ಕನ್ನಡ ರಾಜ್ಯೋತ್ಸವ ಆಗಲಿ ನಿತ್ಯೋತ್ಸವ

ಚನ್ನಗಿರಿ ಸಂತೇಬೆನ್ನೂರಿನಲ್ಲಿ ಹಮ್ಮಿಕೊಂಡಿದ್ದ ಚೈತನ್ಯ ಕನ್ನಡೋತ್ಸವವನ್ನು ಕಸಾಪ ತಾಲೂಕಾಧ್ಯಕ್ಷ ಎಲ್.ಜಿ. ಮಧುಕುಮಾರ್ ಉದ್ಘಾಟಿಸಿದರು. ನಾಗರಾಜ್, ಎನ್. ಶಿವಸ್ವಾಮಿ, ವೀರೇಶ್ ಪ್ರಸಾದ್, ಶಂಕರಗೌಡ, ಅಂಬಿಕಾ ಇತರರಿದ್ದರು.
ಚನ್ನಗಿರಿ ಸಂತೇಬೆನ್ನೂರಿನಲ್ಲಿ ಹಮ್ಮಿಕೊಂಡಿದ್ದ ಚೈತನ್ಯ ಕನ್ನಡೋತ್ಸವವನ್ನು ಕಸಾಪ ತಾಲೂಕಾಧ್ಯಕ್ಷ ಎಲ್.ಜಿ. ಮಧುಕುಮಾರ್ ಉದ್ಘಾಟಿಸಿದರು. ನಾಗರಾಜ್, ಎನ್. ಶಿವಸ್ವಾಮಿ, ವೀರೇಶ್ ಪ್ರಸಾದ್, ಶಂಕರಗೌಡ, ಅಂಬಿಕಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಸಾಪ ತಾಲೂಕಾಧ್ಯಕ್ಷ ಎಲ್.ಜಿ. ಮಧುಕುಮಾರ್ ಆಶಯ
  • ಸಂತೇಬೆನ್ನೂರಲ್ಲಿ ಚೈತನ್ಯ ಕನ್ನಡೋತ್ಸವ
  • ಅನ್ಯ ಭಾಷೆ ವ್ಯಾಮೋಹ ಬೇಡ
ಚನ್ನಗಿರಿ: ಕನ್ನಡ ನಾಡು, ನುಡಿ ಹಬ್ಬಗಳು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿತ್ಯೋತ್ಸವವಾದಾಗ ಮಾತ್ರ ಕನ್ನಡ ಭಾಷೆ ಉಳಿಸಿ ಬೆಳೆಸಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಎಲ್.ಜಿ. ಮಧುಕುಮಾರ್ ಹೇಳಿದರು.
ಸಂತೇಬೆನ್ನೂರಿನಲ್ಲಿ ಮಂಗಳವಾರ ಚೈತನ್ಯ ಗುರುಕುಲ ವಿದ್ಯಾಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚೈತನ್ಯ ಕನ್ನಡೋತ್ಸವ ಉದ್ಘಾಟಿಸಿ ಮಾತನಾಡಿದರು.
ಅನ್ಯ ಭಾಷೆಯ ವ್ಯಾಮೋಹಕ್ಕೆ ಬಿದ್ದು ಕನ್ನಡ ಮರೆಯುತ್ತಿದ್ದೇವೆ. ಇದರಿಂದ ನಮ್ಮವರೇ ಕನ್ನಡ ಭಾಷೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರಿಸಿದರು.
ಕನ್ನಡಾಂಬೆಯ ಗತವೈಭವ ಮರಳಿ ತರಬೇಕು.ಕನ್ನಡವನ್ನು ಹೃದಯದ ಭಾಷೆ ಆಗಿಸಿಕೊಳ್ಳುವ ಹೆಜ್ಜೆ ಇಡಬೇಕು. ಕೇವಲ ಸಭೆ, ಸಮಾರಂಭ ಮತ್ತು ಜನರ ಮುಂದೆ ನಾಟಕೀಯವಾಗಿ ಬಳಸದೆ ಪ್ರತಿ ಮನೆಯಲ್ಲಿ ಮಾತೃ ಭಾಷೆ ಮಾತನಾಡಿದರೆ ಕನ್ನಡ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ವಿಶ್ವವ್ಯಾಪಿ ಆವರಿಸಿದೆ. ಇದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಜನರು ಹೆಚ್ಚಾಗಿ ಕನ್ನಡ ಪತ್ರಿಕೆ ಓದುವುದನ್ನು ಕಲಿಯಬೇಕು. ಕನ್ನಡ ನಾಡು-ನುಡಿಗೆ ಧಕ್ಕೆಯಾಗುತ್ತಿದೆ ಎಂದಾಗ ಅದನ್ನು ಉಳಿಸಿ ಬೆಳೆಸಲು ಹೋರಾಟ ಮಾಡಬೇಕು ಎಂದರು.
ಚೈತನ್ಯ ಗುರುಕುಲ ವಿದ್ಯಾಸಂಸ್ಥೆಯ ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಎನ್. ಶಿವಸ್ವಾಮಿ, ಕಸಾಪ ಸಹ ಕಾರ್ಯದರ್ಶಿ ವೀರೇಶ್ ಪ್ರಸಾದ್, ಸಿಆರ್‌ಪಿ ಶಂಕರಗೌಡ, ಮುಖ್ಯಶಿಕ್ಷಕಿ ಅಂಬಿಕಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net