ಸಮಗ್ರ ಅಭಿವೃದ್ಧಿಗೆ ಆಯ್ಕೆಯಾದ ಕಾಟೀಹಳ್ಳಿ fighter

ಆನಗೋಡು ಹೋಬಳಿ ಕಾಟೀಹಳ್ಳಿ ಗ್ರಾಮದಲ್ಲಿ ಬಿರ್ಸಾಮುಂಡಾ ಅವರ 150 ನೇ ಜನ್ಮದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಪಂ ಪಿಡಿಒ ಸೌಭಾಗ್ಯಲಕ್ಷ್ಮಿ, ಕತ್ತಲಗೆರೆ ತಿಪ್ಪಣ್ಣ, ಮಂಜುನಾಥ್, ಹಾಲೇಶಪ್ಪ, ಶೇಖರಪ್ಪ, ಲೋಕೇಶ್, ಬಸವರಾಜ್, ಶಿವಮೂರ್ತಿ ಇತರರಿದ್ದರು. fighter
ಆನಗೋಡು ಹೋಬಳಿ ಕಾಟೀಹಳ್ಳಿ ಗ್ರಾಮದಲ್ಲಿ ಬಿರ್ಸಾಮುಂಡಾ ಅವರ 150 ನೇ ಜನ್ಮದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಪಂ ಪಿಡಿಒ ಸೌಭಾಗ್ಯಲಕ್ಷ್ಮಿ, ಕತ್ತಲಗೆರೆ ತಿಪ್ಪಣ್ಣ, ಮಂಜುನಾಥ್, ಹಾಲೇಶಪ್ಪ, ಶೇಖರಪ್ಪ, ಲೋಕೇಶ್, ಬಸವರಾಜ್, ಶಿವಮೂರ್ತಿ ಇತರರಿದ್ದರು. fighter
Published on

ಪ್ರಮುಖ ಮುಖ್ಯಾಂಶಗಳು

  • ಸ್ವಾತಂತ್ರ್ಯ ಸೇನಾನಿ
  • ಬುಡಕಟ್ಟು ಜನಾಂಗದ ಬಿರ್ಸಾಮುಂಡಾ
  • ಸ್ವಾತಂತ್ರ್ಯಕ್ಕಾಗಿ ಮರಣ ಅಪ್ಪಿದ ಮಹನೀಯ
ವಿಜಯವಾಣಿ ಸುದ್ದಿಜಾಲ ಮಾಯಕೊಂಡ
ಸ್ವಾತಂತ್ರ್ಯ ಸೇನಾನಿ, ಬುಡಕಟ್ಟು ಜನಾಂಗದ ಬಿರ್ಸಾಮುಂಡಾ ಅವರು ಕೇವಲ 24ನೇ ವಯಸ್ಸಿನಲ್ಲಿ ಬ್ರಿಟಿಷರ ಎದುರು ತೊಡೆತಟ್ಟಿ ನಿಂತು ದೇಶದ ಸ್ವಾತಂತ್ರ್ಯಕ್ಕಾಗಿ ಬಿಲ್ಲು ಬಾಣಗಳಿಂದಲೇ ಹೋರಾಡಿ ವೀರಮರಣ ಅಪ್ಪಿದ ಮಹನೀಯ ಎಂದು ಹೆಬ್ಬಾಳು ಗ್ರಾಪಂ ಪಿಡಿಒ ಸೌಭಾಗ್ಯಲಕ್ಷ್ಮಿ ಹೇಳಿದರು.
ಆನಗೋಡು ಹೋಬಳಿ ಹೆಬ್ಬಾಳು ಗ್ರಾಪಂ ವ್ಯಾಪ್ತಿಯ ಕಾಟೀಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬಿರ್ಸಾಮುಂಡಾ ಅವರ 150 ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಬಿರ್ಸಾಮುಂಡಾ ಅವರ ಹೆಸರಿನಲ್ಲಿ ಕೇಂದ್ರ ಸರ್ಕಾರ (ದರ್ತಿಹಾಬಾ)ಜನ ಜಾತಿಯ ಗೌರವ ದಿವಸ್ ಎನ್ನುವ ಯೋಜನೆ ಅನುಷ್ಠಾನಕ್ಕೆ ತಂದಿದೆ. ಈ ಯೋಜನೆ ಮೂಲಕ ದೇಶದಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚು ವಾಸಿಸುವ ಒಂದು ಲಕ್ಷ ಗ್ರಾಮಗಳ ಸಮಗ್ರ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು.
ಹೆಬ್ಬಾಳು ಗ್ರಾಪಂ ವ್ಯಾಪ್ತಿಯ ಕಾಟೀಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದವರೇ ಅತಿ ಹೆಚ್ಚು ವಾಸ ಮಾಡುತ್ತಿರುವುದರಿಂದ ಈ ಗ್ರಾಮವನ್ನು ಜಿಲ್ಲಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಜನ ಜಾತಿ ಗೌರವ ದಿವಸ್ ಯೋಜನೆಯ ಸಮಗ್ರ ಅಭಿವೃದ್ಧಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿಗೆ 8.5 ಕೋಟಿ ರೂ

ಗ್ರಾಮಕ್ಕೆ ಬೇಕಾಗಿರುವ ಮೂಲ ಸೌಲಭ್ಯ ಸೇರಿದಂತೆ ಪ್ರತಿ ಹಂತದಲ್ಲೂ ಗ್ರಾಪಂನಿಂದ ಸಮೀಕ್ಷೆ ನಡೆಸಿ, ಎರಡು ಬಾರಿ ಗ್ರಾಮಸಭೆ ಆಯೋಜಿಸಿ ಅಗತ್ಯ ಸೌಕರ್ಯಗಳ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿ ಅಭಿವೃದ್ಧಿಗೆ 8.5 ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆ ಐದು ವರ್ಷದ ಕಾಲಾವಧಿಯಾಗಿದ್ದು, ಅನುದಾನವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಿದರೆ ಗ್ರಾಮದ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕತ್ತಲಗೆರೆ ತಿಪ್ಪಣ್ಣ, ತಾಲೂಕು ಪರಿಶಿಷ್ಟ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ತಾಪಂ ಮಾಜಿ ಸದಸ್ಯ ಹಾಲೇಶಪ್ಪ, ಜಿ.ಆರ್. ಶೇಖರಪ್ಪ, ಲೋಕೇಶ್, ಬಸವರಾಜ್, ಡಿ.ಆರ್.ಶಿವಮೂರ್ತಿ, ಹನುಮಂತಪ್ಪ, ಶಿಕ್ಷಕ ನಾಗರಾಜ್, ಬಸಪ್ಪ, ಹನುಮಂತಪ್ಪ, ರಂಗಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net