ಸಂಶೋಧನೆ, ಕೌಶಲಾಭಿವೃದ್ಧಿ ಕೇಂದ್ರ ಉದ್ಘಾಟನೆ

ದಾವಣಗೆರೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಜಿಎಂ ವಿವಿ ಸಂಶೋಧನಾ ಮತ್ತು ನಾವೀನ್ಯತೆ ಡೀನ್  ಡಾ. ಕೆ.ಎನ್. ಭರತ್ ಮಾತನಾಡಿದರು. ಕೀರ್ತಿ ಪ್ರಸಾದ್, ಡಾ. ಪ್ರಕಾಶ್ ಕೆ.ಕೆ, ಡಾ. ಶ್ವೇತಾ ಎಚ್.ಎಸ್, ಡಾ. ಟಿ.ಎಂ. ವೀರಗಂಗಾಧರ್ ಸ್ವಾಮಿ ಇದ್ದರು.
ದಾವಣಗೆರೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಜಿಎಂ ವಿವಿ ಸಂಶೋಧನಾ ಮತ್ತು ನಾವೀನ್ಯತೆ ಡೀನ್ ಡಾ. ಕೆ.ಎನ್. ಭರತ್ ಮಾತನಾಡಿದರು. ಕೀರ್ತಿ ಪ್ರಸಾದ್, ಡಾ. ಪ್ರಕಾಶ್ ಕೆ.ಕೆ, ಡಾ. ಶ್ವೇತಾ ಎಚ್.ಎಸ್, ಡಾ. ಟಿ.ಎಂ. ವೀರಗಂಗಾಧರ್ ಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಎಂಯುನಲ್ಲಿ ನಾಳೆ ಆಯೋಜನೆ
  • ಡಾ. ಕೆ.ಎನ್. ಭರತ್ ಮಾಹಿತಿ
ದಾವಣಗೆರೆ : ನಗರದ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ನೂತನ ಜಿಎಂಯು ರಿಸರ್ಚ್ ಸೆಂಟರ್, ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಗ್ರಿಕಲ್ಚರಲ್ ಆ್ಯಂಡ್ ಫುಡ್ ಬಯೋಟೆಕ್ನಾಲಜಿ, ಇಂಟೆಲ್ ಉನ್ನತಿ ಡೇಟಾ ಸೆಂಟ್ರಿಕ್ ಲ್ಯಾಬ್ ಹಾಗೂ ಟ್ಯಾಲಿ ಎಜುಕೇಶನ್ ಸೆಂಟರ್ ಉದ್ಘಾಟನಾ ಸಮಾರಂಭ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ವಿವಿ ಸಂಶೋಧನಾ ಮತ್ತು ನಾವೀನ್ಯತೆ ಡೀನ್ ಡಾ. ಕೆ.ಎನ್. ಭರತ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡದ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಯು. ಕೃಷ್ಣರಾಜ್, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಗೌರವ ಪ್ರಾಧ್ಯಾಪಕ ಪ್ರೊ. ಕೆ. ರಾಜಣ್ಣ ಭಾಗವಹಿಸುವರು ಎಂದು ತಿಳಿಸಿದರು.
ಇಂಟೆಲ್ ಕಾರ್ಪೊರೇಷನ್‌ನ ರಾಷ್ಟ್ರೀಯ ವ್ಯವಹಾರ ವ್ಯವಸ್ಥಾಪಕ ಗಿರೀಶ್ ಎಚ್, ಎಡ್‌ಗೇಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಗುರ್ಪ್ರೀತ್ ಸಿಂಗ್, ಟ್ಯಾಲಿ ಎಜುಕೇಶನ್ ಮತ್ತು ಡಿಸ್ಟ್ರಿಬ್ಯೂಷನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜಿಜಿ ಕುಮಾರ್ ಎನ್. ಹಾಗೂ ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ ಪ್ರೇಮ್‌ರಾಜ್ ಎಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಇಆರ್‌ಪಿ ನಿರ್ದೇಶಕ ಕೀರ್ತಿ ಪ್ರಸಾದ್ ಮಾತನಾಡಿ, ಜಿ.ಎಂ. ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು ಅಧ್ಯಕ್ಷತೆ ವಹಿಸಲಿದ್ದು, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಉಪ ಕುಲಪತಿ ಡಾ. ಎಂ. ವೇಣುಗೋಪಾಲ ರಾವ್ ಹಾಗೂ ಕುಲಸಚಿವ ಡಾ. ಸುನೀಲ್ ಕುಮಾರ್ ಬಿ.ಎಸ್. ಉಪಸ್ಥಿತರಿರುವರು ಎಂದು ತಿಳಿಸಿದರು.
ವಿಶ್ವವಿದ್ಯಾಲಯದಲ್ಲಿ ಸಂಶೋಧನೆ, ನಾವೀನ್ಯತೆ, ಕೌಶಲಾಭಿವೃದ್ಧಿ ಹಾಗೂ ಕೈಗಾರಿಕಾ ಸಹಭಾಗಿತ್ವವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉದ್ಯೋಗೋದ್ಯಮ ಕೌಶಲಗಳ ತರಬೇತಿ ದೊರೆಯಲಿದೆ ಎಂದು ಹೇಳಿದರು.
ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ಕೆ.ಕೆ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ನಿರ್ದೇಶಕಿ ಡಾ. ಶ್ವೇತಾ ಎಚ್.ಎಸ್, ಮಾರ್ಕೆಟಿಂಗ್ ಆ್ಯಂಡ್ ಪ್ರಮೋಷನ್ ವಿಭಾಗದ ಡೀನ್ ಡಾ. ಟಿ.ಎಂ. ವೀರಗಂಗಾಧರ್ ಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net