ವಿದ್ಯಾರ್ಥಿ ಹಂತದಲ್ಲಿರಲಿ ನಾಯಕತ್ವ ಗುಣ

ದಾವಣಗೆರೆಯ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನೇತೃತ್ವ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಮುಖಂಡರು ಅಧಿಕಾರ ವಹಿಸಿಕೊಂಡರು. ದಾವಣಗೆರೆ ಸಂಚಾರ ವಿಭಾಗದ ವೃತ್ತ ನಿರೀಕ್ಷಕ ಬಿ. ಮಂಜುನಾಥ್, ಮಂಜುನಾಥ ರಂಗರಾಜು,  ಜೆ. ಎಸ್.ವನಿತಾ, ಪಿ.ವಿ.ಪ್ರಭು, ಎಂ.ಎಸ್.ಲತಾ, ಪಿ.ಡಿ. ಶೀಬಾ ರಾಣಿ, ಕೆ.ಎಸ್.ಮನ್ಸೂರ್ ಇದ್ದರು
ದಾವಣಗೆರೆಯ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನೇತೃತ್ವ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಮುಖಂಡರು ಅಧಿಕಾರ ವಹಿಸಿಕೊಂಡರು. ದಾವಣಗೆರೆ ಸಂಚಾರ ವಿಭಾಗದ ವೃತ್ತ ನಿರೀಕ್ಷಕ ಬಿ. ಮಂಜುನಾಥ್, ಮಂಜುನಾಥ ರಂಗರಾಜು, ಜೆ. ಎಸ್.ವನಿತಾ, ಪಿ.ವಿ.ಪ್ರಭು, ಎಂ.ಎಸ್.ಲತಾ, ಪಿ.ಡಿ. ಶೀಬಾ ರಾಣಿ, ಕೆ.ಎಸ್.ಮನ್ಸೂರ್ ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜವಾಬ್ದಾರಿಯಿಂದ ಉತ್ತಮ ನಾಗರಿಕತೆ
  • ಸಂಚಾರ ವಿಭಾಗದ ಸಿಪಿಐ ಬಿ.ಮಂಜುನಾಥ್ ಆಶಯ
  • ಬಾಪೂಜಿ ಶಾಲೆಯಲ್ಲಿ ನೇತೃತ್ವ ಕಾರ್ಯಕ್ರಮ
ದಾವಣಗೆರೆ: ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಲ್ಲಿ ಭವಿಷ್ಯದ ಹಾದಿಗೆ ಭದ್ರ ಬುನಾದಿಯಾಗಲಿದೆ ಎಂದು ದಾವಣಗೆರೆ ಸಂಚಾರ ವಿಭಾಗದ ವೃತ್ತ ನಿರೀಕ್ಷಕ ಬಿ. ಮಂಜುನಾಥ್ ಹೇಳಿದರು.
ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಇಂಗ್ಲಿಷ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ, ‘ನೇತೃತ್ವ’ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ನಾಯಕತ್ವ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಕೂಡ ದೇಶದ ನೇತಾರರು ಆಗಬಹುದು. ಎಲ್ಲರನ್ನೂ ಸಮಾನವಾಗಿ ಕಾಣುವ, ಎಲ್ಲರ ಕಷ್ಟಕ್ಕೆ ಮಿಡಿದಾಗ ಮಾತ್ರ ಎಲ್ಲರ ಮನಸ್ಸಿನಲ್ಲಿ ಉಳಿಯಬಹುದು. ಆತ್ಮವಿಶ್ವಾಸ, ಸಮಯಪಾಲನೆ, ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯ ನಿರ್ವಹಿಸಿದಾಗ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು.
ಶಾಲೆಯ ಡೀನ್ ಮಂಜುನಾಥ ರಂಗರಾಜು ಮಾತನಾಡಿ ವಿದ್ಯಾರ್ಥಿಗಳಿಗೆ ನಾಯಕತ್ವದ ಅವಕಾಶ ಕಲ್ಪಿಸುವುದು ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ಈ ಅನುಭವವು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಸಹಕಾರ ಮನೋಭಾವ ಹಾಗೂ ಜವಾಬ್ದಾರಿಯುತ ನಡೆ-ನುಡಿಗಳನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಶಾಲೆಯ ಪ್ರಾಚಾರ್ಯೆ ಜೆ. ಎಸ್.ವನಿತಾ ಮಾತನಾಡಿ, ಶಾಲೆಯ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ನೈತಿಕ ಮೌಲ್ಯಗಳನ್ನೂ ಅಳವಡಿಸಿಕೊಂಡು ಶಾಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ನೂತನವಾಗಿ ಆಯ್ಕೆಯಾದ ಶಾಲಾ ನಾಯಕರು ಹಾಗೂ ವಿವಿಧ ವಿಭಾಗಗಳ ಪ್ರತಿನಿಧಿಗಳಿಗೆ ಅಧಿಕಾರದ ಬ್ಯಾಡ್ಜ್‌ಗಳನ್ನು ಪ್ರದಾನ ಮಾಡಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಬಾಪೂಜಿ ಎಸ್‌ಪಿಎಸ್‌ಎಸ್ ಪಿಯು ಕಾಲೇಜಿನ ಅಧ್ಯಕ್ಷ ಹಾಗೂ ವೀರಶೈವ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿ.ವಿ.ಪ್ರಭು, ಎಂ.ಎಸ್.ಲತಾ, ಪಿ.ಡಿ. ಶೀಬಾ ರಾಣಿ, ಕೆ.ಎಸ್.ಮನ್ಸೂರ್ ಇತರರಿದ್ದರು. ಜುಹೇರ್ ಸಾದಿಕ್, ಜಿ.ಜೆ. ಜಿಯಾ ಕಾರ್ಯಕ್ರಮ ನಿರ್ವಹಿಸಿದರು. ಜನನಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net