ಕಂಪ್ಯೂಟರ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಿ

ನ್ಯಾಮತಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಂಪ್ಯೂಟರ್ ತರಗತಿ ಉದ್ಘಾಟನೆಯಲ್ಲಿ ಡಾ.ಡಿ.ಸಿ. ರಾಜಪ್ಪ, ಡಿ.ಜಿ. ಶಾಂತನಗೌಡ, ಸರ್ಜಿ, ಬಿ.ಎಚ್. ಮಂಜಪ್ಪ, ಪ್ರೊ.ಡಾ. ಮಲ್ಲಿಕ್ ಫಕೀರ್ ಇಂಗಳಗಿ, ಡಾ.ಡಿ.ಎಸ್. ಫಾಲಾಕ್ಷಪ್ಪ ಇತರರಿದ್ದರು.
ನ್ಯಾಮತಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಂಪ್ಯೂಟರ್ ತರಗತಿ ಉದ್ಘಾಟನೆಯಲ್ಲಿ ಡಾ.ಡಿ.ಸಿ. ರಾಜಪ್ಪ, ಡಿ.ಜಿ. ಶಾಂತನಗೌಡ, ಸರ್ಜಿ, ಬಿ.ಎಚ್. ಮಂಜಪ್ಪ, ಪ್ರೊ.ಡಾ. ಮಲ್ಲಿಕ್ ಫಕೀರ್ ಇಂಗಳಗಿ, ಡಾ.ಡಿ.ಎಸ್. ಫಾಲಾಕ್ಷಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಡಿ.ಸಿ. ರಾಜಪ್ಪ ಹೇಳಿಕೆ
  • ಕಂಪ್ಯೂಟರ್ ತರಗತಿ ಉದ್ಘಾಟನೆ
  • ದೇಶದ ಅಭಿವೃದ್ಧಿಗೆ ಶಿಕ್ಷಣ ಅತಿ ಮುಖ್ಯ
ನ್ಯಾಮತಿ: ದಾನಿಗಳ ಹಣದಿಂದ ಶಾಲೆಗೆ ನೀಡಿರುವ ಕಂಪ್ಯೂಟರ್‌ಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಿವೃತ್ತ ಬೆಂಗಳೂರು ಉಪ ಪೊಲೀಸ್ ಮಹಾನಿರೀಕ್ಷಕ ಡಾ.ಡಿ.ಸಿ. ರಾಜಪ್ಪ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಗುರುಶಿಷ್ಯರ ಸಂಗಮ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಂಪ್ಯೂಟರ್ ತರಗತಿ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗುರು ಶಿಷ್ಯರ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ದಾನಿಗಳ ಸಹಾಯದಿಂದ ಸರ್ಕಾರಿ ಬಾಲಕಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಮತ್ತು ಕರ್ನಾಟಕ ಪಬ್ಲಿಕ್ ಶಾಲೆಗೆ ಒಟ್ಟು 50 ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದೆ ಎಂದರು. ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ದೇಶದ ಅಭಿವೃದ್ಧಿಗೆ ಶಿಕ್ಷಣ ಅತಿ ಮುಖ್ಯ. ವಿದ್ಯಾರ್ಥಿಗಳು ಶಿಕ್ಷಕರು ಕಲಿಸುವ ಪಠ್ಯದ ಜತೆಗೆ ಉತ್ತಮ ಸಂಸ್ಕಾರ ಕಲಿತು ದೇಶದ ಪ್ರಗತಿಯಲ್ಲಿ ಪಾಲುದಾರರಾಗುವಂತೆ ಹೇಳಿದರು.
ವಿಧಾನ ಪರಿಷತ್ ಸದಸ್ಯ ಧನಂಜಯ್ಯ ಸರ್ಜಿ, ಬಿ.ಎಚ್. ಮಂಜಪ್ಪ, ನಿವೃತ್ತ ಪ್ರೊ.ಡಾ. ಮಲ್ಲಿಕ್ ಫಕೀರ್ ಇಂಗಳಗಿ, ಡಾ.ಡಿ.ಎಸ್. ಫಾಲಾಕ್ಷಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ. ರುದ್ರಪ್ಪಗೌಡರು ವಹಿಸಿದ್ದರು. ಚಾರಿಟಬಲ್ ಟ್ರಸ್ಟ್‌ನ ಚಿನ್ನಿಕಟ್ಟೆ ಬಿ.ಎಂ. ರೇಣುಕಯ್ಯ, ಜಿ. ಶಿವಣ್ಣ, ಎಸ್.ಆರ್. ಬಸವರಾಜಪ್ಪ, ಎಂ.ಎಚ್. ಕುಮಾರ್, ಸಿ.ಜಿ. ಮರುಳಸಿದ್ದಪ್ಪ, ಕೆ. ಮಹೇಶ್ವರಪ್ಪ, ಎಂ. ಓಂಕಾರಪ್ಪ, ಡಾ.ಎಸ್. ಮಲ್ಲಿಕಾರ್ಜುನಪ್ಪ, ಪ್ರಾಚಾರ್ಯ ವಿ.ಪಿ. ಪೂರ್ಣಾನಂದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net