24 ಗಂಟೆಗಳ ಕೋಡ್ ರಶ್ ಹ್ಯಾಕಥಾನ್‌ಗೆ 300ಕ್ಕೂ ಹೆಚ್ಚು ಐಡಿಯಾಗಳು ಸಲ್ಲಿಕೆಯಾಗಿದ್ದವು. 80 ತಂಡಗಳು ಆಫ್‌ಲೈನ್ ಸುತ್ತಿಗೆ ಆಯ್ಕೆಯಾಗಿದ್ದವು. ಮಾಡೆಲ್ ಕ್ವೆಸ್ಟ್, ಸಿಟಿಎಫ್, ರೋಬೋ ರೇಸ್, ಟೆಕ್ ಥೀಸೀಸ್, ನೆಕ್ಸ್ಟ್ ವೇವ್ ಪೇಪರ್ ಪ್ರೆಸೆಂಟೇಷನ್, ಇಗ್ನಿಟೆಕ್ಸ್ ಡಿಬೇಟ್, ಮಾರ್ಕೆಟ್ ಮಾವೆರಿಕ್ಸ್, ಮೂಟ್ ಕೋರ್ಟ್ ಸ್ಪರ್ಧೆಯ ಪ್ರಾರಂಭಿಕ ಹಂತಗಳು ನಡೆದವು. ಸಂಜೆ ಗೇಮಿಂಗ್ ಅಭಿಮಾನಿಗಳನ್ನು ಒಂದೆಡೆ ಸೇರಿಸುವ ಇ-ಸ್ಪೋರ್ಟ್ಸ್ ನೈಟ್ ಉತ್ಸಾಹಭರಿತ ವಾತಾವರಣವನ್ನು ಸೃಷ್ಟಿಸಿತ್ತು.