ಕೃಷಿ ಪರಿಕರ ಬೆಲೆ ಏರಿಕೆ ಖಂಡನೀಯ Protest

ಮಾಯಕೊಂಡ ರೈತ ಸಂಪರ್ಕ ಕೇಂದ್ರದ ಮುಂದೆ ಸೋಮವಾರ ರೈತರು ಪ್ರತಿಭಟನೆ ನಡೆಸಿದರು. ಅಶೋಕ್ ಗೌಡ್ರು, ರಾಮಜೋಗಿ ಪ್ರತಾಪ್, ಕುವಾರ ಸ್ವಾಮಿ, ರೇವಣಸಿದ್ದಪ್ಪ, ಹೆದ್ನೇ ಮಂಜುನಾಥ, ಬಾಡ ಹನುಮಂತಪ್ಪ ಇದ್ದರು. Protest
ಮಾಯಕೊಂಡ ರೈತ ಸಂಪರ್ಕ ಕೇಂದ್ರದ ಮುಂದೆ ಸೋಮವಾರ ರೈತರು ಪ್ರತಿಭಟನೆ ನಡೆಸಿದರು. ಅಶೋಕ್ ಗೌಡ್ರು, ರಾಮಜೋಗಿ ಪ್ರತಾಪ್, ಕುವಾರ ಸ್ವಾಮಿ, ರೇವಣಸಿದ್ದಪ್ಪ, ಹೆದ್ನೇ ಮಂಜುನಾಥ, ಬಾಡ ಹನುಮಂತಪ್ಪ ಇದ್ದರು. Protest
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್‌ಗೌಡ್ರು ಆಕ್ರೋಶ
  • ಕೃಷಿ ಅಧಿಕಾರಿಗೆ ಮನವಿ ಸಲ್ಲಿಕೆ
ಮಾಯಕೊಂಡ: ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ದರ ಏರಿಕೆ ಖಂಡಿಸಿ ಸೋಮವಾರ ರೈತ ಸಂಟನೆಯಿಂದ ಮಾಯಕೊಂಡ ರೈತ ಸಂಪರ್ಕ ಕೇಂದ್ರದ ಎದುರು ಪ್ರತಿಭಟನೆ ನಡೆಸಿ ಕೃಷಿ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. Protest
ನಂತರ ರೈತ ಸಂ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಗೌಡ್ರು ವಾತನಾಡಿ, ಸರ್ಕಾರಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಬೆಲೆ ಏರಿಕೆ ವಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ರೈತರಿಗೆ ಒಳಿತು ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದು ರೈತರನ್ನೇ ಮರೆತಿದ್ದಾರೆ ಎಂದರು.
ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. 50 ಕೆಜಿಯ ರಸಗೊಬ್ಬರಕ್ಕೆ 2000-2300 ರೂ.ಗಿಂತ ಹೆಚ್ಚಿನ ದರ ನಿಗದಿಪಡಿಸಿರುವುದು ಕೃಷಿಕರಲ್ಲಿ ನಿರುತ್ಸಾಹ ಮೂಡುವಂತೆ ಮಾಡಿದೆ ಎಂದು ಹೇಳಿದರು.
ಸೇನೆಯ ತಾಲೂಕು ಅಧ್ಯಕ್ಷ ರಾಮಜೋಗಿ ಪ್ರತಾಪ್ ವಾತನಾಡಿ, ಸ್ಥಳೀಯ ಗೊಬ್ಬರ ವ್ಯಾಪಾರಿಗಳು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಕೃಷಿ ಅಧಿಕಾರಿಗಳು ಇಂಥವರ ಮೇಲೆ ನಿಗಾ ವಹಿಸಿ, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರೈತ ಮುಖಂಡ ಅಣಬೇರು ಕುವಾರಸ್ವಾಮಿ ವಾತನಾಡಿ, ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಇಂಧನ, ಅಗತ್ಯ ವಸ್ತುಗಳ ದರ ಹೆಚ್ಚಿಸಿರುವುದು ಗ್ರಾಮೀಣ ಜನರಿಗೆ ಹೊರೆಯಾಗಲಿದೆ ಎಂದರು.
ಮನವಿ ಸ್ವೀಕರಿಸಿದ ಕೃಷಿ ಅಧಿಕಾರಿ ಕೆ. ಬೀರಪ್ಪ ವಾತನಾಡಿ, ಗೊಬ್ಬರ, ಬಿತ್ತನೆ ಬೀಜ ಮಾರಾಟ ಮಾಡುವ ಎಲ್ಲ ಅಂಗಡಿಗಳಿಗೆ ಭೇಟಿ ನೀಡಿ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ, ಹೆಚ್ಚಿನ ಹಣ ಪಡೆದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಈಗಾಗಲೇ ಸೂಚಿಸಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ರೇವಣಸಿದ್ದಪ್ಪ, ಹೆದ್ನೇ ಮಂಜುನಾಥ, ಬಾಡ ಹನುಮಂತಪ್ಪ, ಸುರೇಶ್, ಜಗದೀಶ್, ಷಣ್ಮುಖಪ್ಪ, ನಾಗಪ್ಪ, ಲೋಕೇಶ್, ಪ್ರವೀಣ್, ವೆಂಕಟೇಶ್, ಜಯ್ಯಪ್ಪ, ನಾಗರಾಜಪ್ಪ, ಮಂಜಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net