ನೀತಿಯಿಂದ ನಡೆದರೆ ಲಭಿಸಲಿದೆ ಸದ್ಗತಿ

ಮಾಯಕೊಂಡದ ಹಿರೇ ಮದಕರಿ ನಾಯಕ ಸಮಾಧಿ ಸ್ಥಳದಲ್ಲಿ ಭಾನುವಾರ ಕನಕದಾಸ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿ.ಆರ್.ಮಹಾಂತೇಶ್, ಈಶ್ವರಪ್ಪ ಜಂತ್ಕಲ್ಲು, ಐಗೂರು ಹನುಮಂತಪ್ಪ, ಜಿ.ಎಲ್. ಸುನಿಲ್ ಇದ್ದರು.Kanakadasa Jayanti
ಮಾಯಕೊಂಡದ ಹಿರೇ ಮದಕರಿ ನಾಯಕ ಸಮಾಧಿ ಸ್ಥಳದಲ್ಲಿ ಭಾನುವಾರ ಕನಕದಾಸ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿ.ಆರ್.ಮಹಾಂತೇಶ್, ಈಶ್ವರಪ್ಪ ಜಂತ್ಕಲ್ಲು, ಐಗೂರು ಹನುಮಂತಪ್ಪ, ಜಿ.ಎಲ್. ಸುನಿಲ್ ಇದ್ದರು.Kanakadasa Jayanti
Published on

ಪ್ರಮುಖ ಮುಖ್ಯಾಂಶಗಳು

  • ಜಾತಿಗಿಂತ ನೀತಿ ಮುಖ್ಯ
  • ರಾಜ್ಯಶಾಸ್ತ್ರ ಉಪನ್ಯಾಸಕ ಬಿ.ಆರ್.ಮಹಾಂತೇಶ್ ಹೇಳಿಕೆ
  • ಕನಕದಾಸ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ
ಮಾಯಕೊಂಡ: ಉಡುಪಿ ಶ್ರೀ ಕೃಷ್ಣನ ಪರಮ ಭಕ್ತ ಕನಕದಾಸರು ಮಾನವರೆಲ್ಲ ಒಂದೇ ಎನ್ನುವ ಸಂದೇಶ ಸಾರಿದ್ದಾರೆ ಎಂದು ರಾಜ್ಯಶಾಸ್ತ್ರ ಉಪನ್ಯಾಸಕ ಬಿ.ಆರ್.ಮಹಾಂತೇಶ್ ಹೇಳಿದರು.
ಗ್ರಾಮದ ಹಿರೇ ಮದಕರಿ ನಾಯಕ ಸಮಾಧಿ ಸ್ಥಳದಲ್ಲಿ ಭಾನುವಾರ ಆಯೋಜಿಸಿದ್ದ ಕನಕದಾಸ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾರ್ಶನಿಕರು, ಚಿಂತಕರು, ಕವಿಗಳು, ಬಸವಣ್ಣನವರು ಜಾತಿಗಿಂತ ನೀತಿ ಮುಖ್ಯ. ನೀತಿಯಿಂದ ನಡೆದರೆ ಸದ್ಗತಿ ದೊರೆಯುತ್ತದೆ ಎನ್ನುವ ಸರ್ವ ಶ್ರೇಷ್ಟ ಮೌಲ್ಯಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಇವರ ಆದರ್ಶಗಳನ್ನು ಜೀವನದಲ್ಲಿ ಅಳಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು.
ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ಕನ್ನಡ ನೆಲ, ಜಲ, ನುಡಿ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲರಿಂದಾಗಬೇಕು ಎಂದು ತಿಳಿಸಿದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಈಶ್ವರಪ್ಪ ಜಂತ್ಕಲ್ಲು ಮಾತನಾಡಿ, ಸಮಾಜದಲ್ಲಿ, ಜ್ಞಾನಿಗಳ ಮೂಲಕ ಜಾತಿಯ ಸಂಕೋಲೆ ಹರಡುತ್ತಿದೆ. ಅವ ನಮ್ಮವ ಇವ ನಮ್ಮವ ಎನ್ನುವುದರೊಂದಿಗೆ ಜ್ಞಾನದ ಬಲದಿಂದ ಅಜ್ಞಾನದ ಕಡೆ ನೋಡಯ್ಯ ಎನ್ನುವ ಬಸವೇಶ್ವರರ ವಾಣಿಯಂತೆ ಜಾತಿಯ ಮೇಲೆ ಸಮಾಜ ವ್ಯವಸ್ಥೆ ನಿಂತಿದೆ. ಜಾತಿ ವ್ಯವಸ್ಥೆ ಸಂಪೂರ್ಣ ನಾಶವಾಗಿ ನಾವೆಲ್ಲ ಒಂದೇ ಎನ್ನುವ ಭಾವನೆ ಬಂದಾಗ ಮಾತ್ರ ಸಂತರು, ಶರಣರು, ದಾರ್ಶನಿಕರಿಗೆ ಗೌರವ ಸಲ್ಲುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಐಗೂರು ಹನುಮಂತಪ್ಪ ಮಾತನಾಡಿ, ಮದಕರಿ ನಾಯಕ ಸಮಾಧಿ ಸ್ಥಳದ ಜೀರ್ಣೋದ್ಧಾರಕ್ಕೆ 23 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಸಮಾಧಿ ಸ್ಥಳದ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಇದರ ಸಂಪೂರ್ಣ ಜೀರ್ಣೋದ್ಧಾರಕ್ಕೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಲೋಕೋಪಯೋಗಿ ಇಲಾಖೆ ನೀಲಿ ನಕ್ಷೆ ತಯಾರಿಸಿ ಸರ್ಕಾರಕ್ಕೆ ಕಳಿಸಿದೆ ಎಂದು ಹೇಳಿದರು.
ಮದಕರಿ ನಾಯಕ ಸಮಾಧಿ ಸ್ಥಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿ.ಎಲ್.ಸುನಿಲ್, ರಾಜಶೇಖರ್ ಸಂಡೂರು, ಜಿ.ಜಗದೀಶ್, ಗಂಗಾಧರಪ್ಪ, ಉಮಾಪತಿ, ಮಲ್ಲಪ್ಪ, ಲಿಂಗರಾಜು, ಎಂ.ಜಿ.ಗುರುನಾಥ್, ಕಂದಗಲ್ ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ಮಾಜಿ ಸೈನಿಕ ನರಗನಹಳ್ಳಿ ಶಿವಕುಮಾರ್, ಶ್ರೀಧರ್ ಬಾವಿಹಾಳು, ಗೋಣಿವಾಡ ಮಂಜುನಾಥ್ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net