ಸಮರ್ಪಕವಾಗಿ ಜಾರಿಯಾಗಲಿ ಒಳಮೀಸಲಾತಿ

ಚನ್ನಗಿರಿ ರಾಮ ಮನೋಹರ ಲೋಹಿಯ ಭವನದಲ್ಲಿ ಶುಕ್ರವಾರ ಒಳಮೀಸಲಾತಿ ಹೋರಾಟಗಾರರ ಸನ್ಮಾನ ಕಾರ್ಯಕ್ರಮವನ್ನು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹೆಗ್ಗರೆ ರಂಗಪ್ಪ ಉದ್ಘಾಟಿಸಿದರು. ಬಿ.ಎಚ್. ವೀರಭದ್ರಪ್ಪ, ಸಿ.ಬಸವರಾಜಪ್ಪ ಇದ್ದರು.
ಚನ್ನಗಿರಿ ರಾಮ ಮನೋಹರ ಲೋಹಿಯ ಭವನದಲ್ಲಿ ಶುಕ್ರವಾರ ಒಳಮೀಸಲಾತಿ ಹೋರಾಟಗಾರರ ಸನ್ಮಾನ ಕಾರ್ಯಕ್ರಮವನ್ನು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹೆಗ್ಗರೆ ರಂಗಪ್ಪ ಉದ್ಘಾಟಿಸಿದರು. ಬಿ.ಎಚ್. ವೀರಭದ್ರಪ್ಪ, ಸಿ.ಬಸವರಾಜಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಸಂಸ ಜಿಲ್ಲಾ ಸಂಚಾಲಕ ಹೆಗ್ಗರೆ ರಂಗಪ್ಪ ಅಭಿಮತ
  • ಒಳಮೀಸಲಾತಿ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮ
  • ಶೇ. 99ರಷ್ಟು ಮೀಸಲಾತಿ ಕೆಲಸವನ್ನು ಪೂರ್ಣ
ಚನ್ನಗಿರಿ: ಸತತ 38 ವರ್ಷಗಳ ಹೋರಾಟದ ಫಲವಾಗಿ ಮೀಸಲಾತಿ ದೊರೆತಿದೆ. ಆದರೆ ಮೀಸಲಾತಿಯನ್ನು ಸರ್ಕಾರ ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಗ್ಗರೆ ರಂಗಪ್ಪ ತಿಳಿಸಿದರು.
ಇಲ್ಲಿನ ರಾಮ ಮನೋಹರ ಲೋಹಿಯ ಭವನದಲ್ಲಿ ಶುಕ್ರವಾರ ಜಿಲ್ಲಾ ಮಾದಿಗ ಮಹಾಸಭಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಳಮೀಸಲಾತಿ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೋರಾಟದಲ್ಲಿ ಪ್ರತಿಯೊಬ್ಬರ ಪಾತ್ರವಿದೆ. ಸರ್ಕಾರ ಶೇ. 99ರಷ್ಟು ಮೀಸಲಾತಿ ಕೆಲಸವನ್ನು ಪೂರ್ಣಗೊಳಿಸಿದ್ದು, ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಜಾರಿಗೆ ತರಬೇಕಿದೆ. ಪ್ರವರ್ಗ- 1ಕ್ಕೆ ಶೇ.6, ಪ್ರವರ್ಗ- 2ಕ್ಕೆ ಶೇ.6, ಪ್ರವರ್ಗ- 3ಕ್ಕೆ ಶೇ.5 ರಷ್ಟು ಮೀಸಲಾತಿ ಪ್ರಕಟಿಸಿದೆ. ಇದರಿಂದ ಬಹುದಿನಗಳ ಬೇಡಿಕೆ ಸ್ವಲ್ಪಮಟ್ಟಿಗೆ ಈಡೇರಿದಂತಾಗಿದೆ. ಆದರೆ ಅಲೆಮಾರಿಗಳು ಮೀಸಲಾತಿಯಲ್ಲಿ ನಮಗೆ ಅನ್ಯಾಯವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದರು. ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ಮುಖ್ಯಮಂತ್ರಿಯವರು ಮೀಸಲಾತಿ ಬಗ್ಗೆ ತುಂಬ ಆಸಕ್ತಿ ಹೊಂದಿದ್ದಾರೆ. ಪರಿಣಾಮ ರಾಜ್ಯದಲ್ಲಿ ಸಮರ್ಪಕವಾಗಿ ಸಮೀಕ್ಷೆ ನಡೆದಿದೆ. ಭವಿಷ್ಯದಲ್ಲಿ ಒಳಮೀಸಲಾತಿ ಸಂಪೂರ್ಣವಾಗಿ ಜಾರಿಗೆ ಬರಲಿದೆ ಎಂದು ತಿಳಿಸಿದರು. ಮೀಸಲಾತಿ ಹೋರಾಟದಲ್ಲಿ ಭಾಗಿಯಾಗಿದ್ದ ತಾಲೂಕಿನ ನಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೇಖರಪ್ಪ, ನಿವೃತ್ತ ಶಿಕ್ಷಕ ರುದ್ರಪ್ಪ, ಮಾದಿಗ ಸಮಾಜದ ಅಧ್ಯಕ್ಷ ಎಚ್. ಪ್ರಕಾಶ್, ಆರ್. ಮಂಜಪ್ಪ, ಸಿ.ಎಚ್. ದೀಪಕ್, ರಮೇಶ್ ಹರೋನಹಳ್ಳಿ, ಮಲ್ಲೇಶಪ್ಪ, ಎ.ಕೆ. ರುದ್ರಪ್ಪ, ಸಿ.ಟಿ. ಸದಾನಂದ, ಜಿ. ರಂಗಪ್ಪ, ಸಿ.ಆರ್. ಅಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಾದಿಗ ಸಮಾಜದ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಸಿ. ಬಸವರಾಜಪ್ಪ, ಶಿವಲಿಂಗಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net