ಪ್ರಮಾಣಿತ ಬೀಜ-ಗೊಬ್ಬರ ಖರೀದಿಸಲಿ seeds

ಮಾಯಕೊಂಡ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಮೆಕ್ಕೆಜೋಳ ಮತ್ತು ತೊಗರಿ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸುನಿತಾ ಹನುಮಂತಪ್ಪ,  ಲಕ್ಷ್ಮಣ, ಕೆ. ಬೀರಪ್ಪ, ಎಸ್.ಜಿ. ರುದ್ರೇಶ್ ಇತರರಿದ್ದರು.seeds
ಮಾಯಕೊಂಡ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಮೆಕ್ಕೆಜೋಳ ಮತ್ತು ತೊಗರಿ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸುನಿತಾ ಹನುಮಂತಪ್ಪ, ಲಕ್ಷ್ಮಣ, ಕೆ. ಬೀರಪ್ಪ, ಎಸ್.ಜಿ. ರುದ್ರೇಶ್ ಇತರರಿದ್ದರು.seeds
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಪಂ ಅಧ್ಯಕ್ಷೆ ಸುನಿತಾ ಹನುಮಂತಪ್ಪ ಸಲಹೆ
  • ಬಿತ್ತನೆ ಬೀಜ ವಿತರಣೆ
ಮಾಯಕೊಂಡ: ಮೆಕ್ಕೆಜೋಳ ಮತ್ತು ತೊಗರಿ ಬೀಜಗಳನ್ನು ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಯಿಂದ ಅಧಿಕೃತ ಪರವಾನಗಿ ಪಡೆದ ಅಂಗಡಿಗಳಲ್ಲಿ ಖರೀದಿಸಿ ರಸೀದಿ ಪಡೆಯಬೇಕು ಎಂದು ಗ್ರಾಪಂ ಅಧ್ಯಕ್ಷೆ ಸುನಿತಾ ಹನುಮಂತಪ್ಪ ಹೇಳಿದರು. seeds
ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಮುಂಗಾರು ಹಂಗಾಮಿನ ಮೆಕ್ಕೆಜೋಳ ಮತ್ತು ತೊಗರಿ ಬಿತ್ತನೆ ಬೀಜಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಮತ್ತು ಜಮೀನಿನ ಉಳುಮೆ ವೆಚ್ಚ ಸೇರಿ ಮೆಕ್ಕೆಜೋಳ ಬೆಳೆಯಲು ಪ್ರತಿ ಎಕರೆಗೆ 20 ಸಾವಿರ ರೂಪಾಯಿಗಿಂತಲೂ ಹೆಚ್ಚು ಖರ್ಚು ಬರುತ್ತಿದೆ. ಆದರೆ, ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ. ಇದರಿಂದ ಕಂಗಾಲಾದ ರೈತರು ಈ ಬಾರಿ ಮೆಕ್ಕೆಜೋಳ ಬಿತ್ತನೆ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಸಾಧ್ಯತೆ ಇದೆ ಎಂದರು.
ಗ್ರಾಪಂ ಹಿರಿಯ ಸದಸ್ಯ ಲಕ್ಷ್ಮಣ ಮಾತನಾಡಿ, ಕಡಿಮೆ ದರ ಎಂಬ ಕಾರಣಕ್ಕೆ ರೈತರು ಪ್ಯಾಕೆಟ್ ಇಲ್ಲದ ಅನಧಿಕೃತ ಬೀಜ ಖರೀದಿಸಬಾರದು. ಅವು ಸರಿಯಾಗಿ ಮೊಳಕೆ ಒಡೆಯದೆ ಇಳುವರಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಕೃಷಿ ಇಲಾಖೆ ಶಿಫಾರಸು ಮಾಡಿರುವ, ಉತ್ತಮ ಕಂಪನಿಗಳು ಪ್ಯಾಕ್ ಮಾಡಿದ ಬೀಜಗಳನ್ನೇ ಬಳಸಬೇಕು ಎಂದು ಸೂಚಿಸಿದರು.
ರೈತರು ಮಾಹಿತಿ ಕೊರತೆ ಯಿಂದಾಗಿ ಒಂದೇ ಬೆಳೆಯನ್ನು ಅವಲಂಬಿಸಿ ಸಾಲಗಾರರಾಗುತ್ತಿದ್ದಾರೆ. ಆದ್ದರಿಂದ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಪ್ರತಿ 15 ದಿನ ಅಥವಾ ತಿಂಗಳಿಗೊಮ್ಮೆ ರೈತರ ಸಭೆ ಕರೆಯಬೇಕು. ಇತ್ತೀಚಿನ ವೈಜ್ಞಾನಿಕ ಕೃಷಿ ಪದ್ಧತಿ ಮತ್ತು ಪರ್ಯಾಯ ಬೆಳೆಗಳ ಕುರಿತು ಸೂಕ್ತ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ. ಬೀರಪ್ಪ ಮಾತನಾಡಿ, ಬಿತ್ತನೆ ಬೀಜ ಪಡೆಯಲು ರೈತರು ಎಫ್‌ಐಡಿ ನಮೂದಾಗಿರುವ ಖಾತೆದಾರರ ಆಧಾರ್ ಕಾರ್ಡ್ ತರಬೇಕು. ಪ್ರತಿ ಎಕರೆಗೆ 4 ಕೆಜಿಯ 2 ಪ್ಯಾಕೆಟ್‌ನಂತೆ ಒಟ್ಟು 8 ಕೆಜಿ ಮೆಕ್ಕೆಜೋಳ ಬೀಜ ವಿತರಿಸಲಾಗುವುದು. ಒಬ್ಬ ರೈತನಿಗೆ ಗರಿಷ್ಠ 5 ಎಕರೆಯವರೆಗೆ ಬೀಜ ನೀಡಲು ಅವಕಾಶವಿದೆ ಎಂದರು.
ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಎಸ್.ಜಿ. ರುದ್ರೇಶ್, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎನ್. ಜಯಪ್ರಕಾಶ್, ಕನ್ನಡ ಯುವ ಕೇಂದ್ರದ ಮಾಜಿ ಅಧ್ಯಕ್ಷ ಎಂ.ಜಿ. ಗುರುನಾಥ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾಲತೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಮಲ್ಲಪ್ಪ, ಹನುಮಂತಪ್ಪ ಶಿವಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net