ಮಂಜು ಮೊಗವೀರ್ ಮಾತನಾಡಿ ದೇಹದಾರ್ಢ್ಯ ಬಹು ವೆಚ್ಚದಾಯಕವಾದುದು. ವಿವಿಧ ಗಮನಾರ್ಹ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ಪಟುಗಳಿಗೆ ಇತರೆ ರಾಜ್ಯಗಳಲ್ಲಿ ಪ್ರಾಯೋಜಕತ್ವ ಸೇರಿ ಉತ್ತಮ ಸ್ಪಂದನೆ ಸಿಗುತ್ತಿದೆ. ಇದು ಕರ್ನಾಟಕದ ಮಟ್ಟಿಗೆ ಆಗುತ್ತಿಲ್ಲ. ಇದು ಸಾಧ್ಯವಾದರೆ ಹೆಚ್ಚಿನ ಪಟುಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಹ್ಮದ್ ಜಿಲಾನಿ, ಮಹೇಶ್, ಕೌಶಿಕ್ ಇತರರಿದ್ದರು.