ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಪ್ಲಾೃಸ್ಟಿಕ್ ತ್ಯಾಜ್ಯವನ್ನು ಸ್ವಚ್ಛವಾಗಿರಿಸಿ, ಒಣಗಿಸಿ, ನಂತರ ಒಣ ತ್ಯಾಜ್ಯ ಬಿನ್‌ಗೆ ಹಾಕಿ. ಹಸಿ ತ್ಯಾಜ್ಯವನ್ನು ಪ್ರತಿನಿತ್ಯ ಮನೆಯಿಂದ ಹೊರಕ್ಕೆ ಕಳುಹಿಸಿ. ಒಣ ತ್ಯಾಜ್ಯವನ್ನು ಮನೆಯಲ್ಲಿ ಶೇಖರಿಸಿಕೊಂಡು ವಾರಕ್ಕೊಮ್ಮೆ ವಿಲೇವಾರಿ ಮಾಡಿ. ಸ್ಯಾನಿಟರಿ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕಾಗದದ ಚೀಲಗಳನ್ನು ಬಳಸಬೇಕು. ಈ ಕುರಿತು ಜಾಗೃತಿ ಮೂಡಿಸಬೇಕು. ಎಲೆಕ್ಟ್ರಾನಿಕ್ಸೃ್, ಬ್ಯಾಟರಿ, ಬಲ್ಪ್ಗಳನ್ನು ವಿಶೇಷ ಕಾಳಜಿ ತ್ಯಾಜ್ಯಗಳನ್ನಾಗಿ ಬೇರ್ಪಡಿಸಬೇಕು ಎಂದು ಸಲಹೆ ನೀಡಿದರು.