ಇನ್ನೆರಡು ದಿನಗಳಲ್ಲಿ ಕೋಳಿಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದ ಮನೋಜ್, ಗುರುವಾರ ಸಂಜೆ ಆಹಾರ ನೀಡಿ ಮನೆಗೆ ತೆರಳಿದ್ದರು. ಆದರೆ, ರಾತ್ರಿ ವೇಳೆ ಚಿರತೆ ಫಾರ್ಮ್‌ಗೆ ನುಗ್ಗಿದೆ. 290 ಕೋಳಿಗಳಲ್ಲಿ ಕೆಲವನ್ನು ತಿಂದು ಹಾಕಿದೆ. ಶುಕ್ರವಾರ ಬೆಳಗ್ಗೆ ಮನೋಜ್ ಫಾರ್ಮ್‌ಗೆ ಬಂದಾಗ ಕೋಳಿಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.