ಲಿಂಗಾಯತಕ್ಕಿದೆ ಬಸವಪೂರ್ವ ಇತಿಹಾಸ

ದಾವಣಗೆರೆಯಲ್ಲಿ ಭಾನುವಾರ ನಡೆದ ‘ಬಸವಶೈವದಲ್ಲಿ ಹಿಂದುತ್ವ’ ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಡಾ. ಡಿ.ಎ. ಉಪಾಧ್ಯ, ಬಿ.ಸಿ. ಉಮಾಪತಿ, ಎಸ್.ಸಿ. ಕಾಶೀನಾಥ್, ವಾಣಿ ಶಿವಣ್ಣ, ಅಂದನೂರು ಮುರುಗೇಶ್, ಬಾದಾಮಿ ಜಯಣ್ಣ, ವಿ. ಶಂಭುಲಿಂಗಪ್ಪ, ಎಂ.ಬಿ. ನಟರಾಜ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಡಾ. ಡಿ.ಎ. ಉಪಾಧ್ಯ ಹೇಳಿಕೆ
  • ಕೃತಿ ಲೋಕಾರ್ಪಣೆ ಸಮಾರಂಭ
  • ‘ಬಸವಶೈವದಲ್ಲಿ ಹಿಂದುತ್ವ’
ದಾವಣಗೆರೆ : ಲಿಂಗಾಯತ ಪರಿಕಲ್ಪನೆ ಶರಣರಿಂದ ಆರಂಭವಾಗಿಲ್ಲ, ಅದಕ್ಕೆ ಬಸವಪೂರ್ವ ಇತಿಹಾಸವಿದೆ ಎಂದು ಸಾಹಿತಿ, ಸಂಶೋಧಕ ಡಾ. ಡಿ.ಎ. ಉಪಾಧ್ಯ ಹೇಳಿದರು.
ಹರ ಸಾಹಿತ್ಯ ಸಂಕುಲದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ, ತಾವೇ ರಚಿಸಿದ ‘ಬಸವಶೈವದಲ್ಲಿ ಹಿಂದುತ್ವ’ ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಬಸವ ಪೂರ್ವದಲ್ಲಿ ಲಿಂಗಾಯತ ಇತ್ತು ಎಂಬುದಕ್ಕೆ ಅನೇಕ ಉದಾಹರಣೆಗಳು ದೊರೆಯುತ್ವೆ. ಆದರೆ ಬಸವಣ್ಣ ಲಿಂಗಾಯತರನ್ನು ಉತ್ತುಂಗಕ್ಕೆ ಏರಿಸಿದರು ಎಂದು ಅಭಿಪ್ರಾಯಪಟ್ಟರು.
ಸಿಂಧು ಬಯಲಿನ ನಾಗರಿಕತೆಯಲ್ಲೇ ಲಿಂಗಾಯತ ಇತ್ತು. ಅಲ್ಲಿ ದೊರೆತ ಶಿವನ ಮೂರ್ತಿಗಳು, ಲಿಂಗ ಅದಕ್ಕೆ ಸಾಕ್ಷಿಯಾಗಿವೆ. ಮಹಾಭಾರತದಲ್ಲೂ ಲಿಂಗಾಯತದ ಉಲ್ಲೇಖವಿದೆ. ಕೊಪ್ಪಳ ಜಿಲ್ಲೆಯಲ್ಲಿ ದೊರೆತ ಶಾಸನಗಳಲ್ಲಿ ಲಿಂಗಾಯತ ಮತ್ತು ವೀರಶೈವದ ಪ್ರಸ್ತಾಪವಿದೆ ಎಂದು ತಿಳಿಸಿದರು.
ವಚನಗಳಲ್ಲಿ ಸಂಸ್ಕೃತ ಉಕ್ತಿಗಳಿವೆ. ವೇದ, ಆಗಮ, ಪುರಾಣ, ಶಾಸ್ತ್ರಗಳನ್ನು ಶರಣರು ತಿರಸ್ಕರಿಸಲಿಲ್ಲ. ಒಳ್ಳೆಯದನ್ನು ಸ್ವೀಕರಿಸಿದರು. ಆದರೆ ವಚನಗಳಲ್ಲಿ ತಮ್ಮದೇ ಆದ ಮುದ್ರೆಯನ್ನು ಒತ್ತಿದರು. ಶರಣರು ತಪ್ಪು ಮಾಡಲಿಲ್ಲ, ಹಿಂದುತ್ವದ ವಿರುದ್ಧವೂ ಹೋಗಲಿಲ್ಲ ಎಂದು ವಿಶ್ಲೇಷಿಸಿದರು.
‘ನಾವು ಹಿಂದುಗಳಲ್ಲ’ ಎಂದು ಹೇಳುವವರು ಈ ಅಂಶಗಳನ್ನು ಪರಿಶೀಲಿಸಬೇಕು, ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹರ ಸಾಹಿತ್ಯ ಸಂಕುಲದ ಅಧ್ಯಕ್ಷ ಎಸ್.ಸಿ. ಕಾಶೀನಾಥ್ ಮಾತನಾಡಿ, ಭಾರತಕ್ಕೆ ಧಾರ್ಮಿಕ ನೆಲೆಗಟ್ಟಿದೆ. ದಾಸ ಸಾಹಿತ್ಯ, ವಚನ ಸಾಹಿತ್ಯ ಹೀಗೆ ವೈವಿಧ್ಯಮಯ ಕೊಡುಗೆ ಇದೆ. ಬಸವಣ್ಣ ಹಿಂದುತ್ವದ ವಿರೋಧಿ ಆಗಿರಲಿಲ್ಲ ಎಂದು ತಿಳಿಸಿದರು.
ಓಂಕಾರಯ್ಯ ತವನಧಿ ಪ್ರಾಸ್ತಾವಿಕ ಮಾತನಾಡಿದರು.ಉದ್ಯಮಿಗಳಾದ ವಾಣಿ ಶಿವಣ್ಣ, ಅಂದನೂರು ಮುರುಗೇಶ್, ಬಾದಾಮಿ ಜಯಣ್ಣ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಂಚಾಲಕ ವಿ. ಶಂಭುಲಿಂಗಪ್ಪ, ಸ್ವಾಗತ ಸಮಿತಿಯ ಕಾರ್ಯದರ್ಶಿ ಎಂ.ಬಿ. ನಟರಾಜ ಇದ್ದರು. ವಿನಾಯಕ ರಾನಡೆ ಸ್ವಾಗತಿಸಿದರು. ಸಂಗಮೇಶ ಅಂಗಡಿ ನಿರೂಪಿಸಿದರು.

ಒಳ ಪಂಗಡಗಳು ಒಂದಾಗಲಿ

ವೀರಶೈವ-ಲಿಂಗಾಯತ ಎರಡೂ ಒಂದೇ. ಒಳ ಪಂಗಡಗಳು ಒಂದಾದರೆ ವೀರಶೈವ ಲಿಂಗಾಯತ ಧರ್ಮ ಉಳಿಯುತ್ತದೆ ಎಂದು ವಾಣಿಜ್ಯೋದ್ಯಮಿ ಬಿ.ಸಿ. ಉಮಾಪತಿ ಹೇಳಿದರು.
ಗುರು-ವಿರಕ್ತರು ಒಂದೇ ನಾಣ್ಯದ ಎರಡು ಮುಖಗಳು. ನಮ್ಮ ಪರಂಪರೆಯ ಬಗ್ಗೆ ಅಭಿಪ್ರಾಯ ಭೇದ ಇರಬಾರದು. ನಮ್ಮ ಆಚರಣೆಗಳು ವೈಜ್ಞಾನಿಕವಾಗಿವೆ. ಅವುಗಳ ಅರ್ಥ ತಿಳಿಯಬೇಕು ಎಂದರು.
ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಕೊಡಬೇಕು. ನಮ್ಮ ಧಾರ್ಮಿಕ ಪರಂಪರೆ, ಆಚರಣೆಗಳ ಬಗ್ಗೆ ತಿಳಿಸಬೇಕು. ಧರ್ಮವನ್ನು ಉಳಿಸಬೇಕು ಎಂದು ಹೇಳಿದರು.
ಬಸವಶೈವದಲ್ಲಿ ಹಿಂದುತ್ವ ಇದೆ. ಶರಣರ ಸಾಹಿತ್ಯದ ಹೃದಯವೇ ಹಿಂದುತ್ವ. ಹಿಂದು ಎಂಬುದು ಜೀವನ ವಿಧಾನ. ಈ ಅಂಶಗಳನ್ನು ಪುಷ್ಟೀಕರಿಸಲು ಲೇಖಕರು 5 ಸಾವಿರ ವಚನಗಳನ್ನು ಅಧ್ಯಯನ ಮಾಡಿ 550 ವಚನಗಳನ್ನು ಉಲ್ಲೇಖಿಸಿದ್ದಾರೆ. ಸತ್ಯವನ್ನು ಹೆಕ್ಕಿ ತೆಗೆದು ಸಂಶೋಧನೆ ಮಾಡಿದ್ದಾರೆ. ಸಮಾಜಕ್ಕೆ ಇದನ್ನು ತಿಳಿಸಬೇಕಿದೆ.
"

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net