ಕೆರೆ ನೀರು ಬಳಕೆದಾರರ ಸಮಿತಿಯಿಂದ ಅಭಿವೃದ್ಧಿಯ ಕಾಳಜಿ ಜಾಗೃತ

ಸಾಸ್ವೆಹಳ್ಳಿ ಏತ ನೀರಾವರಿ ಕೆರೆ ತುಂಬಿಸುವ ಯೋಜನೆಗೆ ಒಳಪಟ್ಟಿರುವ ಮಾಯಕೊಂಡ ಹೊಸಕೆರೆ ಹಾಗೂ ಕೆಂಚಾಲಪ್ಪನ ಕೆರೆಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಭೇಟಿ ನೀಡಿ ನೀರು ಹರಿವನ್ನು ವೀಕ್ಷಿಸಿದರು. ಕೃಷ್ಣಪ್ರಸಾದ್, ಜಿ.ಬಿ. ಚನ್ನಬಸಪ್ಪ, ರುದ್ರಮುನಿ, ರಾಘವೇಂದ್ರ ಪ್ರಸಾದ್, ಡಿ.ಎಂ. ಶ್ರೀಧರಮೂರ್ತಿ ಇತರರಿದ್ದರು.Committee
ಸಾಸ್ವೆಹಳ್ಳಿ ಏತ ನೀರಾವರಿ ಕೆರೆ ತುಂಬಿಸುವ ಯೋಜನೆಗೆ ಒಳಪಟ್ಟಿರುವ ಮಾಯಕೊಂಡ ಹೊಸಕೆರೆ ಹಾಗೂ ಕೆಂಚಾಲಪ್ಪನ ಕೆರೆಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಭೇಟಿ ನೀಡಿ ನೀರು ಹರಿವನ್ನು ವೀಕ್ಷಿಸಿದರು. ಕೃಷ್ಣಪ್ರಸಾದ್, ಜಿ.ಬಿ. ಚನ್ನಬಸಪ್ಪ, ರುದ್ರಮುನಿ, ರಾಘವೇಂದ್ರ ಪ್ರಸಾದ್, ಡಿ.ಎಂ. ಶ್ರೀಧರಮೂರ್ತಿ ಇತರರಿದ್ದರು.Committee
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಭಿಪ್ರಾಯ
  • ಹೊಸಕೆರೆ ಹಾಗೂ ಕೆಂಚಾಲಪ್ಪನ ಕೆರೆ ವೀಕ್ಷಣೆ
ಮಾಯಕೊಂಡ: ಕೆರೆಗಳ ಅಚ್ಚುಕಟ್ಟು ವ್ಯಾಪ್ತಿಯ ರೈತರು ಕೆರೆ ನೀರು ಬಳಕೆದಾರರ ಸಮಿತಿಗಳನ್ನು ರಚಿಸಿಕೊಂಡರೆ ಪ್ರತಿಯೊಬ್ಬರಿಗೂ ಕೆರೆಯ ಸ್ಥಿತಿಗತಿ ಹಾಗೂ ಅಭಿವೃದ್ಧಿಯ ಬಗ್ಗೆ ಕಾಳಜಿ ಮೂಡುತ್ತದೆ. ಆದ್ದರಿಂದ ಗ್ರಾಮೀಣ ಭಾಗಗಳಲ್ಲಿ ರೈತರು ಇಂತಹ ಸಮಿತಿಗಳ ರಚನೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸಲಹೆ ನೀಡಿದರು.
ಸಾಸ್ವೆಹಳ್ಳಿ ಏತ ನೀರಾವರಿ ಕೆರೆ ತುಂಬಿಸುವ ಯೋಜನೆಗೆ ಒಳಪಟ್ಟಿರುವ ಮಾಯಕೊಂಡ ಹೊಸಕೆರೆ ಹಾಗೂ ಕೆಂಚಾಲಪ್ಪನ ಕೆರೆಗೆ ಶುಕ್ರವಾರ ನೀರಾವರಿ ಇಲಾಖೆ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ, ನೀರು ಹರಿವನ್ನು ವೀಕ್ಷಿಸಿ ಮಾತನಾಡಿದರು.
ಏತ ನೀರಾವರಿ ವ್ಯಾಪ್ತಿಯ ಕೆರೆಗಳಿಗೆ ಅಳವಡಿಸಿರುವ ಪೈಪ್‌ಲೈನ್‌ಗಳನ್ನು ಕೆಲವು ಗ್ರಾಮಗಳಲ್ಲಿ ಜೆಸಿಬಿಯಿಂದ ಅಗೆದು ಹಾಳು ಮಾಡಿರುವುದು ಗಮನಕ್ಕೆ ಬಂದಿದೆ. ಇಂತಹ ಕೃತ್ಯ ಎಸಗಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೆರೆಗಳಲ್ಲಿ ಅಕ್ರಮವಾಗಿ ಪಂಪ್‌ಸೆಟ್ ಅಳವಡಿಸಿ ತೋಟಗಳಿಗೆ ನೀರು ಎತ್ತುತ್ತಿದ್ದರೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ನಿಗಾ ವಹಿಸಬೇಕು. ಕಣ್ತಪ್ಪಿಸಿ ನೀರು ಎತ್ತುವುದು ಕಂಡುಬಂದರೆ ಅಂಥವರ ಮೇಲೆ ಮುಲಾಜಿಲ್ಲದೆ ಎಫ್‌ಐಆರ್ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ಮಾಯಕೊಂಡ ಕ್ಷೇತ್ರದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಒಳಪಟ್ಟ ಎಲ್ಲ ಕೆರೆಗಳಿಗೂ ಸಮರ್ಪಕ ನೀರು ಪೂರೈಸಲು, ಸಾಸ್ವೆಹಳ್ಳಿ ಮುಖ್ಯ ಜಾಕ್‌ವೆಲ್ ವ್ಯಾಪ್ತಿಯಲ್ಲಿ ಶೀಘ್ರವೇ ರೈತರ ಸಭೆ ನಡೆಸಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ದಾವಣಗೆರೆ ತಾಲೂಕಿನ ಅನೇಕ ಕೆರೆಗಳು ಒತ್ತುವರಿಯಾಗಿದ್ದು, ರೈತರು ಅಡಿಕೆ ತೋಟಗಳನ್ನು ಮಾಡಿಕೊಂಡಿದ್ದಾರೆ. ತಕ್ಷಣ ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸ ಬೇಕು ಎಂದು ರೈತ ಮುಖಂಡರಾದ ಬಲ್ಲೂರು ರವಿಕುಮಾರ್ ಹಾಗೂ ಹುಚ್ಚವ್ವನ ಹಳ್ಳಿ ಮಂಜುನಾಥ್ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ಮಾಯಕೊಂಡ ಗ್ರಾಮದ ಹಿರೇಮದಕರಿ ನಾಯಕ ಸಮಾಧಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿರುವ 3 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲು ಜಾಗದ ಅಭಾವವಿದೆ. ಆದರೂ ಲಭ್ಯವಿರುವ ಸ್ಥಳದಲ್ಲೇ ಉತ್ತಮ ಪ್ರವಾಸಿ ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಪ್ರಸಾದ್, ಬೃಹತ್ ನೀರಾವರಿ ಇಲಾಖೆ ಇಇ ಜಿ.ಬಿ. ಚನ್ನಬಸಪ್ಪ, ಸಣ್ಣ ನೀರಾವರಿ ಇಂಜಿನಿಯರ್ ರುದ್ರಮುನಿ, ಗ್ರಾಪಂ ಅಧ್ಯಕ್ಷೆ ಸುನಿತಾ ಹನುಮಂತಪ್ಪ, ತೋಟಗಾರಿಕೆ ಇಲಾಖೆ ಡಿಡಿ ರಾಘವೇಂದ್ರ ಪ್ರಸಾದ್, ಕೃಷಿ ಇಲಾಖೆ ಡಿಡಿ ಭಾರತಿ, ಎಡಿಎ ಡಿ.ಎಂ. ಶ್ರೀಧರಮೂರ್ತಿ, ಎಒ ಕೆ. ಬೀರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net