ನಿತ್ಯವೂ ಬಳಕೆಯಾಗಲಿ ಕನ್ನಡ

ದಾವಣಗೆರೆಯ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕೆ.ಜಿ. ಯಲ್ಲಪ್ಪ, ಪೃಥ್ವಿ ಶಾಮನೂರು, ಡಾ. ಗಣೇಶ್ ಡಿ.ಬಿ, ಡಾ. ಪ್ರಕಾಶ ಕೆ.ಬಿ, ಪ್ರೊ. ಸವಿತಾ ಮಮಡಾಪುರ, ಡಾ. ರಾಹುಲ್ ಪಾಟೀಲ್ ಇದ್ದರು.
ದಾವಣಗೆರೆಯ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕೆ.ಜಿ. ಯಲ್ಲಪ್ಪ, ಪೃಥ್ವಿ ಶಾಮನೂರು, ಡಾ. ಗಣೇಶ್ ಡಿ.ಬಿ, ಡಾ. ಪ್ರಕಾಶ ಕೆ.ಬಿ, ಪ್ರೊ. ಸವಿತಾ ಮಮಡಾಪುರ, ಡಾ. ರಾಹುಲ್ ಪಾಟೀಲ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಕರವೇ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ಹೇಳಿಕೆ
  • ಕನ್ನಡಕ್ಕೆ ಕವಿಗಳ ಅಪಾರ ಕೊಡುಗೆ
  • ಜೈನ್ ಕಾಲೇಜಿನಲ್ಲಿ ರಾಜ್ಯೋತ್ಸವ ಸಮಾರಂಭ
ದಾವಣಗೆರೆ : ಪ್ರತಿಯೊಬ್ಬರೂ ನಿತ್ಯವೂ ಕನ್ನಡವನ್ನು ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ಹೇಳಿದರು.
ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಭಾಷೆಗೆ 2 ಸಾವಿರಕ್ಕೂ ಹೆಚ್ಚು ವರ್ಷಗಳ ಐತಿಹಾಸಿಕ ಪರಂಪರೆ ಇದೆ. ರನ್ನ, ಪೊನ್ನ, ಪಂಪ ಮುಂತಾದ ಕವಿಗಳು ಸೂಕ್ತಿಗಳ ಮೂಲಕ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಚಿತ್ರನಟ ಪೃಥ್ವಿ ಶಾಮನೂರು ಮಾತನಾಡಿ, ಕನ್ನಡವನ್ನು ನಿತ್ಯದ ಬದುಕಿನಲ್ಲಿ ಬಳಕೆ ಮಾಡುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಾವು ನಟಿಸಿದ ಕೆಲವು ಸಿನಿಮಾ ಸಂಭಾಷಣೆಗಳನ್ನು ಹೇಳಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಗಣೇಶ್ ಡಿ.ಬಿ. ಮಾತನಾಡಿ, ಕನ್ನಡಕ್ಕೆ ಅತ್ಯಂತ ಪುರಾತನ ಇತಿಹಾಸವಿದೆ. ವಿಶ್ವದ ಅನೇಕ ದೇಶಗಳು ತಮ್ಮ ಮಾತೃಭಾಷೆಗೆ ಮೊದಲ ಆದ್ಯತೆ ನೀಡುತ್ತವೆ. ನಾವೂ ಕೂಡ ಕನ್ನಡವನ್ನು ಪ್ರತಿದಿನ ಬಳಸುವ ಮೂಲಕ ಭಾಷೆಯ ಸಂರಕ್ಷಣೆ ಮತ್ತು ವಿಕಸನಕ್ಕೆ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಡೀನ್ ಅಕಾಡೆಮಿಕ್ಸ್ ಡಾ. ಪ್ರಕಾಶ ಕೆ.ಬಿ, ಸಂಯೋಜಕಿ ಪ್ರೊ. ಸವಿತಾ ಮಮಡಾಪುರ, ಸಂಚಾಲಕ ಡಾ. ರಾಹುಲ್ ಪಾಟೀಲ್ ಇದ್ದರು. ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಧರಿಸಿದ್ದ ಕೆಂಪು-ಹಳದಿ ವಸ್ತ್ರಗಳು ಸಮಾರಂಭದಲ್ಲಿ ರಂಗು ತುಂಬಿದವು. ಉತ್ಸಾಹಭರಿತ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಆವರಣ ಕಳೆಗಟ್ಟಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net