ಬಸವಣ್ಣನ ವಿಚಾರಧಾರೆ ಆಚರಣೆಯಲ್ಲಿ ಬರಲಿ

ಬಸವತತ್ವ ಸಮಾವೇಶವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಉದ್ಘಾಟಿಸಿದರು. ಡಾ. ಬಸವಜಯಚಂದ್ರ ಸ್ವಾಮೀಜಿ, ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಮಹಿಮಾ ಪಟೇಲ್, ಮಾಡಾಳು ವಿರೂಪಾಕ್ಷಪ್ಪ ಇತರರಿದ್ದರು.Basavanna
ಬಸವತತ್ವ ಸಮಾವೇಶವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಉದ್ಘಾಟಿಸಿದರು. ಡಾ. ಬಸವಜಯಚಂದ್ರ ಸ್ವಾಮೀಜಿ, ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಮಹಿಮಾ ಪಟೇಲ್, ಮಾಡಾಳು ವಿರೂಪಾಕ್ಷಪ್ಪ ಇತರರಿದ್ದರು.Basavanna
Published on

ಚನ್ನಗಿರಿ: ಹನ್ನೆರಡನೇ ಶತಮಾನದ ಜಗಜ್ಯೋತಿ ಬಸವಣ್ಣನವರ ವಚನಗಳು ಹಾಗೂ ವಿಚಾರಧಾರೆಗಳು ಕೇವಲ ಪ್ರವಚನಕ್ಕೆ ಸೀಮಿತವಾಗಬಾರದು. ಅವುಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ವಚನಕಾರರ ತತ್ವಬದ್ಧತೆ ನಮ್ಮದಾಗುತ್ತದೆ ಎಂದು ಹಾಲಸ್ವಾಮಿ ವಿರಕ್ತ ಮಠದ ಡಾ. ಬಸವಜಯಚಂದ್ರ ಸ್ವಾಮೀಜಿ ಹೇಳಿದರು.

ಹಾಲಸ್ವಾಮಿ ವಿರಕ್ತ ಮಠದಲ್ಲಿ ಗುರುವಾರ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಮಹಾಪುರಾಣ ವಚನಾಮೃತ ಬೋಧನೆ ಹಾಗೂ ಬಸವತತ್ವ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.
ಜನರು ಆಸೆ, ಸ್ವಾರ್ಥ ಹಾಗೂ ಮಾಯೆಯ ಬಲೆಯಲ್ಲಿ ಸಿಲುಕಿ ವಾಸ್ತವ ಮರೆಯುತ್ತಿದ್ದಾರೆ. ಭಕ್ತಿ, ಧ್ಯಾನ ಮತ್ತು ಪೂಜೆಯ ಮೂಲಕ ಮನಸ್ಸನ್ನು ಗೆದ್ದು ಭಗವಂತನನ್ನು ಕಾಣಬಹುದು. ಸಮಾಜದಲ್ಲಿ ನೊಂದವರ ಸೇವೆ ಮಾಡುವುದೇ ನಿಜವಾದ ದೇವಪೂಜೆ. ಅಂತರಂಗ ಮತ್ತು ಬಹಿರಂಗ ಶುದ್ಧಿಯೊಂದಿಗೆ ಕಾಯಕದಲ್ಲಿ ನಿಷ್ಠೆ ತೋರಿದಾಗ ಸನ್ಮಾರ್ಗ ಸಿಗುತ್ತದೆ ಎಂದರು.
ಶ್ರಾವಣ ಮಾಸ ಧಾರ್ಮಿಕವಾಗಿ ಪವಿತ್ರವಾದದ್ದು. ಸಮುದ್ರ ಮಂಥನದ ಸಮಯದಲ್ಲಿ ಹೊರಹೊಮ್ಮಿದ ವಿಷವನ್ನು ಬ್ರಹ್ಮಾಂಡದ ಕಲ್ಯಾಣಕ್ಕಾಗಿ ಶಿವನು ಸ್ವೀಕರಿಸಿದ ಮಾಸವಿದು. ಈ ಮಾಸದಲ್ಲಿ ದೇವಾಲಯ ಹಾಗೂ ಮನೆಗಳಲ್ಲಿ ನಡೆಯುವ ಪೂಜೆ, ವ್ರತ, ಭಜನೆ ಮುಂತಾದ ಧಾರ್ಮಿಕ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದು ನುಡಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸಮಾವೇಶವನ್ನು ಉದ್ಘಾಟಿಸಿದರು. ಚನ್ನಗಿರಿ ಹಿರೇಮಠದ ಕೇದಾರಲಿಂಗಾ ಶಿವಶಾಂತವೀರ ಸ್ವಾಮೀಜಿ, ಮಾಜಿ ಶಾಸಕ ಮಹಿಮಾ ಪಟೇಲ್, ವೀರಶೈವ ಸಮಾಜದ ಗೌರವಾಧ್ಯಕ್ಷ ರಾಜಶೇಖರಯ್ಯ, ವೀರಶೈವ ಸಮಾಜದ ಅಧ್ಯಕ್ಷ ಚ.ಮ. ಗುರುಸಿದ್ದಯ್ಯ, ನ್ಯಾಯವಾದಿ ತಿಪ್ಪೇಸ್ವಾಮಿ, ನಿವೃತ್ತ ಶಿಕ್ಷಕ ಎಚ್.ಎಂ. ಕರಿಸಿದ್ದಪ್ಪ, ಪ್ರವಚನಕಾರ ಮಹಾಂತೇಶ್ ಶಾಸ್ತ್ರಿ, ಜವಳಿ ಮಹೇಶ್, ಜ್ಯೋತಿ ಕೋರಿ ಇತರರಿದ್ದರು.

ಸಮಾನತೆಯ ಧರ್ಮ ಲಿಂಗಾಯತ

ಲಿಂಗಾಯತ ಧರ್ಮವು ಇಷ್ಟಲಿಂಗ ಪೂಜೆಯ ಮೂಲಕ ಲಿಂಗನಿಷ್ಠೆ, ಧರ್ಮಶ್ರದ್ಧೆ ಮತ್ತು ಆಚಾರ-ವಿಚಾರಗಳಿಗೆ ಆದ್ಯತೆ ನೀಡುವ ಸಮಾನತೆಯ ಧರ್ಮವಾಗಿದೆ. ಅಷ್ಟಾವರಣ ಮತ್ತು ಪಂಚಾಚಾರಗಳು ಈ ಧರ್ಮದ ಮುಖ್ಯ ತತ್ವಗಳಾಗಿದ್ದು, ಇಷ್ಟಲಿಂಗ ಆರಾಧನೆಯು ಮನುಷ್ಯನಿಗೆ ಆಧ್ಯಾತ್ಮಿಕ ಶಕ್ತಿಯನ್ನು ನೀಡುತ್ತದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net