ವಿರಳ ರಕ್ತರೋಗಿಗಳಿಗೆ ಮೀಸಲಿಡಿ ಉದ್ಯೋಗ

ದಾವಣಗೆರೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 37ನೇ ವರ್ಷದ ವಿಶ್ವ ಹಿಮೋಫಿಲಿಯಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಉದ್ಘಾಟಿಸಿದರು. ಪದ್ಮಶ್ರೀ ಡಾ. ಸುರೇಶ್ ಹನಗವಾಡಿ,  ಕಿರುವಾಡಿ ಗಿರಿಜಮ್ಮ, ರವಿನಾರಾಯಣ್, ಡಾ. ಜಿ.ಸಿ. ಸದಾಶಿವಪ್ಪ, ಡಾ.ಎಂ.ಎಂ.ದಡ್ಡಿಕೊಪ್ಪದ್ ಇತರರಿದ್ದರು.
ದಾವಣಗೆರೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 37ನೇ ವರ್ಷದ ವಿಶ್ವ ಹಿಮೋಫಿಲಿಯಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಉದ್ಘಾಟಿಸಿದರು. ಪದ್ಮಶ್ರೀ ಡಾ. ಸುರೇಶ್ ಹನಗವಾಡಿ, ಕಿರುವಾಡಿ ಗಿರಿಜಮ್ಮ, ರವಿನಾರಾಯಣ್, ಡಾ. ಜಿ.ಸಿ. ಸದಾಶಿವಪ್ಪ, ಡಾ.ಎಂ.ಎಂ.ದಡ್ಡಿಕೊಪ್ಪದ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪದ್ಮಶ್ರೀ ಡಾ. ಸುರೇಶ್ ಹನಗವಾಡಿ ಆಶಯ
  • ದಾವಣಗೆರೆಯಲ್ಲಿ ವಿಶ್ವ ಹಿಮೋಫಿಲಿಯಾ ದಿನಾಚರಣೆ
  • ರೋಗ ಬಾಧಿತರಿಗೆ ಉತ್ಕೃಷ್ಟ ಚಿಕಿತ್ಸೆ ಸಿಗಲಿ
ದಾವಣಗೆರೆ: ಹಿಮೋಫಿಲಿಯಾ, ಥಲಸೀಮಿಯಾ ಮತ್ತು ಸಿಕಲ್‌ಸೆಲ್ ರೋಗವನ್ನು 2016ರಲ್ಲಿ ಅಂಗವಿಕಲರ ಕಾಯ್ದೆಯಲ್ಲಿ ಸೇರಿಸಿದ್ದರೂ ಇದುವರೆಗೆ ಈ ರೋಗಿಗಳಿಗೆ ಉದ್ಯೋಗ ಮೀಸಲಾತಿ ದೊರೆತಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷ ಪದ್ಮಶ್ರೀ ಡಾ. ಸುರೇಶ್ ಹನಗವಾಡಿ ಮನವಿ ಮಾಡಿದರು.
ನಗರದಲ್ಲಿನ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 37ನೇ ವರ್ಷದ ವಿಶ್ವ ಹಿಮೋಫಿಲಿಯಾ ದಿನಾಚರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಮೋಫಿಲಿಯಾ ಬಾಧಿತರ ಕಷ್ಟಗಳು ಶಮನವಾಗಲೆಂದು ಸಾಂಕೇತಿಕವಾಗಿ ಬಲೂನ್ ಹಾರಿಸಲಾಗಿದೆ. ಸರ್ಕಾರವು ಹಿಮೋಫಿಲಿಯಾ ಬಾಧಿತರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಹೆಚ್ಚಿನ ಮಟ್ಟದಲ್ಲಿ ಉತ್ಕೃಷ್ಟ ಚಿಕಿತ್ಸೆ ನೀಡುವ ಸಂಬಂಧ ಕ್ರಮ ವಹಿಸಬೇಕೆಂದು ಮನವಿ ಮಾಡಿದರು. ಪ್ರೊಪಲಾಕ್ಸಿಸ್ ಬಗ್ಗೆಯೂ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ ಹಿಮೋಫಿಲಿಯಾ ರೋಗವು ಅತ್ಯಂತ
ವಿರಳವಾಗಿದ್ದು ಹೆಚ್ಚಿನ ರೋಗಿಗಳನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕಿದೆ. ಈ ದಿಸೆಯಲ್ಲಿ ಜಿಲ್ಲಾಡಳಿತ ಅಗತ್ಯ ಸಹಾಯ ನೀಡಲಿದೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಬಿ.ಟಿ. ಅಚ್ಯುತ್, ಸಂಸ್ಥೆಯ 40 ವರ್ಷಗಳ ಹಾದಿಯನ್ನು ಮೆಲುಕು ಹಾಕುತ್ತಾ ಸಂಸ್ಥೆಯ ಏಳಿಗೆಯಲ್ಲಿ ಹಿರಿಯ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಪಾತ್ರವನ್ನು ಸ್ಮರಿಸಿದರು. ಫಿಸಿಯೋಥೆರಪಿಸ್ಟ್ ಡಾ. ಅಭಿಷೇಕ್ ಮಾತನಾಡಿ ಫಿಸಿಯೋಥೆರಪಿ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಸಂಸ್ಥೆಯ ಗೌರವಾಧ್ಯಕ್ಷೆ ಕಿರುವಾಡಿ ಗಿರಿಜಮ್ಮ, ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ್, ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಜಿ.ಸಿ. ಸದಾಶಿವಪ್ಪ, ಲೈಫ್‌ಲೈನ್ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಎಂ.ದಡ್ಡಿಕೊಪ್ಪದ್, ಸಂಸ್ಥೆಯ ಸಲಹಾ
ಮಂಡಳಿಯ ಸದಸ್ಯೆ ಡಾ. ಶಾಂತಾ ಭಟ್, ಕಾರ್ಯನಿವಾಹಕ ಅಧಿಕಾರಿ ನವೀನ್ ಹವಳಿ, ಮಹಿಳಾ ವಿಭಾಗದ ಅಧ್ಯಕ್ಷೆ ಡಾ.ಮೀರಾ ಹನಗವಾಡಿ, ಯುವ ವಿಭಾಗದ ಅಧ್ಯಕ್ಷ ಶಿವಕುಮಾರ್ ಮೇತ್ರಿ, ಸಂಸ್ಥೆಯ ಕಾರ್ಯಕಾರಿಣಿ ಮಂಡಳಿಯ ಸದಸ್ಯ ಈಶ್ವರ್ ತಳವಾರ್, ಸಂಸ್ಥೆಯ ಮಾಜಿ ಉಪಾಧ್ಯಕ್ಷ ಎ. ಎಂ. ಕೊಟ್ರೇಶ್ವರ ಮತ್ತು ಹಿಮೋಫಿಲಿಯಾ ಬಾಧಿತರು ಹಾಗೂ ಪಾಲಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net