ತಂಬಾಕುಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ತಂಬಾಕು ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಕಿರಣ್ ಕುಮಾರ್ ಎಫ್ ಬಸಾಪುರ ಉದ್ಘಾಟಿಸಿದರು. ಡಾ. ಐ.ಎಂ. ಅಲಿ, ರಾಜಶೇಖರ್, ಡಾ. ಪ್ರಶಾಂತ್ ಜಿ.ಎಂ, ಡಾ. ಲಿಲ್ಲಿ ಬಿ.ಕೆ. ಇದ್ದರು.
ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ತಂಬಾಕು ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಕಿರಣ್ ಕುಮಾರ್ ಎಫ್ ಬಸಾಪುರ ಉದ್ಘಾಟಿಸಿದರು. ಡಾ. ಐ.ಎಂ. ಅಲಿ, ರಾಜಶೇಖರ್, ಡಾ. ಪ್ರಶಾಂತ್ ಜಿ.ಎಂ, ಡಾ. ಲಿಲ್ಲಿ ಬಿ.ಕೆ. ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಎಸ್‌ಆರ್‌ಟಿಸಿ ಡಿಸಿ ಕಿರಣ್ ಕುಮಾರ್ ಹೇಳಿಕೆ
  • ಜಾಗೃತಿ ಕಾರ್ಯಕ್ರಮ
ದಾವಣಗೆರೆ : ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಹೊಂದುವ ಮೂಲಕ ತಂಬಾಕುಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕ ಕಿರಣ್ ಕುಮಾರ್ ಎಫ್ ಬಸಾಪುರ ಹೇಳಿದರು.
ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮತ್ತು ಎಸ್‌ಎಸ್ ಕೇರ್ ಟ್ರಸ್ಟ್ ವತಿಯಿಂದ, ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಆಯೋಜಿಸಿದ್ದ ತಂಬಾಕು ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಂತ ಆರೋಗ್ಯ ಬಹಳ ಮುಖ್ಯ. ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ತಂಬಾಕು ಸೇವೆಯಿಂದ ದೂರವಿರಬೇಕು. ಈ ರೀತಿಯ ಜಾಗೃತಿ ಕಾರ್ಯಕ್ರಮಗಳಿಂದ ನಮ್ಮ ಸಂಸ್ಥೆಯ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಐ.ಎಂ. ಅಲಿ ಮಾತನಾಡಿ ಶಿಬಿರದ ಬಗ್ಗೆ ತಿಳಿಸಿದರು. ಕೆಎಸ್‌ಆರ್‌ಟಿಸಿಯ ವಿಭಾಗೀಯ ಸಂಚಲನಾಧಿಕಾರಿ ಡಿ. ಫಕೃದ್ದೀನ್, ಆಡಳಿತಾಧಿಕಾರಿ ರಾಜಶೇಖರ್, ಸಹಾಯಕ ಸಂಖ್ಯಾಧಿಕಾರಿ ಚಂದ್ರಶೇಖರ್, ಲೆಕ್ಕಾಧಿಕಾರಿ ಚಲುವೇಗೌಡ, ಡಾ. ಪ್ರಶಾಂತ್ ಜಿ.ಎಂ, ಡಾ. ಸುಶಾಂತ್ ವಿ.ಎಚ್. ಮತ್ತು ಡಾ. ಲಿಲ್ಲಿ ಬಿ.ಕೆ. ಇದ್ದರು.
ಇದೇ ವೇಳೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು. ವಿಶೇಷವಾಗಿ ಬಾಯಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಸೇರಿ ತಂಬಾಕು ಬಳಕೆಯಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಲಾಯಿತು.
ಕಾರ್ಯಕ್ರಮದ ಭಾಗವಾಗಿ ಉಚಿತ ದಂತ ತಪಾಸಣೆಯನ್ನೂ ಆಯೋಜಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಸಾರ್ವಜನಿಕರು ಇದರ ಪ್ರಯೋಜನ ಪಡೆದರು. 50 ವಿದ್ಯಾರ್ಥಿಗಳು ವಿವಿಧ ಜಾಗೃತಿ ಸಂದೇಶಗಳ ಮೂಲಕ ಸಾರ್ವಜನಿಕರನ್ನು ತಂಬಾಕು ತ್ಯಜಿಸುವಂತೆ ಪ್ರೇರೇಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net