ಆನಗೋಡು ಗ್ರಾಮಕ್ಕೆ ಸೋಮವಾರ ಎಸಿ ಸಂತೋಷ್‌ಕುಮಾರ್ ಭೇಟಿ ನೀಡಿ ಮತದಾರರ ಪಟ್ಟಿಯಂತೆ ಮ್ಯಾಪಿಂಗ್ ಮಾಡುವ ಕುರಿತು ಅಧಿಕಾರಿಗಳಿಗೆ ಸೂಚಿಸಿದರು. ಆನಗೋಡು ನಾಡಕಚೇರಿ ಉಪ ತಹಸೀಲ್ದಾರ್ ರಾಮಸ್ವಾಮಿ, ರಾಜಸ್ವ ನಿರೀಕ್ಷಕ ಬಸವರಾಜ್ ಇತರರಿದ್ದರು.
ಮಾಯಕೊಂಡ :ಮತಗಟ್ಟೆ ಮಟ್ಟದ ಬಿಎಲ್ಒಗಳು ಖುದ್ದಾಗಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಂತೆ ಮ್ಯಾಪಿಂಗ್ ಮಾಡುವ ಜತೆ ಕುಟುಂಬದ ಸದಸ್ಯರನ್ನು ತಾಳೆಹಾಕುವಂತೆ (ಪ್ರೊಜನಿ) ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಸೂಚಿಸಿದರು.
ಆನಗೋಡು ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಇಲ್ಲಿನ ಭಾಗದ ಸಂಖ್ಯೆ 60, 61 ರಲ್ಲಿನ ಮತದಾರರ ಪಟ್ಟಿಯಂತೆ ಮ್ಯಾಪಿಂಗ್ ಮಾಡುವ ಜತೆಗೆ ಆ ಕುಟುಂಬ ಸದಸ್ಯರನ್ನು ಪ್ರೊಜನಿ ಮಾಡುವ ಕುರಿತು ಅಧಿಕಾರಿಗಳಿಗೆ ತಿಳಿಸಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಸಂಖ್ಯೆ 108ರಲ್ಲಿ ಈಗಾಗಲೇ ಶೇ.97ರಷ್ಟು ಮತದಾರರ ಮ್ಯಾಪಿಂಗ್ ಕಾರ್ಯ ಮುಗಿದಿದ್ದು ಶೇಕಡ 3 ರಷ್ಟು ಬಾಕಿ ಉಳಿದಿದೆ. ಬಿಎಲ್ಒಗಳು ಮನೆಗಳಿಗೆ ಭೇಟಿ ನೀಡಿ ಸಂಕ್ಷಿಪ್ತ ಮಾಹಿತಿ ಪಡೆಯಬೇಕು ಎಂದರು.
ಬಿಎಲ್ಒಗಳು ಮನೆಗಳಿಗೆ ಬಂದಾಗ ಸಾರ್ವಜನಿಕರು ಸಹಕಾರಿಸಿ, ಮಾಹಿತಿ ಒದಗಿಸುವಂತೆ ತಿಳಿಸಿದರು.
ಮದುವೆ ಮಾಡಿ ಕೊಟ್ಟಿರುವ ಹಾಗೂ ಮದುವೆಯಾಗಿ ಬಂದಿರುವ ಹೆಣ್ಣು ಮಕ್ಕಳ 2002ರ ಮತದಾರರ ಪಟ್ಟಿಯಂತೆ ಪ್ರಸಕ್ತ 2026 ಮತದಾರರ ಪಟ್ಟಿಗೆ ಹೊಂದಾಣಿಕೆಯಾಗುವಂತೆ ಪರಿಶೀಲಿಸಿ ಪಟ್ಟಿಗೆ ಸೇರ್ಪಡೆ ಮಾಡುವುದು ಕಡ್ಡಾಯ ಎಂದು ತಿಳಿಸಿದರು.
ಆನಗೋಡು ನಾಡಕಚೇರಿ ಉಪ ತಹಸೀಲ್ದಾರ್ ರಾಮಸ್ವಾಮಿ, ರಾಜಸ್ವ ನಿರೀಕ್ಷಕ ಬಸವರಾಜ್ ಇತರರಿದ್ದರು.