಯಕೊಂಡ: ನರೇಗಾ ಯೋಜನೆಯಲ್ಲಿ ನಡೆಯುವ ವ್ಯಾಪಕ ಭ್ರಷ್ಟಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ನೂತನ ವಿಬಿ-ಜಿ ರಾಮ್- ಜಿ ಯೋಜನೆಯು ಕೂಲಿಕಾರರ ಪಾಲಿಗೆ ವರದಾನವಾಗಲಿದೆ ಎಂದು ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ ಹೇಳಿದರು.
ಮಾಯಕೊಂಡ ಬಿಜೆಪಿ ಘಟಕ ಹಮ್ಮಿಕೊಂಡಿರುವ ವಿಬಿ-ಜಿ ರಾಮ್- ಜಿ ಯೋಜನೆ ಕುರಿತ ಜನಜಾಗೃತಿ ಅಭಿಯಾನದ ಅಂಗವಾಗಿ, ಶುಕ್ರವಾರ ಮಾಯಕೊಂಡ ಹೋಬಳಿಯ ಹಿಂಡಿಸಕಟ್ಟೆ ಸಮೀಪ ಹಳ್ಳದ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. 2005ರಲ್ಲಿ ಪ್ರಾರಂಭವಾದ ನರೇಗಾ ಯೋಜನೆಯು ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರದ ಕೂಪವಾಗಿತ್ತು. ಇದನ್ನು ಬದಲಿಸುವುದರೊಂದಿಗೆ ಪ್ರಧಾನಿಯವರು ಈ ಯೋಜನೆಗೆ 2025ರ ಕಾಯ್ದೆಯಡಿ 95,692.31 ಕೋಟಿ ರೂ. ಮೀಸಲಿಟ್ಟಿದ್ದಾರೆ. ಜತೆಗೆ ಉದ್ಯೋಗದ
ದಿನಗಳನ್ನು 100ರಿಂದ 125 ದಿನಗಳಿಗೆ ಏರಿಸಲಾಗಿದೆ ಎಂದರು.
ಮಾಯಕೊಂಡ ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ಬಿ.ಜಿ. ಸಚಿನ್ ಮಾತನಾಡಿ, ಕೇಂದ್ರದ ಉತ್ತಮ ಯೋಜನೆಯ ಕುರಿತು ಕಾಂಗ್ರೆಸ್‌ನವರು ಸುಳ್ಳು ಅಪಪ್ರಚಾರ ಮಾಡುತ್ತಾ ಕೂಲಿಕಾರರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನಜಾಗೃತಿ ನಡೆಸಲಾಗುತ್ತಿದೆ. ಶುಕ್ರವಾರ ಹಿಂಡಿಸಕಟ್ಟೆ, ಮಾಯಕೊಂಡ, ನರಗನಹಳ್ಳಿ, ಕೊಡಗನೂರು, ನೇರ್ಲಿಗೆ, ಆನಗೋಡು ಸೇರಿ ವಿವಿಧ ಗ್ರಾಮಗಳಲ್ಲಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಬಯಲುಸೀಮೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಣಬೇರು ಜೀವನಮೂರ್ತಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ನರೇಗಾ ಯೋಜನೆಯಲ್ಲಿ ಸುಳ್ಳು ಲೆಕ್ಕ ತೋರಿಸಿ ಕೋಟ್ಯಂತರ ಹಣ ಲಪಟಾಯಿಸಿದೆ. ಆದ್ದರಿಂದ ಕೂಲಿಕಾರರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಈ ವೇಳೆ ಮಾಯಕೊಂಡ ಕ್ಷೇತ್ರ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಶಾಗಲೇ ದೇವೇಂದ್ರಪ್ಪ, ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ದೊಡ್ಡಘಟ್ಟ, ಜಿ.ಎಸ್. ಶಾಮ್, ಹಿಂಡಿಸಕಟ್ಟೆ ಮಹಾಬಲೇಶ್, ಮುಖಂಡರಾದ ರಾಕೇಶ್, ಆರ್.ಸಿ. ಗಣೇಶ್, ವಿ. ಎಚ್. ಲತಾ, ಎನ್.ಬಿ. ಮಹೇಶ್, ಜಿ.ಸಿ. ಕಲ್ಲೇಶ್ ಬಾಬು, ಹೆದ್ನೇ ಸಂತೋಷ್ ಹಾಗೂ ಕೂಲಿಕಾರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net