ಹೊಸದಾಗಿ ಅನುದಾನ ಬಿಡುಗಡೆ ಮಾಡಿಲ್ಲ grants

ಜಗಳೂರಿನಲ್ಲಿ ಶನಿವಾರ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದಲ್ಲಿ ಉದ್ಘಾಟನೆಯಲ್ಲಿ ವಾಜಿ ಶಾಸಕ ಎಸ್.ವಿ. ರಾಮಚಂದ್ರ, ವಾಜಿ ಶಾಸಕ ಎಚ್.ಪಿ. ರಾಜೇಶ್, ಬಿಜೆಪಿ ಮುಖಂಡ ಅನಿತ್, ಮಂಡಲ ಅಧ್ಯಕ್ಷ ಮರುಳಾರಾಧ್ಯ ಇತರರು ಇದ್ದರು. grants
ಜಗಳೂರಿನಲ್ಲಿ ಶನಿವಾರ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದಲ್ಲಿ ಉದ್ಘಾಟನೆಯಲ್ಲಿ ವಾಜಿ ಶಾಸಕ ಎಸ್.ವಿ. ರಾಮಚಂದ್ರ, ವಾಜಿ ಶಾಸಕ ಎಚ್.ಪಿ. ರಾಜೇಶ್, ಬಿಜೆಪಿ ಮುಖಂಡ ಅನಿತ್, ಮಂಡಲ ಅಧ್ಯಕ್ಷ ಮರುಳಾರಾಧ್ಯ ಇತರರು ಇದ್ದರು. grants
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಆರೋಪ
  • ಪಂಡಿತ್ ದೀನದ ಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿ ಯಾನ
ಜಗಳೂರು: ಕ್ಷೇತ್ರ ಅಭಿವೃದ್ಧಿಗೆ ಬಿಜೆಪಿ ಅವಧಿಯಲ್ಲಿ ನೀಡಲಾದ ಅನುದಾನ ಮುಂದುವರಿಸ ಲಾಗುತ್ತಿದೆಯೇ ವಿನಃ ಕಾಂಗ್ರೆಸ್ ಸರ್ಕಾರ ಹೊಸದಾಗಿ ಅನುದಾನ ನೀಡಿದಲ್ಲ ಎಂದು ವಾಜಿ ಶಾಸಕ ಎಸ್.ವಿ. ರಾಮಚಂದ್ರ ಆರೋಪಿಸಿದರು. grants
ಪಟ್ಟಣದ ವಾಲ್ಮೀಕಿ ಭವನದಲ್ಲಿ ಶನಿವಾರ ತಾಲೂಕು ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪಂಡಿತ್ ದೀನದ ಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿ ಯಾನ ಉದ್ಘಾಟಿಸಿ ವಾತನಾಡಿದರು. ಶಾಸಕನಾಗಿದ್ದ ವೇಳೆ ಕ್ಷೇತ್ರ ಅಭಿವೃದ್ಧಿಗೆ ಅನುದಾನ ತಂದಿದ್ದು ಅದರಲ್ಲಿ ಇಂದು ಕಾಮಗಾರಿ ಪೂರ್ಣಗೊಳಿಸಿ ಕಾಂಗ್ರೆಸ್ ಶಾಸಕರು ಚಾಲನೆ ನೀಡುತ್ತಿದ್ದಾರೆ. ಡಾ. ಶಿವಮೂರ್ತಿ ಶ್ರೀಗಳ ಆಶೀರ್ವಾದದಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವಾಡಲಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆ, ಖಾಸಗಿ ಬಸ್ ನಿಲ್ದಾಣ, ಸರ್ಕಾರಿ ಬಸ್ ನಿಲ್ದಾಣ, ಮಿನಿ ಬಸ್ ನಿಲ್ದಾಣ ವಾಡಲಾಗಿದೆ. 5 ಸಮುದಾಯ ಭವನ, 2 ವಾಲ್ಮೀಕಿ ಭವನ ನಿರ್ಮಿಸಲಾಗಿದೆ. ಈಗಿನ ಶಾಸಕರ ಅಭಿವೃದ್ಧಿ ಏನು ಎಂದು ಪ್ರಶ್ನಿಸಿದರು.
ಸ್ಥಳೀಯ ಆಡಳಿತ ದ ಚುನಾವಣೆ ಗಳು ಬರಲಿದ್ದು ಕಾರ್ಯಕರ್ತರು ಸನ್ನದ್ದರಾಗಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಕಳೆದ ಬಾರಿ ತೋರಿದ ನಿರ್ಲಕ್ಷ್ಯದಿಂದಾಗಿ ಸೋಲಬೇಕಾಯಿತು. ಮತ್ತೊಮ್ಮೆ ಈ ತಪ್ಪು ಮರುಕಳಿಸಬಾರದು ಎಂದರು.
ವಾಜಿ ಶಾಸಕ ಎಚ್.ಪಿ. ರಾಜೇಶ್ ವಾತನಾಡಿ, ಕಾರ್ಯಕರ್ತರಲ್ಲಿ ಪಕ್ಷ ಸಿದ್ಧಾಂತ ಮತ್ತು ರಾಷ್ಟ್ರೀಯ ಚಿಂತನೆಗಳನ್ನು ಬೆಳೆಸಬೇಕು. ಮೊದಲು ನಮ್ಮಿಂದ ಬದಲಾವಣೆ ಆರಂಭಿಸಬೇಕು. ಒಗ್ಗಟ್ಟಾಗಿ ಪಕ್ಷದ ಸಿದ್ಧಾಂತ, ಗುರಿ, ಆದರ್ಶ ಪಾಲಿಸುವುದೇ ಪ್ರಶಿಕ್ಷಣದ ಉದ್ದೇಶ ಎಂದು ಹೇಳಿದರು. ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ. ಮರುಳಾರಾಧ್ಯ ವಾತನಾಡಿದರು.
ಬಿಜೆಪಿ ಮುಖಂಡ ಅನಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ಮುರಳಿ, ಮಂಡಲ ವಾಜಿ ಅಧ್ಯಕ್ಷ ಎಚ್.ಸಿ. ಮಹೇಶ್, ಶಿವಕುವಾರಸ್ವಾಮಿ, ಡಿ.ವಿ. ನಾಗಪ್ಪ, ಜಿಪಂ ವಾಜಿ ಸದಸ್ಯ ಎಸ್.ಕೆ. ಮಂಜುನಾಥ್, ಎಚ್. ನಾಗರಾಜ್, ಜಯಲಕ್ಷ್ಮೀ ಮಹೇಶ್, ತಾಪಂ ವಾಜಿ ಸದಸ್ಯ ಸಿದ್ದೇಶ್, ಪಪಂ ವಾಜಿ ಅಧ್ಯಕ್ಷ ಜೆ.ವಿ. ನಾಗರಾಜ್, ಮಹಿಳಾ ಟಕ ಅಧ್ಯಕ್ಷೆ ರೇಖಾ ಶಿವಕುವಾರ್, ಮಂಜುನಾಯ್ಕ, ಧರ್ಮನಾಯ್ಕ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net