ಆಸ್ಪತ್ರೆಯ ಉಷ್ಣಾಘಾತ ವಿಭಾಗದಲ್ಲಿ 10 ಹಾಸಿಗೆಗಳ ಜತೆಗೆ ಅಗತ್ಯ ಔಷಧ, ಪರಿಕರಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಲಾಗಿದೆ. ಒಆರ್‌ಎಸ್ ಪ್ಯಾಕೆಟ್‌ಗಳು, ಐವಿ ಫ್ಲೂಯಿಡ್, ಐಸ್ ಪ್ಯಾಕ್, ಆ್ಯಂಟಿಬಯಾಟಿಕ್ ಔಷಧಗಳು, ಜ್ವರದ ಮಾತ್ರೆಗಳು, ವಾಂತಿ, ವಾಕರಿಕೆ ತಡೆಯುವ ಔಷಧಗಳನ್ನು ಇಡಲಾಗಿದೆ. ಗಂಭೀರ ಸ್ಥಿತಿಯ ರೋಗಿಗಳ ಚಿಕಿತ್ಸೆಗಾಗಿ ಐಸಿಯುನಲ್ಲಿ 2 ಹಾಸಿಗೆಗಳನ್ನು ಮೀಸಲಿಡಲಾಗಿದೆ.