ಜಿಎಂ ವಿವಿಯಲ್ಲಿ ರಾಷ್ಟ್ರೀಯ ಸಮ್ಮೇಳನ

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಎಂ ವಿವಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಬಿ.ಕೆ. ವರುಣ್ ಜತೆ ಡಾ. ಎಚ್.ಎಸ್. ಕಿರಣ್‌ಕುಮಾರ್, ಡಾ. ಟಿ.ಎಂ. ವೀರಗಂಗಾಧರ ಸ್ವಾಮಿ, ಜಿ.ಎಸ್. ವಸಂತಕುಮಾರ್ ಇದ್ದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಎಂ ವಿವಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಬಿ.ಕೆ. ವರುಣ್ ಜತೆ ಡಾ. ಎಚ್.ಎಸ್. ಕಿರಣ್‌ಕುಮಾರ್, ಡಾ. ಟಿ.ಎಂ. ವೀರಗಂಗಾಧರ ಸ್ವಾಮಿ, ಜಿ.ಎಸ್. ವಸಂತಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಂದಿನ ತಲೆಮಾರಿನ ಮೂಲಸೌಕರ್ಯ ವಿಷಯಾಧಾರಿತ ಚರ್ಚೆ
  • 30 ಸಂಶೋಧನಾ ಲೇಖನಗಳ ಮಂಡನೆ
  • ಸಹ ಪ್ರಾಧ್ಯಾಪಕ ಡಾ. ಬಿ.ಕೆ. ವರುಣ್ ಮಾಹಿತಿ
ದಾವಣಗೆರೆ: ಜಿಎಂ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಜಿಎಂ ಸೈಂಟಿಫಿಕ್ ಇನ್ನೋವೇಷನ್ ಆ್ಯಂಡ್ ರೀಸರ್ಚ್ ಎಲ್‌ಎಲ್‌ಪಿ ಸಹಯೋಗದಲ್ಲಿ ಜು.30, 31ರಂದು ‘ಮುಂದಿನ ತಲೆಮಾರಿನ ಮೂಲಸೌಕರ್ಯ; ಕಾಂಕ್ರೀಟ್ ರಚನೆಗಳು, ಪರಿಸರ ಸುಸ್ಥಿರತೆ ಮತ್ತು ಸಾರಿಗೆ ಸಂಪರ್ಕ’ ವಿಷಯ ಕುರಿತು ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದೆ.
ದೇಶದ ವಿವಿಧೆಡೆಯಿಂದ ಶಿಕ್ಷಣ ತಜ್ಞರು, ಸಂಶೋಧಕರು, ಕೈಗಾರಿಕಾ ಪರಿಣಿತರು, ವಿದ್ಯಾರ್ಥಿಗಳು ಭಾಗಿಯಾಗಲಿದ್ದು, ಸಂಶೋಧನೆ, ಹೊಸ ತಂತ್ರಜ್ಞಾನ ಹಾಗೂ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದ ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಎಂದು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ಬಿ.ಕೆ. ವರುಣ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜುಲೈ 30ರಂದು ಬೆಳಗ್ಗೆ 10 ಗಂಟೆಗೆ ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಎಸ್. ಬಾಬು ನಾರಾಯಣ ಸಮ್ಮೇಳನ ಉದ್ಘಾಟಿಸುವರು. ಜಿಎಂ ವಿವಿ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಅಧ್ಯಕ್ಷತೆ ವಹಿಸುವರು.
ಸಹ ಉಪಕುಲಪತಿ ಡಾ. ಎಂ. ವೇಣುಗೋಪಾಲರಾವ್, ಕುಲಸಚಿವ ಡಾ.ಬಿ.ಎಸ್. ಸುನಿಲ್ ಕುಮಾರ್, ಸಂಶೋಧನಾ ಸಲಹೆಗಾರ ಡಾ. ಸಿ.ಎಸ್. ರಮೇಶ್, ಸ್ಕೂಲ್ ಆಫ್ ಇಂಜಿನಿಯರಿಂಗ್ ನಿರ್ದೇಶಕ ಡಾ.ಜೆ. ಪ್ರವೀಣ್, ಸಂಶೋಧನಾ ಮತ್ತು ನ್ಯಾವಿನ್ಯತೆ ಸಹ ಡೀನ್ ಡಾ. ಕೆ. ಸ್ವರೂಪ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ವೈ.ಬಿ. ಭರತರಾಜ್ ನೇತೃತ್ವದಲ್ಲಿ ನಡೆಯಲಿರುವ ಸಮ್ಮೇಳನದ ಸಂಘಟನಾ ಸಮಿತಿಯಲ್ಲಿ ತಮ್ಮೊಂದಿಗೆ ಸಹ ಪ್ರಾಧ್ಯಾಪಕ ಡಾ.ಎಚ್.ಎಸ್. ಕಿರಣ್‌ಕುಮಾರ್ ಇತರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಚ್.ಎಸ್. ಕಿರಣ್‌ಕುಮಾರ್, ಮಾರ್ಕೆಟಿಂಗ್ ವಿಭಾಗದ ಡೀನ್ ಡಾ. ಟಿ.ಎಂ. ವೀರಗಂಗಾಧರ ಸ್ವಾಮಿ, ಸಹಾಯಕ ಪಿಆರ್‌ಒ ಜಿ.ಎಸ್. ವಸಂತಕುಮಾರ್ ಇದ್ದರು.
ಭವಿಷ್ಯದ ತಂತ್ರಜ್ಞಾನದ ಮೇಲೆ ಸಮ್ಮೇಳನ ಬೆಳಕು
ಮುಂದಿನ ತಲೆಮಾರಿಗೆ ಕಾಂಕ್ರೀಟ್ ಹಾಗೂ ನಿರ್ಮಾಣ ಸಾಮಗ್ರಿಗಳು, ಸ್ಮಾರ್ಟ್ ಮತ್ತು ಬಾಳಿಕೆ ಸಾಮರ್ಥ್ಯದ ಇಂಜಿನಿಯರಿಂಗ್, ಸುಸ್ಥಿರ ಪರಿಸರ, ಭೂತಾಂತ್ರಿಕ ಮತ್ತು ಮಣ್ಣು ಆಧಾರಿತ ಇಂಜಿನಿಯರಿಂಗ್‌ನಲ್ಲಿನ ನಾವೀನ್ಯತೆ, ಸುಸ್ಥಿರ ಸಾರಿಗೆ ವ್ಯವಸ್ಥೆಗಳು ಮತ್ತು ಸ್ಮಾರ್ಟ್ ಮೊಬಿಲಿಟಿ, ಸಮಗ್ರ ಜಲಸಂಪನ್ಮೂಲ ಮತ್ತು ಹೈಡ್ರಾಲಿಕ್ ವ್ಯವಸ್ಥೆ, ಸ್ಮಾರ್ಟ್ ನಗರಾಭಿವೃದ್ಧಿ ಮತ್ತು ಮೂಲಸೌಕರ್ಯ ಮೊದಲಾದ ವಿಚಾರಗಳ ಬಗೆಗಿನ ಸಂಶೋಧನೆಗಳ ಬಗ್ಗೆ ಸಮ್ಮೇಳನ ಬೆಳಕು ಚೆಲ್ಲಲಿದೆ.
ಆಹ್ವಾನಿತ 50 ವಿವಿಧ ಸಂಶೋಧನಾ ಲೇಖನಗಳಲ್ಲಿ ಪರಿಶೀಲನೆಗೊಳಪಟ್ಟ 30 ಲೇಖನಗಳು ಮಂಡನೆಯಾಗಲಿವೆ. ಸಮ್ಮೇಳನದ ಮೂಲಕ ಜಿಎಂ ವಿವಿಯು ಸಂಶೋಧನೆಯ ಉನ್ನತಿ, ಅನ್ವೇಷಣೆ, ಕೈಗಾರಿಕಾ-ಶೈಕ್ಷಣಿಕ ಸಹಭಾಗಿತ್ವ ಹಾಗೂ ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿಯ ಬದ್ಧತೆಯನ್ನು ಉತ್ತೇಜಿಸುತ್ತಿದೆ. ಸಮ್ಮೇಳನ, ತಾಂತ್ರಿಕ ಅಧಿವೇಶನಗಳಲ್ಲಿ ಶಿಕ್ಷಕರು, ಸಂಶೋಧಕರು, ಕೈಗಾರಿಕಾ ಪರಿಣಿತರು, ವಿದ್ಯಾರ್ಥಿಗಳು ಭಾಗವಹಿಸುವಂತೆ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net