

ಪ್ರಮುಖ ಮುಖ್ಯಾಂಶಗಳು
ದಾವಣಗೆರೆ: ಮಾತೃಭಾಷೆ, ಸಾಹಿತ್ಯದ ಪರಿಚಾರಕರಂತೆ ಕೆಲಸ ಮಾಡುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಮೂರ್ನಾಲ್ಕು ವರ್ಷದಿಂದ ಹಣಕಾಸಿನ ಸಮಸ್ಯೆ ಎದುರಿಸುತ್ತಿದೆ. ದಾವಣಗೆರೆ ಜಿಲ್ಲಾ ಹಾಗೂ ಎಲ್ಲ ತಾಲೂಕು ಘಟಕಗಳು ಈ ಸಂಕಷ್ಟದಿಂದ ನಲುಗುತ್ತಿವೆ.
2022-23ನೇ ಸಾಲಿನಲ್ಲಿ ನಡೆದ ಸಮ್ಮೇಳನಗಳನ್ನು ಅನುಮತಿ ಪಡೆದೆ ನಡೆಸಿದ್ದೆವು. ಅದರ ಆಡಿಟ್ ಮಾಡಿಸಿ ಮೂಲ ದಾಖಲೆಗಳನ್ನು ನೀಡಿದ್ದಾಗ್ಯೂ ಇದುವರೆಗೆ ಹಣ ಬಿಡುಗಡೆಯಾಗಲಿಲ್ಲ. ಹೀಗಾಗಿ ನಂತರದ ವರ್ಷದಲ್ಲಿ ಕೆಲವು ತಾಲೂಕು ಸಮ್ಮೇಳನಗಳನ್ನು ಸ್ಥಳೀಯ ಸಂಪನ್ಮೂಲಗಳಿಂದಲೇ ನಡೆಸಬೇಕಾಯಿತು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ ಹೇಳುತ್ತಾರೆ.
ಕಚೇರಿ ನಿರ್ವಹಣೆ ವೆಚ್ಚಕ್ಕೂ ಖೋತಾ!
ನುಡಿ ಜಾತ್ರೆ ನಡೆಸಲು ಪರದಾಟ
ಸಮ್ಮೇಳನಗಳಿಗೆ ನಿಗದಿತ ಅನುದಾನ ಬಾರದಿರುವುದರಿಂದ ಸಮಸ್ಯೆಯಾಗಿದೆ. ಹಣ ಬರಬಹುದು ಎಂದು ಕೆಲವೆಡೆ ತಾಲೂಕು ಅಧ್ಯಕ್ಷರು ಪಿಂಚಣಿ ಮೊತ್ತವನ್ನು ಹೊಂದಾಣಿಕೆ ಮಾಡಿ ಬಳಸಿದ್ದಾರೆ. ಜಿಲ್ಲಾ ಮಹಿಳಾ ಸಮ್ಮೇಳನಕ್ಕೂ ಯಾವ ಹಣ ಬಂದಿಲ್ಲ. ಸಾಹಿತ್ಯಾಸಕ್ತರ ನೆರವು ಬಯಸಿದ್ದೇವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕನ್ನಡದ ಕೆಲಸಕ್ಕೆ ಕೈಜೋಡಿಸಬೇಕು.
— ಬಿ. ವಾಮದೇವಪ್ಪ ತೊಗಲೇರಿ, ಕಸಾಪ ಜಿಲ್ಲಾಧ್ಯಕ್ಷ.
ಕಸಾಪ ಅಧ್ಯಕ್ಷ, ಜಿಲ್ಲಾ ಘಟಕಗಳ ಅವಧಿ 3 ವರ್ಷಕ್ಕೆ ಸೀಮಿತಗೊಳಿಸಬೇಕು. ಆಡಿಟ್, ಸೂಕ್ತ ಲೆಕ್ಕಪತ್ರ ಮಂಡಿಸುವ ಷರತ್ತಿನಡಿ ಸಮ್ಮೇಳನ, ಸಾಹಿತ್ಯ ಚಟುವಟಿಕೆಗೆ ಅನುಮತಿಸಬೇಕು. ಅಧಿಕಾರಿಯೊಬ್ಬರನ್ನು ಸರ್ಕಾರವೇ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಾಗಿ ನಿಯೋಜಿಸಿದರೆ ಸಂಸ್ಥೆಗೆ ಬಲ ಬರಲಿದೆ.
— ಬಾ.ಮ.ಬಸವರಾಜಯ್ಯ, ಸಾಹಿತಿ.