ವೈದ್ಯಕೀಯ ವೆಚ್ಚ ಭರಿಸಲು ಆರೋಗ್ಯ ವಿಮೆ ಅಗತ್ಯ health insurance

ಬಸವಾಪಟ್ಟಣ ಪುಣ್ಯಸ್ಥಳದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ  ತುಮ್ಕೋಸ್ ಸದಸ್ಯರ ಗುಂಪು ಆರೋಗ್ಯ ವಿಮಾ ಯೋಜನೆ ಕಾರ್ಯಕ್ರಮದ ಉದ್ಘಾಟನೆ ವೇಳೆ  ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಎಂ.ಎನ್. ಗಂಗಾಧರಪ್ಪ, ಜಿ.ಬಿ. ವಿಜಯಕುಮಾರ್, ಟಿ.ವಿ. ರಾಜು, ಎಚ್.ಎಸ್. ಮಂಜುನಾಥ್ ಇತರರಿದ್ದರು.health insurance
ಬಸವಾಪಟ್ಟಣ ಪುಣ್ಯಸ್ಥಳದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತುಮ್ಕೋಸ್ ಸದಸ್ಯರ ಗುಂಪು ಆರೋಗ್ಯ ವಿಮಾ ಯೋಜನೆ ಕಾರ್ಯಕ್ರಮದ ಉದ್ಘಾಟನೆ ವೇಳೆ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಎಂ.ಎನ್. ಗಂಗಾಧರಪ್ಪ, ಜಿ.ಬಿ. ವಿಜಯಕುಮಾರ್, ಟಿ.ವಿ. ರಾಜು, ಎಚ್.ಎಸ್. ಮಂಜುನಾಥ್ ಇತರರಿದ್ದರು.health insurance
Published on
ಬಸವಾಪಟ್ಟಣ: ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೆಚ್ಚಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಕಾಯಿಲೆ ವೇಳೆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ತಡೆಯಲು ಆರೋಗ್ಯ ವಿಮೆ ಅತ್ಯಗತ್ಯ ಎಂದು ಚನ್ನಗಿರಿ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ತಿಳಿಸಿದರು.
ಸಮೀಪದ ಪುಣ್ಯಸ್ಥಳದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ ಹಮ್ಮಿಕೊಂಡಿದ್ದ ಸಂಘದ ಸದಸ್ಯರ ಗುಂಪು ಆರೋಗ್ಯ ವಿಮಾ ಯೋಜನೆ ಹಾಗೂ 2025-26ನೇ ಸಾಲಿನ ವಹಿವಾಟಿನ ಕುರಿತ ಸಮಾಲೋಚನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುರ್ತು ಸಂದರ್ಭದಲ್ಲಿ ವಿಮೆಯು ಸದಸ್ಯರು ಮತ್ತವರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಗುಂಪು ಆರೋಗ್ಯ ವಿಮೆ ಯೋಜನೆ ಮೂಲಕ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಆರೋಗ್ಯ ವಿಮೆ ಕೇವಲ ರಕ್ಷಣೆಯಷ್ಟೇ ಅಲ್ಲ, ಕುಟುಂಬದ ಭರವಸೆಯೂ ಹೌದು ಎಂದು ಅಭಿಪ್ರಾಯಪಟ್ಟರು.
ಸಂಘದ ಸದಸ್ಯರ ಕಲ್ಯಾಣ ಕಾರ್ಯಕ್ರಮ, ಪ್ರಸಕ್ತ ಸಾಲಿನ ವಹಿವಾಟಿನ ಪ್ರಗತಿ ಪರಿಶೀಲನೆ ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಯಿತು.
ಆಡಳಿತ ಮಂಡಳಿಯ ಸದಸ್ಯರಾದ ಎಂ.ಎನ್. ಗಂಗಾಧರಪ್ಪ, ಜಿ.ಬಿ. ವಿಜಯ ಕುಮಾರ್, ಟಿ.ವಿ. ರಾಜು, ಎಚ್.ಎಸ್. ಮಂಜುನಾಥ್, ಎಂ. ಮಂಜುನಾಥ್, ಕೆ.ಎನ್. ಪ್ರಭುಲಿಂಗಪ್ಪ, ಜಿ.ಆರ್. ಶಿವಕುಮಾರ್, ಬಿ.ಎಸ್. ಬಸವರಾಜ್, ಎಂ.ಇ. ಮೀನಾಕ್ಷಿ, ಎಲ್.ವಿ. ಶೋಭಾ, ಬಿ. ಚನ್ನಬಸಪ್ಪ, ಕೆ.ಜಿ. ಓಂಕಾರಮೂರ್ತಿ, ಲೋಕೇಶ್ವರ, ಎಸ್. ರಘು, ಡಿ.ಎಸ್. ಪ್ರಸನ್ನ, ಎ.ಜೆ. ಜಗದೀಶ್, ಎನ್.ಎಸ್. ಸಿದ್ದಯ್ಯ, ಜಿ.ಎಂ. ತಿಪ್ಪೇಸ್ವಾಮಿ, ಕೆ.ಆರ್. ಕಿರಣ್, ಅನಿಲ್, ಶಿವಕುಮಾರ್, ಮುರ್ತುಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net