ಕರ್ನಾಟಕದಲ್ಲಿ ಬರೋಬ್ಬರಿ 26 ವರ್ಷಗಳ ಕಾಲ ಬೆಂಗಳೂರನ್ನು ಆಡಳಿತ ಕೇಂದ್ರವಾಗಿಟ್ಟುಕೊಂಡು ಇಂದಿನ ಚಿಕ್ಕಪೇಟೆ, ಅಕ್ಕಿಪೇಟೆ, ಗಾಣಿಗರ ಪೇಟೆಗಳನ್ನು ಅಭಿವೃದ್ಧಿಪಡಿಸಿದ ಕೀರ್ತಿ ಷಹಾಜಿ ಮಹಾರಾಜರಿಗೆ ಸಲ್ಲುತ್ತದೆ. ಛತ್ರಪತಿ ಶಿವಾಜಿ ಮಹಾರಾಜರಿಗೆ ಸ್ವತಂತ್ರವಾಗಿ ದೇಶ ಆಳುವ ಧೈರ್ಯ ಮತ್ತು ರಾಜಕೀಯ ಅನುಭವ ನೀಡಿದ್ದೇ ಇವರು. ಆದರೆ, ಇಂತಹ ಮಹಾಪುರುಷನ ಸಮಾಧಿ ಇಂದು ಅನಾಥವಾಗಿರುವುದು ಬೇಸರದ ಸಂಗತಿ. ಇದೇ ಬೇರೆ ಕೋಮಿನ ಸಮಾಧಿಯಾಗಿದ್ದರೆ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತಂದು ಅಭಿವೃದ್ಧಿಪಡಿಸುತ್ತಿದ್ದರು. ಈ ಸ್ಥಳದ ಜೀರ್ಣೋದ್ಧಾರಕ್ಕಾಗಿ ಪ್ರತಿಯೊಬ್ಬ ಹಿಂದೂಗಳು ಒಗ್ಗೂಡಬೇಕಿದೆ ಎಂದರು. ಮರಾಠ ಸಮಾಜದ ತಾಲೂಕಾಧ್ಯಕ್ಷ ಎಂ.ಬಿ. ಶಿವಾಜಿರಾವ್, ವೇದಮೂರ್ತಿ, ಬಜರಂಗದ ದಳ ಜಿಲ್ಲಾ ಸಂಚಾಲಕ ಎನ್. ರವಿಚಂದ್ರ, ಅಣ್ಣೋಜಿರಾವ್, ವಿಷ್ಣು, ಶಿವಾಜಿ, ಕಾಯಿ ಮಂಜಣ್ಣ ಇತರರಿದ್ದರು.