ಕನ್ನಡಿಗರ ಮನದಲ್ಲಿ ಕನ್ನಡ ಶಾಶ್ವತ

ಮಾಯಕೊಂಡ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ನಮ್ಮೂರ ಕನ್ನಡ ಹಬ್ಬ ಸಂಭ್ರಮ ಕಾರ್ಯಕ್ರಮ ವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ನಾಡೋಜ ಡಾ.ಕುಂ.ವೀರಭ ದ್ರಪ್ಪ ಉದ್ಘಾಟಿಸಿದರು. ಶಾಸಕ ಕೆ.ಎಸ್. ಬಸವಂತಪ್ಪ, ಬಿ. ವಾಮದೇವಪ್ಪ, ಡಾ.ಎಂ.ಕೆ. ರಮೇಶ್, ಡಿ.ಎಂ. ಶ್ರೀಧರಮೂರ್ತಿ ಇತರರಿದ್ದರು.
ಮಾಯಕೊಂಡ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ನಮ್ಮೂರ ಕನ್ನಡ ಹಬ್ಬ ಸಂಭ್ರಮ ಕಾರ್ಯಕ್ರಮ ವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ನಾಡೋಜ ಡಾ.ಕುಂ.ವೀರಭ ದ್ರಪ್ಪ ಉದ್ಘಾಟಿಸಿದರು. ಶಾಸಕ ಕೆ.ಎಸ್. ಬಸವಂತಪ್ಪ, ಬಿ. ವಾಮದೇವಪ್ಪ, ಡಾ.ಎಂ.ಕೆ. ರಮೇಶ್, ಡಿ.ಎಂ. ಶ್ರೀಧರಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಡೋಜ ಡಾ.ಕುಂ.ವೀರಭದ್ರಪ್ಪ ಹೇಳಿಕೆ
  • ಮಾಯಕೊಂಡದಲ್ಲಿ ನಮ್ಮೂರ ಹಬ್ಬ ಸಂಭ್ರಮ
  • ಕನ್ನಡ ಯುವಶಕ್ತಿ ಕೇಂದ್ರದಿಂದ ಆಯೋಜನೆ
ಮಾಯಕೊಂಡ: ಸೂರ್ಯ, ಚಂದ್ರ, ಭೂಮಿ ಇರುವವರೆಗೆ ಕನ್ನಡಿಗರ ಮನೆ-ಮನದಲ್ಲಿ ಮಾತೃಭಾಷೆ ಶಾಶ್ವತವಾಗಿ ನೆಲೆಸಿರುತ್ತದೆ. ಕನ್ನಡಿಗರು ಭಾಷೆ ನಾಶವಾಗಲು ಬಿಡರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ, ಕಾದಂಬರಿಕಾರ ನಾಡೋಜ ಡಾ.ಕುಂ.ವೀರಭದ್ರಪ್ಪ ಹೇಳಿದರು.
ಗ್ರಾಮದ ಆಂಜನೇಯ ವೃತ್ತದಲ್ಲಿ ಸೋಮವಾರ ಕನ್ನಡ ಯುವಶಕ್ತಿ ಕೇಂದ್ರ ಆಯೋಜಿಸಿದ್ದ ನಮ್ಮೂರ ಕನ್ನಡ ಹಬ್ಬ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಂಗ್ಲ ಮಾಧ್ಯಮದ ಶಿಕ್ಷಣ ಕೊಡಿಸಿದರೆ ಭವಿಷ್ಯದಲ್ಲಿ ತಂದೆ-ತಾಯಿಗೆ ಅನಾಥಾಶ್ರಮಗಳೇ ಗತಿ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಬದುಕಿನ ಅರಿವು ತಿಳಿದಿರುತ್ತಾರೆ. ಮನೆಯ ಕಷ್ಟ-ಸುಖ ಅರಿತು ಓದಿ ಉದ್ಯೋಗ ಗಳಿಸುತ್ತಾರೆ ಎಂದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆಯಲ್ಲಿ ಕನ್ನಡ ನಶಿಸುತ್ತಿದ್ದು ಅದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸರ್ಕಾರಿ ಕಚೇರಿ, ಖಾಸಗಿ ಕ್ಷೇತ್ರ ಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಅನುಷ್ಠಾನಗೊಳ್ಳಬೇಕು. ಹೊರ ರಾಜ್ಯಗಳಿಂದ ಬರುವ ಜನರು ಕನ್ನಡದಲ್ಲೇ ಮಾತನಾಡಬೇಕು. ಆಗ ಮಾತ್ರ ಭಾಷೆ ಉಳಿಯಲಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಮುಂದಿನ ವರ್ಷ ರಾಜ್ಯೋತ್ಸವ ವೇಳೆ ಉದ್ಘಾಟಿಸಲಾಗುವುದು ಎಂದು ಭರವಸೆ ನೀಡಿದರು.
ವೈದ್ಯಕೀಯ ಮೌಲ್ಯಮಾಪನ ಮತ್ತು ಶ್ರೇಯಾಂಕ ಮಂಡಳಿ ಅಧ್ಯಕ್ಷ ಡಾ.ಎಂ.ಕೆ. ರಮೇಶ್ ಮಾತನಾಡಿ, ದೊಡ್ಡ ನಗರಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ. ಖಾಸಗಿ, ಸರ್ಕಾರಿ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಕಡ್ಡಾಯಗೊಳಿಸಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಸಾಕಮ್ಮ ಲಿಂಗರಾಜ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಯುವಶಕ್ತಿ ಕೇಂದ್ರದ ಪದಾಧಿಕಾರಿಗಳು, ಶಾಲಾ-ಕಾಲೇಜು ಶಿಕ್ಷಕರು, ಉಪನ್ಯಾಸ ಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

22 ಸಾವಿರ ವೃದ್ಧಾಶ್ರಮಗಳು

ದೇಶದಲ್ಲಿ ಈ ಹಿಂದೆ 712 ವೃದ್ಧಾಶ್ರಮ ಗಳಿದ್ದವು. ಪ್ರಸ್ತುತ 22 ಸಾವಿರ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿವೆ. ಇಷ್ಟಕ್ಕೆಲ್ಲ ಕಾರಣ ಪಾಲಕರ ಪರ ಭಾಷಾ ವ್ಯಾಮೋಹ. ಹಾಗಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಬಾರದು ಎಂದು ನಾಡೋಜ ಕುಂ.ವೀರಭದ್ರಪ್ಪ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net