ಇತಿಹಾಸ ಮರೆತವರು ಹೊಸ ಇತಿಹಾಸವನ್ನು ನಿರ್ಮಿಸಲಾರರು. ವಾಸ್ತವ ಚರಿತ್ರೆಯನ್ನು ಅರಿತು, ಅದರಿಂದ ಪ್ರೇರಣೆ ಪಡೆಯುವುದು ಅವಶ್ಯ. ಅದರಂತೆ ಓಬವ್ವ ಮುಂತಾದ ಇತಿಹಾಸ ನಿರ್ಮಿತರ ಚರಿತ್ರೆಗಳನ್ನು ಇಂದಿನ ಮಹಿಳೆಯರು ಅಧ್ಯಯನದ ಮೂಲಕ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿದರು. ನಗರಸಭೆ ಪೌರಾಯುಕ್ತ ಎಂ.ಪಿ. ನಾಗಣ್ಣ, ಆರೋಗ್ಯಾಧಿಕಾರಿ ಡಾ. ಅಬ್ದುಲ್ ಖಾದರ್, ಸಮಾಜ ಕಲ್ಯಾಣ ಇಲಾಖೆಯ ಹನುಮಂತಪ್ಪ ಲಮಾಣಿ, ಕೃಷಿ ಇಲಾಖೆಯ ನಟರಾಜ್, ಪಶು ಸಂಗೋಪನೆ ಇಲಾಖೆಯ ತಿಪ್ಪೇಸ್ವಾಮಿ, ಛಲವಾದಿ ಸಮಾಜದ ಅಧ್ಯಕ್ಷ ಡಾ. ಜಗನ್ನಾಥ್ ಇತರರು ಇದ್ದರು.