ಮಹೇಶ್ವರ ಸ್ವಾಮಿ ಜಾತ್ರೋತ್ಸವ ಸಂಪನ್ನ Fair

ಹರಿಹರ ತಾಲೂಕಿನ ದೀಟೂರು ಗ್ರಾಮದಲ್ಲಿ ಮಹೇಶ್ವರ ಸ್ವಾಮಿ ಮತ್ತು ಮಲ್ಲಿಕಾರ್ಜುನ ಸ್ವಾಮಿಯ ಪಲ್ಲಕ್ಕಿ ಉತ್ಸವದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಪೀಠದ ಚೆನ್ನಪ್ಪ ಸ್ವಾಮಿ ದೇವರು.Fair
ಹರಿಹರ ತಾಲೂಕಿನ ದೀಟೂರು ಗ್ರಾಮದಲ್ಲಿ ಮಹೇಶ್ವರ ಸ್ವಾಮಿ ಮತ್ತು ಮಲ್ಲಿಕಾರ್ಜುನ ಸ್ವಾಮಿಯ ಪಲ್ಲಕ್ಕಿ ಉತ್ಸವದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಪೀಠದ ಚೆನ್ನಪ್ಪ ಸ್ವಾಮಿ ದೇವರು.Fair
Published on

ಪ್ರಮುಖ ಮುಖ್ಯಾಂಶಗಳು

  • ಹರಿಹರ ತಾಲೂಕಿನ ದಿಟೂರು ಗ್ರಾಮ
  • ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
  • ತುಂಗಭದ್ರಾ ನದಿಯ ತಟದಲ್ಲಿ ಮಹೇಶ್ವರ ಸ್ವಾಮಿ
ಹರಿಹರ: ತಾಲೂಕಿನ ದಿಟೂರು ಗ್ರಾಮದಲ್ಲಿ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಮೂರು ದಿನಗಳ ಕಾಲ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.
ಸೋಮವಾರ ರಾತ್ರಿ ಸ್ವಾಮಿಯ ಕಾರ್ತಿಕ ಮಹೋತ್ಸವದಿಂದ ಆರಂಭವಾದ ಜಾತ್ರಾ ಮಹೋತ್ಸವ ಬುಧವಾರ ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ರಸಮಂಜರಿ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
ಮಂಗಳವಾರ ತುಂಗಭದ್ರಾ ನದಿಯ ತಟದಲ್ಲಿ ಮಹೇಶ್ವರ ಸ್ವಾಮಿಗೆ ಬೆಳಗ್ಗೆ ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆದವು. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ಬುಧವಾರ ಸಂಜೆ ಮಹೇಶ್ವರ ಸ್ವಾಮಿ ಮತ್ತು ಮಲ್ಲಿಕಾರ್ಜುನ ಸ್ವಾಮಿಯ ಪಲ್ಲಕ್ಕಿ ಉತ್ಸವವು ಡೊಳ್ಳು, ಸಮಾಳ, ಪುರವಂತರು,ಬ್ಯಾಂಡ್ ಸೆಟ್ ಮುಂತಾದ ಕಲಾ ಮೇಳಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ದಿಟೂರು ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ಪೀಠದ ಚೆನ್ನಪ್ಪ ಸ್ವಾಮಿ ದೇವರ ಸಾನ್ನಿಧ್ಯದಲ್ಲಿ ಸಂಚರಿಸಿತು.
ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಭಕ್ತರು ತಮ್ಮ ಮನೆಯ ಮುಂದೆ ಉತ್ಸವ ಬರುತ್ತಿದ್ದಂತೆ ಹಣ್ಣು ಕಾಯಿ ಮಾಡಿಸಿ ಭಕ್ತಿ ಸಮರ್ಪಿಸಿದರು. ಪ್ರಮುಖ ವೃತ್ತದಲ್ಲಿ ಬಾಣ ಬಿರುಸಿನ ಸಿಡಿಮದ್ದಿನ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಗ್ರಾಪಂ ಅಧ್ಯಕ್ಷ ಪರಶುರಾಮ, ಉಪಾಧ್ಯಕ್ಷ ವಿರೂಪಾಕ್ಷಪ್ಪ ಆನವೇರಿ, ಎ.ಕೆ.ಚಂದ್ರಪ್ಪ, ಚಂದ್ರಶೇಖರಪ್ಪ ಪೂಜಾರ್, ಗೌಡ್ರು ಈಶಪ್ಪ, ಕಟ್ಟೆಪ್ಪರ ಚಂದ್ರಶೇಖರ್, ನಿರಂಜನ ದೀಟೂರು, ಟಿ.ರಾಜು, ಎಸ್‌ಡಿಎಂಸಿ ಅಧ್ಯಕ್ಷ ಡಿ.ಸಿ.ಮಹೇಶ್, ತಳವಾರ ರಾಜಪ್ಪ, ಡಿ.ಎಸ್.ರವಿ, ಎಲ್.ಮಹೇಶಪ್ಪ, ವಾಗೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net