ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಜಗಳೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಓಬವ್ವ ಪಾತ್ರಧಾರಿ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು. ಬಿ. ದೇವೇಂದ್ರಪ್ಪ, ಕೆ.ಪಿ ಪಾಲಯ್ಯ, ಸಣ್ಣ ಸೂರಯ್ಯ, ಸೈಯದ್ ಕಲೀಂಉಲ್ಲಾ, ಕೆಂಚಪ್ಪ, ಹಾಲಮೂರ್ತಿ, ನಿಜಲಿಂಗಪ್ಪ, ಬಿ.ಮಹೇಶ್ವರಪ್ಪ ಇದ್ದರು.
ಜಗಳೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಓಬವ್ವ ಪಾತ್ರಧಾರಿ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು. ಬಿ. ದೇವೇಂದ್ರಪ್ಪ, ಕೆ.ಪಿ ಪಾಲಯ್ಯ, ಸಣ್ಣ ಸೂರಯ್ಯ, ಸೈಯದ್ ಕಲೀಂಉಲ್ಲಾ, ಕೆಂಚಪ್ಪ, ಹಾಲಮೂರ್ತಿ, ನಿಜಲಿಂಗಪ್ಪ, ಬಿ.ಮಹೇಶ್ವರಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ. ದೇವೇಂದ್ರಪ್ಪ ಹೇಳಿಕೆ
  • ಒನಕೆ ಓಬವ್ವ ಜಯಂತ್ಯುತ್ಸವ
  • ವಸ್ತುನಿಷ್ಠ ಚರಿತ್ರೆ ಅರಿವಿರಲಿ
ಜಗಳೂರು: ನಾರಿ ಶಕ್ತಿಯ ಪ್ರತೀಕವಾಗಿ ಒನಕೆ ಓಬವ್ವ ನಮಗೆ ಸ್ಫೂರ್ತಿ ಯಾಗಿದ್ದಾರೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಛಲವಾದಿ ಸಮುದಾಯದಿಂದ ಹಮ್ಮಿಕೊಂಡಿದ್ದ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ತನ್ನ ಜನರನ್ನು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯ ಎಂದಿಗೂ, ಯಾರೂ ಮರೆಯಲು ಸಾಧ್ಯವಿಲ್ಲ. ಚಿತ್ರದುರ್ಗ ಎಂದಾಕ್ಷಣ ನೆನಪಾಗುವುದೇ ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದ ವೀರ ವನಿತೆ ಒನಕೆ ಓಬವ್ವ. ಅವರ ಸಮಯಪ್ರಜ್ಞೆ ಮತ್ತು ಪರಾಕ್ರಮದಿಂದ ವೈರಿ ಸೈನಿಕರನ್ನು ಸದೆ ಬಡಿದು ಇಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ ಎಂದರು.
ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ವಸ್ತುನಿಷ್ಠ ಚರಿತ್ರೆ ಅರಿಯಬೇಕು. ಅದೇ ರೀತಿ ಉತ್ತಮ ಹಾಗೂ ಸಬಲ ಸಮಾಜ ನಿರ್ಮಾಣ ಮಾಡುವಲ್ಲಿ ಓಬವ್ವ ಅವರ ಸಾಧನೆ ಮಹತ್ವದ್ದು. ಅಜ್ಞಾನ ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ, ಹಾಗಾಗಿ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಬೇಕು ಮತ್ತು ಸಂವಿಧಾನದ ಆಶಯಗಳನ್ನು ಪಾಲಿಸಬೇಕು. ಜತೆಗೆ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಳಗ್ಗೆ 11 ಕ್ಕೆ ಬೆಸ್ಕಾಂ ಕಚೇರಿ ಮುಂಭಾಗದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಶಾಸಕ ಬಿ. ದೇವೇಂದ್ರಪ್ಪ, ಮುಖಂಡರು ಮಾಲಾರ್ಪಣೆ ಮಾಡಿದರು. ನಂತರ ಉರುಮೆ, ಕಹಳೆ ಸೇರಿ ವಿವಿಧ ಕಲಾ ತಂಡಗಳ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ತಾಲೂಕು ಪಂಚಾಯಿತಿಗೆ ತೆರಳಿತು. ಕೆಪಿಸಿಸಿ ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ, ತಾಪಂ ಮಾಜಿ ಅಧ್ಯಕ್ಷ ಸಣ್ಣಸೂರಯ್ಯ, ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ, ತಾಪಂ ಇಒ ಕೆಂಚಪ್ಪ, ಬಿಇಒ ಹಾಲಮೂರ್ತಿ, ಛಲವಾದಿ ಸಮುದಾಯದ ಅಧ್ಯಕ್ಷ ನಿಜಲಿಂಗಪ್ಪ, ನಿವೃತ್ತಿ ಅಧಿಕಾರಿ ಬಿ. ಮಹೇಶ್ವರಪ್ಪ, ಮುಖಂಡರಾದ ಸಿ. ಲಕ್ಷ್ಮಣ್, ನಾಗಲಿಂಗಪ್ಪ, ನಾಗೇಶ್, ಜಿ.ಎಚ್. ಶಂಭುಲಿಂಗಪ್ಪ, ತಾನಾಜಿ ಗೋಸಾಯಿ, ಧನ್ಯಕುಮಾರ್, ಮಾದೀಹಳ್ಳಿ ಮಂಜಪ್ಪ, ವೀರಸ್ವಾಮಿ, ಎನ್.ಟಿ. ಎರ‌್ರಿಸ್ವಾಮಿ, ಓಮಣ್ಣ, ಶಿವನಗೌಡ, ಷಂಷೀರ್ ಅಹಮದ್, ಬಸವರಾಜ್, ಅಜ್ಜಪ್ಪ ನಾಡಿಗೇರ್, ಎಂ.ಎಸ್. ಪಟೇಲ್ ಇದ್ದರು.
2 ಕೋಟಿಯಲ್ಲಿ ಸಮುದಾಯ ಭವನ
ಪಟ್ಟಣದಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಛಲವಾದಿ ಸಮುದಾಯ ಭವನ ನಿರ್ಮಿಸಲಾಗುವುದು. ಈಗಾಗಲೇ ಸಚಿವ ಮಹಾದೇವಪ್ಪ ಅವರೊಂದಿಗೆ ಚರ್ಚಿಸಲಾಗಿದ್ದು, ಹಣ ಬಿಡುಗಡೆಯಾಗಲಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು. ಇದರಿಂದ ಸಮದಾಯದವರಿಗೆ ಶುಭ, ಸಮಾರಂಭ ನಡೆಸಲು ಸಹಕಾರಿಯಾಗುತ್ತದೆ. ಕಟ್ಟಡವಾದ ಕೂಡಲೇ ಅದನ್ನು ಸದ್ಬಳಕೆ ಮಾಡಿಕೊಳ್ಳ ಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net