ನಾಲ್ವಡಿ ಕೃಷ್ಣರಾಜ ಒಡೆಯರ್ ಚಿರಸ್ಮರಣೀಯ

ಚನ್ನಗಿರಿ ತಾಲೂಕು ಕಚೇರಿಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಲಾಯಿತು. ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್,  ತಹಸೀಲ್ದಾರ್ ರುಕ್ಮಿಣಿಬಾಯಿ, ತಾಲೂಕು ಶಿರಸ್ತೇದಾರ್ ಮೋಹನ್, ಅರುಣ್, ಟಿಎಚ್‌ಒ ಡಾ. ಶಿವಕುಮಾರ್, ಆರೋಗ್ಯ ಅಧಿಕಾರಿ ಲೋಕೇಶ್, ರುದ್ರಸ್ವಾಮಿ ಇತರರು ಇದ್ದರು. rajarshi
ಚನ್ನಗಿರಿ ತಾಲೂಕು ಕಚೇರಿಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಲಾಯಿತು. ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್, ತಹಸೀಲ್ದಾರ್ ರುಕ್ಮಿಣಿಬಾಯಿ, ತಾಲೂಕು ಶಿರಸ್ತೇದಾರ್ ಮೋಹನ್, ಅರುಣ್, ಟಿಎಚ್‌ಒ ಡಾ. ಶಿವಕುಮಾರ್, ಆರೋಗ್ಯ ಅಧಿಕಾರಿ ಲೋಕೇಶ್, ರುದ್ರಸ್ವಾಮಿ ಇತರರು ಇದ್ದರು. rajarshi
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್ ಹೇಳಿಕೆ
  • ಮೊಟ್ಟ ಮೊದಲು ಮೀಸಲಾತಿ ಪರಿಕಲ್ಪನೆ
ಚನ್ನಗಿರಿ: ಮೈಸೂರನ್ನು ಮಾದರಿ ರಾಜ್ಯವನ್ನಾಗಿಸಿದ ಅಭಿವೃದ್ಧಿಯ ದಿವ್ಯ ಚೇತನ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನರ ಮನದಲ್ಲಿ ಜೀವಂತವಾಗಿದ್ದಾರೆ ಎಂದು ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್ ಹೇಳಿದರು. rajarshi
ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ನಾಡಹಬ್ಬಗಳ ಸಮಿತಿ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಕಾಲ ಮೈಸೂರಿನ ಸುವರ್ಣಯುಗ ಎಂದು ಕರೆಯಲಾಗಿದೆ. ಮೊಟ್ಟಮೊದಲು ಮೀಸಲಾತಿ ಪರಿಕಲ್ಪನೆ ತಂದು ಕೊಟ್ಟರು. ಇವರನ್ನು ಮೈಸೂರಿನ ನಿರ್ಮಾತೃ ಎಂದು ಕರೆಯಲಾಗಿದೆ. ಅವರ ಜನಪರ ಕಾಳಜಿ ಹಾಗೂ ಧರ್ಮ ನಿರಪೇಕ್ಷ ಆಡಳಿತವನ್ನು ನೋಡಿದಂತಹ ಮಹಾತ್ಮ ಗಾಂಧೀಜಿ ರಾಜರ್ಷಿ ಎಂದು ಕರೆದಿದ್ದರು ಎಂದರು. 1894ರಲ್ಲಿ ತಂದೆಯ ಮರಣಾನಂತರ ಅಧಿಕಾರಕ್ಕೆ ಬಂದರು. ಆಗ ಅವರಿಗೆ ಕೇವಲ 10ವರ್ಷ ವಯಸ್ಸು. ರಾಜ್ಯದ ಜವಾಬ್ದಾರಿಯನ್ನು ತೆಗೆದುಕೊಂಡು 1902ರವರೆಗೆ ಆಡಳಿತದ ಜವಾಬ್ದಾರಿಯನ್ನು ನಿರ್ವಹಿಸಿದ್ದರು.
ತಮ್ಮ ಆಸ್ಥಾನದಲ್ಲಿದ್ದ ದಿವಾನ್ ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರ ನೆರವಿನಿಂದ ಏಷ್ಯಾದಲ್ಲಿಯೇ ಮೈಸೂರನ್ನು ಮಾದರಿ ರಾಜ್ಯವನ್ನಾಗಿ ಮಾಡಿದರು. ಶಿಕ್ಷಣ, ಕೈಗಾರಿಕೆ, ನೀರಾವರಿ ಮತ್ತು ಕಲೆಗೆ ಅಪಾರ ಕೊಡುಗೆ ನೀಡಿದರು. ಸಮಾಜದಲ್ಲಿ ಪರಿವರ್ತನೆಗೆ ಮುನ್ನುಡಿ ಬರೆದರು ಮತ್ತು ಬೆಂಗಳೂರು ನಗರಕ್ಕೆ ಕುಡಿಯುವ ನೀರು ನೀಡಿದರು, ಕನ್ನಂಬಾಡಿ ಕಟ್ಟಲು ಸ್ವಂತ ಒಡವೆ ಮಾರಾಟ ಮಾಡಿದರು. ರಾಜ್ಯದ ಪ್ರತಿಯೊಬ್ಬರು ಒಡೆಯರನ್ನು, ಅವರ ಸಾಧನೆಯನ್ನು ನೆನೆಯಬೇಕು ಎಂದರು.
ಗ್ರೇಡ್-2 ತಹಸೀಲ್ದಾರ್ ರುಕ್ಮಿಣಿಬಾಯಿ, ಶಿರಸ್ತೇದಾರ್ ಮೋಹನ್, ಅರುಣ್, ತಾಲೂಕು ವೈದ್ಯಾಧಿಕಾರಿ ಡಾ. ಶಿವಕುಮಾರ್, ಆರೋಗ್ಯ ಅಧಿಕಾರಿ ಲೋಕೇಶ್, ರುದ್ರಸ್ವಾಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net