ವಸತಿ ಇಲ್ಲದವರಿಗೆ ವಾತ್ಸಲ್ಯ ಯೋಜನೆಯಡಿ ಮನೆ Accommodation

ಧರ್ಮಸ್ಥಳ ಯೋಜನೆಯಡಿ ಚನ್ನಗಿರಿ ಕೆ.ಗಾಣದಕಟ್ಟೆ ಗ್ರಾಮದಲ್ಲಿ ನಿರ್ಮಿಸಿದ್ದ ವಾತ್ಸಲ್ಯ ಮನೆಯನ್ನು ಲೋಲಮ್ಮ ಎಂಬುವರಿಗೆ ಚಿತ್ರದುರ್ಗ ಜಿಲ್ಲಾ ನಿರ್ದೇಶಕ ಕಮಲಾಕ್ಷ ಹಸ್ತಾಂತರಿಸಿದರು. ರೂಪಾ ಆದರ್ಶ, ಸಿದ್ದಪ್ಪ, ಪ್ರಕಾಶ್ ಇದ್ದರು. Accommodation
ಧರ್ಮಸ್ಥಳ ಯೋಜನೆಯಡಿ ಚನ್ನಗಿರಿ ಕೆ.ಗಾಣದಕಟ್ಟೆ ಗ್ರಾಮದಲ್ಲಿ ನಿರ್ಮಿಸಿದ್ದ ವಾತ್ಸಲ್ಯ ಮನೆಯನ್ನು ಲೋಲಮ್ಮ ಎಂಬುವರಿಗೆ ಚಿತ್ರದುರ್ಗ ಜಿಲ್ಲಾ ನಿರ್ದೇಶಕ ಕಮಲಾಕ್ಷ ಹಸ್ತಾಂತರಿಸಿದರು. ರೂಪಾ ಆದರ್ಶ, ಸಿದ್ದಪ್ಪ, ಪ್ರಕಾಶ್ ಇದ್ದರು. Accommodation
Published on

ಪ್ರಮುಖ ಮುಖ್ಯಾಂಶಗಳು

  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
  • ವಾತ್ಸಲ್ಯ ಯೋಜನೆ ಅಡಿ ಮನೆ
  • ಅನಾಥ ಹಾಗೂ ವಯೋವೃದ್ಧರಿಗೆ ಮಾಸಾಶನ
ಚನ್ನಗಿರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ವಾತ್ಸಲ್ಯ ಯೋಜನೆ ಅಡಿ ಮನೆ, ನಿರ್ಗತಿಕ, ಅನಾಥ ಹಾಗೂ ವಯೋವೃದ್ಧರಿಗೆ ಮಾಸಾಶನ ಸೇರಿ ವಿವಿಧ ಸೌಲಭ್ಯ ನೀಡಲಾಗುತ್ತಿದೆ ಎಂದು ಚಿತ್ರದುರ್ಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕಮಲಾಕ್ಷ ಹೇಳಿದರು.
ದೋಣಿಹಳ್ಳಿ ವಲಯದ ಕೆ. ಗಾಣದಕಟ್ಟೆ ಗ್ರಾಮದಲ್ಲಿ ಬುಧವಾರ ಧಗ್ರಾಯೋ ಜ್ಞಾನವಿಕಾಸ  ದಡಿ ವಾತ್ಸಲ್ಯ ಮನೆ ನಿರ್ಮಿಸಿ ಬೀಗದ ಕೈಯನ್ನು  700ನೇ ಫಲಾನುಭವಿ ಲೋಲಮ್ಮನವರಿಗೆ ಹಸ್ತಾಂತರಿಸಿ ಮಾತನಾಡಿದರು.  
ತಾಲೂಕಿನಲ್ಲಿ ಸರ್ವೇ ಮೂಲಕ ಮನೆ ಇಲ್ಲದ ಫಲಾನುಭವಿಗಳ ಪಟ್ಟಿ ಪಡೆದು ಸಂಸ್ಥೆಯ ಅನುದಾನದಡಿ ಮನೆ ಕಟ್ಟಿಸಿ ಫಲಾನುಭವಿಗಳಿಗೆ   ನೀಡಲಾಗುತ್ತಿದೆ. ಜತೆಗೆ ಹಲವಾರು ಜನಪರ ಯೋಜನೆಗಳ ಮೂಲ ನಿರ್ಗತಿಕರಿಗೆ ವಸ್ತ್ರ, ಆಹಾರ ಸೇರಿ ಅನೇಕ ಸಹಕಾರ ನೀಡುತ್ತಾ ಬಂದಿದೆ ಎಂದರು.
ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಸಾಮಾಜಿಕ ಕಲ್ಯಾಣ, ಕೃಷಿಯೇತರ ವಲಯ ಗಳಲ್ಲಿ ಗುಂಪು ಆಧಾರಿತ ಜೀವನೋಪಾಯ ಚಟುವಟಿಕೆಗಳನ್ನು ಸಂಘವು ಬೆಂಬಲಿಸುತ್ತ ಬಂದಿದೆ.  ನೈರ್ಮಲ್ಯ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ ಸ್ಮಶಾನಗಳ ನಿರ್ಮಾಣ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಸಹಾಯಧನ ನೀಡುತ್ತಿದೆ ಎಂದು ತಿಳಿಸಿದರು.
ಸಂತೇಬೆನ್ನೂರು ಚಂದ್ರಮ್ಮನವರಿಗೆ ವಾತ್ಸಲ್ಯ ಯೋಜನೆಯಡಿ ಮನೆಯ ಬೀಗದ ಕೈಯನ್ನು ವಿತರಿಸಲಾಯಿತು.
ಚನ್ನಗಿರಿ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ರೂಪಾ ಆದರ್ಶ, ಎಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ, ಪ್ರಕಾಶ್, ಗ್ರಾಪಂ ಸದಸ್ಯೆ ಮೀನಾಕ್ಷಮ್ಮ, ಒಕ್ಕೂಟದ ಅಧ್ಯಕ್ಷೆ ಲಲಿತಾ, ಮೇಲ್ವಿಚಾರಕ ರವಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಯಮುನಾ, ಸೇವಾ ಪ್ರತಿನಿಧಿ ತಾರಾ, ಗೀತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net