ಶ ಪರಿಹಾರ ಪಡೆಯಬಹುದು ಎಂದರು.
ಮಕ್ಕಳಿಗೆ ಭಾಗಾಂಶ, ದಾನಪತ್ರ, ಉಯಿಲು ಇತರ ದಾಖಲೆಗಳನ್ನು ವರ್ಗಾವಣೆ ಮಾಡಿದ ಬಳಿಕವೂ ಸೂಕ್ತ ಪೋಷಣೆ, ರಕ್ಷಣೆ ಸಿಗದಿದ್ದಲ್ಲಿ ಉಪ ವಿಭಾಗಾಧಿಕಾರಿ ಬಳಿ ಸಮಸ್ಯೆ ತಿಳಿಸಿ ನಂತರ ಸೂಕ್ತ ದಾಖಲೆಗಳನ್ನು ರದ್ದು ಮಾಡಿಸಬಹುದು. ಬಾಡಿಗೆದಾರರು ಮನೆ ಬಿಡದಿದ್ದಾಗ ಕರ್ನಾಟಕ ಬಾಡಿಗೆ ಕಾಯ್ದೆ ಅಡಿ ಹಿರಿಯ ನಾಗರಿಕರಿಗೆ ಸಹಾಯ ಸಿಗಲಿದೆ ಎಂದು ವಿವರಿಸಿದರು.
ಪಾಲಕರ ಪೋಷಕರ ಸಂರಕ್ಷಣಾ ಕಾಯ್ದೆ-2007ರ ಅಡಿ ಹಿರಿಯ ನಾಗರಿಕರಿಗೆ ಸಲ್ಲಿಸಬಹುದಾದ ಕೆಲಸಗಳ ಬಗ್ಗೆ ನಿರ್ದೇಶನವಿದೆ. ಆಯಾ ಠಾಣೆ ವ್ಯಾಪ್ತಿಯಲ್ಲಿರುವ ವೃದ್ಧರ ಬಗ್ಗೆ ಠಾಣಾಧಿಕಾರಿ ನಿಗಾ ವಹಿಸಿ ರಿಜಿಸ್ಟರ್ ನಿರ್ವಹಣೆ ಮಾಡಬೇಕಿದೆ. ಅವರ ಸಮಸ್ಯೆಗಳು, ಅನುಕೂಲತೆ ಕುರಿತು ಸಭೆ ನಡೆಸಬೇಕು ಎಂದು ಹೇಳಿದರು.
ವೃದ್ಧಾಶ್ರಮಗಳನ್ನು ತೆರೆದು ಅನುದಾನ ನೀಡಿ ವೃದ್ಧರಿಗೆ ರಕ್ಷಣೆ, ವೈದ್ಯಕೀಯ ನೆರವು ಕಲ್ಪಿಸುವುದು ಹಾಗೂ ದೀರ್ಘಕಾಲೀನ ಕಾಯಿಲೆಗಳಿದ್ದಲ್ಲಿ ಚಿಕಿತ್ಸೆ ನೀಡುವುದೂ ಸಹ ಸರ್ಕಾರದ ಜವಾಬ್ದಾರಿಯಾಗಿದೆ. ಸವಲತ್ತು ಪಡೆಯಲು ವೃದ್ಧರಿಗೆ ಪ್ರತ್ಯೇಕ ಸರದಿಯಲ್ಲಿ ನಿಲ್ಲಲು ಅವಕಾಶ ಕಲ್ಪಿಸಬೇಕಿದೆ ಎಂದು ತಿಳಿಸಿದರು.
ಮಹಿಳೆಯರು, ಮಕ್ಕಳ ಕಳ್ಳಸಾಗಣೆ ಬಗ್ಗೆಯೂ ಜನರು ಎಚ್ಚರ ವಹಿಸಬೇಕು. ಕೆಲವರು ಹೆಣ್ಣುಮಕ್ಕಳನ್ನು ಪುಸಲಾಯಿಸಿ ಮದುವೆ ಮಾಡಿಕೊಂಡು ಹಣಕ್ಕಾಗಿ ಮಾರುವ, ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುವ ಪ್ರಕರಣಗಳು ವರದಿಯಾಗುತ್ತಿವೆ. ಪ್ರವಾಸೋದ್ಯಮ ತಾಣಗಳಲ್ಲಿ ಈ ಕೃತ್ಯಗಳು ಹೆಚ್ಚಿದ್ದು ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ಕಾರ್ಮಿಕ ಇಲಾಖೆ ಸಹಾಯಕ ಅಧಿಕಾರಿ ಪ್ರಸನ್ನಕುಮಾರ್ ಮಾತನಾಡಿ ಗ್ಯಾರೇಜ್, ಹೋಟೆಲ್‌ಗಳಲ್ಲಿ ದುಡಿಮೆ ಮಾಡುತ್ತಿದ್ದ8 ಮಕ್ಕಳನ್ನು ಈ ವರ್ಷದಲ್ಲಿ ರಕ್ಷಣೆ ಮಾಡಲಾಗಿದ್ದು ಮಾಲೀಕರಿಗೆ ದಂಡ ವಿಧಿಸಲಾಗಿದೆ. ಜೆಎಂಎಫ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದರು.
ಡಿಡಿಪಿಐ ಜಿ. ಕೊಟ್ರೇಶಪ್ಪ ಮಾತನಾಡಿ ಹಿರಿಯರನ್ನು ತಾತ್ಸಾರ ಮಾಡಿದರೆ ಮುಂದಿನ ದಿನದಲ್ಲಿ ಮಕ್ಕಳಿಗೂ ಅದೇ ಕೀಲಿಕೈ ಆಗಲಿದೆ ಎಂಬ ಎಚ್ಚರ ಎಲ್ಲರಲ್ಲೂ ಇರಬೇಕು. ಮಕ್ಕಳಲ್ಲಿ ಉತ್ತಮ ಮನೋಭಾವ ಮೂಡಿಸಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಪನಿರ್ದೇಶಕ ರಾಜಾನಾಯ್ಕ, ಜಿಲ್ಲಾ ನಿರೂಪಣಾಧಿಕಾರಿ ಗುರುಪ್ರಸಾದ್, ಜಿಲ್ಲಾ ವಿಕಲಚೇತನರ ಅಧಿಕಾರಿ ಡಾ.ಕೆ.ಕೆ ಪ್ರಕಾಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ, ಪೂರ್ಣಿಮಾ ಇದ್ದರು.