ಈ ರಸ್ತೆಯ ಅಣತಿ ದೂರದಲ್ಲಿಯೇ ಪಿಯು, ಪ್ರಥಮದರ್ಜೆ ಕಾಲೇಜು, ನ್ಯಾಯಾಲಯ, ಆಸ್ಪತ್ರೆ, ತಾಲೂಕು ಕ್ರೀಡಾಂಗಣ ಇದೆ. ನಿತ್ಯ ಬೇರೆಡೆಯಿಂದ ಬಂದ ಸಾವಿರಾರು ಜನ ಈ ರಸ್ತೆಯಲ್ಲಿ ಓಡಾಡುತ್ತಾರೆ. ದುರ್ಗಿಗುಡಿ ಬಡಾವಣೆಯ 3 ರಿಂದ 6ನೇ ಕ್ರಾಸ್‌ನ ಎಲ್ಲರೂ ಇಲ್ಲಿಂದಲೇ ಓಡಾಡಬೇಕು. ಇಲ್ಲಿ ಸಂಚರಿಸುವರೆಲ್ಲ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.